HEALTH TIPS

ಮಕ್ಕಳಿಗೆ ಬೆಂಗಾವಲು ನೀಡಿದ್ದ ಪೋಷಕನ ವಿರುದ್ದ ಪೋಲೀಸರಿಂದ ಪ್ರಕರಣ ದಾಖಲು: ಇದು ವೈರಲ್ ಆಗಬೇಕಾಗಿದ್ದರೆ, ರೇ-ಬಾನ್ ಕನ್ನಡಕವನ್ನು ಧರಿಸಿಕೊಳ್ಳುತ್ತಿದ್ದೆ: ತನ್ನ ಏರ್‍ಗನ್ ಗೆ ನಾಯಿ ಸಾಯದು: ಪ್ರಕರಣ ದಾಖಲು ಸರಿಯಲ್ಲ; ಸಮೀರ್


             ಕಾಸರಗೋಡು: ಬೀದಿನಾಯಿಗಳಿಂದ ರಕ್ಷಿಸಲು ಮದರಸಾ ವಿದ್ಯಾರ್ಥಿಗಳಿಗೆ ಬಂದೂಕು ಹಿಡಿದು ಬೆಂಗಾವಲು ಮಾಡಿ ಘಟನೆಯಲ್ಲಿ ಪೋಷಕರ ವಿರುದ್ಧ ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬೇಕಲ ಹದ್ದದ್ ನಗರದ ಸಮೀರ್ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ. ಸಮೀರ್ ವಿರುದ್ಧ ಐಪಿಸಿ 153ರ ಅಡಿಯಲ್ಲಿ ಗಲಭೆ/ ಭಯ ಯತ್ನ ಎಸಗಿದ ಪ್ರಕರಣವಾಗಿದೆ. ಆದರೆ ಪ್ರಕರಣ ಸರಿಯಲ್ಲ ಎಂದು ಸಮೀರ್ ಪ್ರತಿಕ್ರಿಯಿಸಿದ್ದಾರೆ.
             ಏರ್ ಗನ್ ಬಳಸಿದ್ದಕ್ಕೆ ದಾಖಲಾಗಿರುವ ಪ್ರಕರಣ ಸರಿಯಲ್ಲ. ಗಲಭೆ ಸೃಷ್ಟಿಸಲು ಯತ್ನಿಸಿದ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ. ಆದರೆ ನಾಯಿ ತನ್ನ ಏರ್ ಗನ್ ನಿಂದ ಶೂಟ್ ಮಾಡಿದರೆ ಸಾಯುವುದಿಲ್ಲ. ತಾನು ಯಾವ ರೀತಿಯ ಗಲಭೆಯನ್ನು ಸೃಷ್ಟಿಸಬಲ್ಲೆ ಎಂಬ ಬಗ್ಗೆ ಕೇಳುತ್ತೇನೆ? ಮಕ್ಕಳನ್ನು ರಕ್ಷಿಸುವುದು ಪೋಷಕರ ಕರ್ತವ್ಯ. ಮಕ್ಕಳು ಮದ್ರಸಕ್ಕೆ ಹೋಗುವುದು ಕಷ್ಟವಾದಾಗ ಅಲ್ಲಿಗೆ ಸುರಕ್ಷಿತವಾಗಿ ಕರೆದೊಯ್ಯುವ ಜವಾಬ್ದಾರಿ ತನಗಿದೆ ಎಂದವರು ಹೇಳಿರುವರು.  
            ಏರ್ ಗನ್ ನೊಂದಿಗೆ ಸಾಗುವ  ವಿಡಿಯೋ ಶೇರ್ ಮಾಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಬೇಕೆಂದಲ್ಲ. ವೈರಲ್ ಆಗಲು ಬಯಸಿದ್ದರೆ, ತಾನು ಉತ್ತಮ ಬಟ್ಟೆಗಳನ್ನು ಧರಿಸಿ ರೇ-ಬಾನ್ ಕನ್ನಡಕವನ್ನು ಹಾಕಿ ತಿರುಗುತ್ತಿದೆ. ಪೆÇಲೀಸರು ತೆಗೆದುಕೊಂಡಿರುವ ಪ್ರಕರಣವನ್ನು ಎಂದಿಗೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಸಮೀರ್ ಹೇಳಿದ್ದಾರೆ.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries