HEALTH TIPS

ಡಿ. 24ರಿಂದ ಬೇಕಲ ಅಂತರಾಷ್ಟ್ರೀಯ ಬೀಚ್ ಉತ್ಸವ-ಸ್ವಾಘತ ಸಮಿತಿ ರಚನಾ ಸಭೆ         ಕಾಸರಗೋಡು: ಬೇಕಲ ಅಂತಾರಾಷ್ಟ್ರೀಯ ಬೀಚ್ ಉತ್ಸವವನ್ನು ಕಾಸರಗೋಡು ಹಾಗೂ ಹೊರ ಜಿಲ್ಲೆಗಳ ಪ್ರವಾಸಿಗರನ್ನು ಸೆಳೆಯುವ ಸಾಂಸ್ಕøತಿಕ ಉತ್ಸವವನ್ನಾಗಿ ಮಾಡಲಾಗುವುದು ಎಂದು ಶಾಸಕ ಸಿ.ಎಚ್. ಕುಞಂಬು ತಿಳಿಸಿದ್ದಾರೆ. ಅವರು ಬೇಕಲ್ ಬೀಚ್ ಉತ್ಸವದ ಸಂಘಟನಾ ಸಮಿತಿ ರಚನಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಡಿ.24ರಂದು ಆರಂಭವಾಗುವ ಮೇಳದಲ್ಲಿ ಕಲಾ-ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ. ರಾಷ್ಟ್ರಮಟ್ಟದ ಹೆಸರಾಂತ ಕಲಾವಿದರಿಂದ ಕಲಾ ಕಾರ್ಯಕ್ರಮಗಳು, ಜಿಲ್ಲೆಯ ಕಲೆ ಮತ್ತು ಸಂಸ್ಕೃತಿ ಕಾರ್ಯಕರ್ತರಿಂದ ಕಾರ್ಯಕ್ರಮಗಳು ಮತ್ತು ಕುಟುಂಬಶ್ರೀ ಕಾರ್ಯಕರ್ತರು ಪ್ರಸ್ತುತಪಡಿಸುವ ಕಾರ್ಯಕ್ರಮಗಳು ಹತ್ತು ದಿನಗಳ ಕಾಲ  ಮೂರು ವೇದಿಕೆಗಳಲ್ಲಿ ನಡೆಯಲಿವೆ. ಕುಟುಂಬಶ್ರೀ ನಡೆಸುವ ಫುಡ್ ಕೋರ್ಟ್, ಆಹಾರ ಮೇಳ, ಪ್ರದರ್ಶನ ಮತ್ತು ಮಾರುಕಟ್ಟೆ ಮಳಿಗೆಗಳು ಇರುತ್ತವೆ. ಒಂದು ಕೋಟಿಗೂ ಮಿಕ್ಕಿ ವೆಚ್ಚವಾಗುವ ನಿರೀಕ್ಷೆಯಿದೆ. ಉತ್ಸವವು ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಉತ್ತೇಜನ ನೀಡುವುದರ ಜೊತೆಗೆ ಧಾರ್ಮಿಕ ಸಾಮರಸ್ಯದ ಸಂದೇಶವನ್ನು ಸಾರಲಿದೆ.  ಸಂಜೆ 5ರಿಂದ ರಾತ್ರಿ 10ರವರೆಗೆ ಕಲಾ ಸಾಂಸ್ಕøತಿಕ ಕಾರ್ಯಕ್ರಮ, ಹೊಸ ವರ್ಷದ ದಿನದಂದು ಮಧ್ಯರಾತ್ರಿ 12 ಗಂಟೆಯವರೆಗೆ ಕಾರ್ಯಕ್ರಮಗಳು ನಡೆಯಲಿವೆ. ಕಾರ್ಯಕ್ರಮದ ಅಂಗವಾಗಿ ಬೇಕಲಕೋಟೆಯನ್ನೊಳಗೊಂಡ ಕರಾವಳಿ ಮತ್ತು ಸುತ್ತಮುತ್ತ ದೀಪಾಲಂಕಾರ ನಡೆಸಲಾಗುವುದು.
           ಬೀಚ್ ಉತ್ಸವಕ್ಕೆ ಟಿಕೆಟ್‍ದರ ವಯಸ್ಕರಿಗೆ 50 ಮತ್ತು ಮಕ್ಕಳಿಗೆ 25 ರೂ. ನಿಗದಿಪಡಿಸಲಾಗಿದ್ದು, ಆನ್‍ಲೈನ್ ಟಿಕೆಟ್‍ಗಳು ಸಹ ಲಭ್ಯವಿರುತ್ತವೆ. ಉತ್ಸವದ ನಿರ್ವಹಣೆಯ ಜವಾಬ್ದಾರಿಯನ್ನು ಬಿಆರ್‍ಡಿಸಿ ಹೊಂದಿದೆ. ಜಿಲ್ಲೆಯ ಬಿಆರ್‍ಡಿಸಿ, ಡಿಟಿಪಿಸಿ, ಕುಟುಂಬಶ್ರೀ ಮತ್ತು ಸ್ಥಳೀಯಾಡಳಿತ ಸಂಸ್ಥೆಗಳು ಬೀಚ್ ಫೆಸ್ಟ್ ನಡೆಸುತ್ತಿವೆ. ಮೇಳಕ್ಕೆ ವಿವಿಧ ಇಲಾಖೆಗಳ ಸಹಕಾರವೂ ಇರುತ್ತದೆ.
           ಕಾರ್ಯಕ್ರಮದ ಯಶಸ್ವಿಗಾಗಿ ಶಾಸಕ ಸಿ.ಎಚ್.ಕುಞಂಬು ಅಧ್ಯಕ್ಷರಾಗಿರುವ 1001 ಸದಸ್ಯರನ್ನೊಳಗೊಂಡ ಸಂಘಟನಾ ಸಮಿತಿ ರಚಿಸಲಾಯಿತು.
           ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್ ಚಂದ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಪಿ. ಬೇಬಿ ಬಾಲಕೃಷ್ಣನ್, ಉಪಾಧ್ಯಕ್ಷ ಶಾನವಾಜ್ ಪಾದೂರು, ಎಡಿಎಂಎಕೆ. ರಾಮೇಂದ್ರನ್, ಕಾಞಂಗಾಡು ಬ್ಲಾಕ್ ಪಂಚಾಯತ್ ಅಧ್ಯಕ್ಷ ಕೆ. ಮಣಿಕಂಠನ್, ಕಾರಡ್ಕ ಬ್ಲಾಕ್ ಪಂಚಾಯತ್ ಅಧ್ಯಕ್ಷ ಸಿ.ಜಿ.ಮ್ಯಾಥ್ಯೂ, ಕಾಞಂಗಾಡು ನಗರಸಭೆ ಅಧ್ಯಕ್ಷೆ ಕೆ.ವಿ.ಸುಜಾತ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕುಮಾರನ್ ಪನಾಯಾಲ್, ಸಿ.ಕೆ. ಅರವಿಂದಾಕ್ಷನ್, ಪಿ. ಲಕ್ಷ್ಮಿ, ಮುರಳಿ, ಎಂ. ಧನ್ಯ, ಟಿ.ಶೋಭಾ ಮುಂತಾದವರು ಉಪಸ್ಥಿತರಿದ್ದರು. 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


Qries