HEALTH TIPS

ರಾತ್ರಿ 9 ಗಂಟೆಗೆ ಶಾಲೆಯಿಂದ ಮರಳಿದ ಪುತ್ರಿ: ರಜೆ ನೀಡದೆ ಪರದಾಟ: ಮತ್ತೆ ವಿವಾದದಲ್ಲಿ ಎರ್ನಾಕುಳಂ ಜಿಲ್ಲಾಧಿಕಾರಿ


          ಕಾಕ್ಕನಾಡು: ತೃಕ್ಕಾಕರ ನಗರಸಭೆಯ ‘ಓಣಂಫೆಸ್ಟ್’ ಸಮಾರೋಪ ಸಮಾರಂಭದ ದಿನ ಸ್ಥಳೀಯ ರಜೆ ಘೋಷಿಸದ ಜಿಲ್ಲಾಧಿಕಾರಿ ಕ್ರಮದ ವಿರುದ್ಧ ತೀವ್ರ ಟೀಕೆ ವ್ಯಕ್ತವಾಯಿತು. ಜಿಲ್ಲಾಧಿಕಾರಿ ಡಾ. ರೇಣು ರಾಜ್ ವಿರುದ್ಧ ಆರೋಪ ಮಾಡಲಾಗಿದೆ. ಭಾರೀ ಮಳೆಯಿಂದಾಗಿ ಜಿಲ್ಲೆಯ ಶಿಕ್ಷಣ ಸಂಸ್ಥೆಗಳಿಗೆ ತಡವಾಗಿ ರಜೆ ಘೋಷಿಸಿದ ಜಿಲ್ಲಾಧಿಕಾರಿ ಕ್ರಮದ ನಂತರ ಓಣಂ ಆಚರಣೆಗೆ ಸಂಬಂಧಿಸಿದಂತೆ ರಜೆ ಘೋಷಣೆ ಮಾಡದಿರುವುದೂ ಇದೀಗ ವಿವಾದಕ್ಕೆ ಕಾರಣವಾಗಿದೆ.
             ತೃಕ್ಕಾಕರ ನಗರಸಭೆಯಲ್ಲಿ ಓಣಂ ಹಬ್ಬದ ಅಂತ್ಯಕ್ಕೆ ಸಂಬಂಧಿಸಿದಂತೆ ಪ್ರತಿ ವರ್ಷ ರಜೆ ಘೋಷಿಸಲಾಗುತ್ತದೆ. ಆದರೆ ಈ ಬಾಗಿದ್ದಿರಲಿಲ್ಲ. ಸ್ಥಳೀಯ ರಜೆ ಘೋಷಿಸದ ಕಾರಣ ಶಾಲೆಗಳಿಗೆ ಕೆಲಸದ ದಿನವಾಗಿತ್ತು. ಆದರೆ ಟ್ರಾಫಿಕ್ ಜಾಮ್ ಕಾರಣ ಸಂಜೆ ವೇಳೆಗೆ ಬಸ್ ಗಳನ್ನು ನಿಲ್ಲಿಸಲಾಯಿತು. ಎರ್ನಾಕುಳಂ ಸೌತ್ ಬಾಲಕಿಯರ ಶಾಲೆಯ ಒಂಬತ್ತನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು 4 ಗಂಟೆಗೆ ಶಾಲೆ ಬಿಟ್ಟವಳು ರಾತ್ರಿ 9 ಗಂಟೆಗೆ ಮನೆಗೆ ಬಂದಿದ್ದಾಳೆ ಎಂದು ತೃಕಕ್ಕರ ಮುನ್ಸಿಪಲ್ ಕಾಪೆರ್Çರೇಷನ್‍ಗೆ ಪಾಲಕರೊಬ್ಬರು ದೂರು ನೀಡಿದ್ದಾರೆ.
           ಬಸ್ಸುಗಳು ಸಂಚರಿಸದ ಕಾರಣ ರಾತ್ರಿವರೆಗೂ ಬಸ್ ನಿಲ್ದಾಣದಲ್ಲಿ ಮಗಳು ಒಬ್ಬಳೇ ನಿಂತಿದ್ದಳು  ಎಂದು ಮತ್ತೊಬ್ಬ ಪೋಷಕರು ದೂರಿದ್ದಾರೆ. ಆದರೆ ತ್ರಿಕ್ಕಾಕರ ನಗರಸಭೆ ಅಧ್ಯಕ್ಷೆ ಅಜಿತಾ ತಂಕಪ್ಪನವರ ಪ್ರತಿಕ್ರಿಯೆಯಂತೆ,  ರಜೆ ಮಂಜೂರು ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಹಲವು ಬಾರಿ ತಿಳಿಸಿದ್ದರೂ ಮೌಖಿಕವಾಗಿ ಬಿಟ್ಟರೆ ರಜೆ ನೀಡುವುದಾಗಿ ಅಧಿಕೃತವಾಗಿ ಘೋಷಿಸಿಲ್ಲ ಎಂದಿರುವರು.
           ತೃಕಕ್ಕರ ನಗರಸಭೆ ನೇತೃತ್ವದಲ್ಲಿ ‘ಓಣಂ ಫೆಸ್ಟ್’ ಸಮಾರೋಪದಲ್ಲಿ ನಡೆದ ಮೆರವಣಿಗೆಯಲ್ಲಿ ಕಾಕ್ಕನಾಡು ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಲವು ಶಾಲೆಗಳ ವಿದ್ಯಾರ್ಥಿಗಳು ಸಿಲುಕಿಕೊಂಡರು.
     ಕಳೆದ ಗುರುವಾರ ಸಂಜೆ 4 ಗಂಟೆ ಸುಮಾರಿಗೆ ಚೆಂಬುಮುಕ್‍ನಿಂದ ಮೆರವಣಿಗೆ ಆರಂಭವಾಯಿತು. ಆದರೆ ಅದಕ್ಕೂ ಮುನ್ನವೇ ಸಿಲ್ವರ್ ಲೈನ್ ರಸ್ತೆ ಸೇರಿದಂತೆ ಪ್ರದೇಶಗಳಲ್ಲಿ ಜನ ಜಮಾಯಿಸಿದ್ದರು. ಭಾರೀ ಟ್ರಾಫಿಕ್ ಜಾಮ್ ಆಗಲಿದೆ ಎಂದು ಮೊದಲೇ ತಿಳಿದ ಖಾಸಗಿ ಬಸ್ ನಿರ್ವಾಹಕರು ಕಾಕ್ಕನಾಡು ಭಾಗಕ್ಕೆ ಸಂಚಾರ ಸ್ಥಗಿತಗೊಳಿಸಿದ್ದರು. ಇದರಿಂದ ಶಾಲೆ ಬಿಟ್ಟ ಬಳಿಕ ಬಸ್‍ಗಾಗಿ ಕಾಯುತ್ತಿದ್ದ ವಿದ್ಯಾರ್ಥಿಗಳು ಪರದಾಡುವಂತಾಯಿತು.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries