HEALTH TIPS

ಮುಸ್ಲಿಂ ಉದ್ಯಮಿಯಿಂದ ತಿರುಪತಿ ದೇವಸ್ಥಾನಕ್ಕೆ ₹1 ಕೋಟಿ ದೇಣಿಗೆ

 

             ಹೈದರಾಬಾದ್‌: ತಿರುಪತಿ ವೆಂಕಟೇಶ್ವರ ಸ್ವಾಮಿಯ ಭಕ್ತರಾಗಿರುವ ಚೆನ್ನೈನ ಉದ್ಯಮಿ ಅಬ್ದುಲ್‌ ಘನಿ ಎಂಬುವವರು ದೇವಸ್ಥಾನಕ್ಕೆ ಮಂಗಳವಾರ ₹1.02 ಕೋಟಿ ದೇಣಿಗೆ ನೀಡಿದ್ದಾರೆ.

                ಪತ್ನಿ ಸುಬೀನಾ ಬಾನು ಮತ್ತು ಮಕ್ಕಳೊಂದಿಗೆ ಮಂಗಳವಾರ ದೇವರ ದರ್ಶನ ಪಡೆದ ಘನಿ ಅವರು ತಿರುಪತಿ ದೇವಸ್ಥಾನದ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಪದ್ಮಾವತಿ ವಿಶ್ರಾಂತಿ ಗೃಹಕ್ಕೆ ಪೀಠೋಪಕರಣ ಹಾಗೂ ಪಾತ್ರೆಗಳನ್ನು ಖರೀದಿಸಲು ₹87 ಲಕ್ಷ ಹಾಗೂ ಎಸ್‌.ವಿ.ಅನ್ನಪ್ರಸಾದಂ ಟ್ರಸ್ಟ್‌ಗೆ ₹15 ಲಕ್ಷ ಒದಗಿಸಿದರು.

ತಿರುಪತಿ ತಿರುಮಲ ದೇವಾಲಯ ಸಮಿತಿಯ ಅಧಿಕಾರಿಯೊಬ್ಬರಿಗೆ ಘನಿ ಕುಟುಂಬದವರು ಈ ಮೊತ್ತದ ಡಿ.ಡಿ ಹಸ್ತಾಂತರಿಸಿದರು.

                  'ವೆಂಕಟೇಶ್ವರ, ಅಲ್ಲಾ, ಏಸು ಎಲ್ಲರೂ ಒಂದೇ ಎಂದು ನಂಬಿದ್ದೇನೆ. ನಾನು ವೆಂಕಟೇಶ್ವರ ಸ್ವಾಮಿಯ ಭಕ್ತ. ಸುಮಾರು 25 ವರ್ಷಗಳಿಂದ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದೇನೆ' ಎಂದು ಘನಿ 'ಪ್ರಜಾವಾಣಿ'ಗೆ ತಿಳಿಸಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries