HEALTH TIPS

ಕೋಟ್ಯಂತರ ರೂಪಾಯಿ ಅಕ್ರಮ ವಹಿವಾಟು: ಜರ್ಮನಿಗೆ ಎಸ್ಕೇಪ್​ ಆಗಿದ್ದ ಬಿಷಪ್ ಪೊಲೀಸರ ಬಲೆಗೆ! ​

       ಮುಂಬೈ: ಕೋಟ್ಯಂತರ ರೂಪಾಯಿ ಅಕ್ರಮ ಎಸಗಿ ಜರ್ಮನಿಗೆ ಎಸ್ಕೇಪ್​ ಆಗಿದ್ದ ಚರ್ಚ್​ ಆಫ್​ ನಾರ್ಥ್​ ಇಂಡಿಯಾದ ಬಿಷಪ್​ ಪಿ.ಸಿ.ಸಿಂಗ್​ ಅವರನ್ನು ಆರ್ಥಿಕ ಅಪರಾಧಗಳ ವಿಭಾಗದ ತನಿಕಾಧಿಕಾರಿಗಳು (EOW) ಬಂಧಿಸಿದ್ದಾರೆ.

                  ಜರ್ಮನಿಯಲ್ಲಿದ್ದ ಬಿಷಪ್​ ಭಾರತಕ್ಕೆ ಆಗಮಿಸುತ್ತಿದ್ದಾರೆ ಎಂಬ ಮಾಹಿತಿ ಅರಿತ ತಕ್ಷಣ ಕಾರ್ಯಪ್ರವೃತ್ತರಾದ ತನಿಖಾಧಿಕಾರಿಗಳು ಮಹಾರಾಷ್ಟ್ರದ ನಾಗ್ಪುರ ವಿಮಾನ ನಿಲ್ದಾಣದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಭಾರತಕ್ಕೆ ಆಗಮಿಸುತ್ತಿರುವ ಕುರಿತು ಮಾಹಿತಿ ಸಿಗುತ್ತಲೇ ಈ ಕುರಿತು ಅಧಿಕಾರಿಗಳು ಮಹಾರಾಷ್ಟ್ರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸದ್ಯ ಅವರನ್ನು ಅರೆಸ್ಟ್​ ಮಾಡಿ ಜಬಲ್​ಪುರಕ್ಕೆ ಕರೆದೊಯ್ಯಲಾಗಿದೆ.

                  ಅಕ್ರಮ ಹಣ ಸಂಪಾದನೆ ಕುರಿತು ಬಿಷಪ್​ ವಿರುದ್ಧ ದೂರುಗಳು ಬಂದ ಹಿನ್ನೆಲೆಯಲ್ಲಿ ಇದೇ 8ರಂದು ಮಧ್ಯಪ್ರದೇಶದ ಆರ್ಥಿಕ ಅಪರಾಧ ವಿಭಾಗವು ಬಿಷಪ್​ ಸಿಂಗ್ ಅವರ ನಿವಾಸದ ಮೇಲೆ ದಾಳಿ ನಡೆಸಿತ್ತು. ಬಿಷಪ್ ಸಿಂಗ್ ಅವರು ಅಧ್ಯಕ್ಷರಾಗಿದ್ದ ಸೊಸೈಟಿಯಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಲಾಗಿತ್ತು. ದಾಳಿಯ ಸಮಯದಲ್ಲಿ 1.65 ಕೋಟಿ ರೂ. ನಗದು ಮತ್ತು 18,000 ಡಾಲರ್​ ಹಣ ಪತ್ತೆಯಾಗಿತ್ತು. ಜತೆಗೆ, ಚರ್ಚ್​ನ ಟ್ರಸ್ಟ್​ಗಳ ಗುತ್ತಿಗೆ ನವೀಕರಣ, ತೆರಿಗೆ ಪಾವತಿ ಮಾಡದಿರುವುದು, 17 ಆಸ್ತಿ ದಾಖಲೆಗಳು, 48 ಬ್ಯಾಂಕ್ ಖಾತೆಗಳು ಮತ್ತು 8 ಕಾರುಗಳು ಪತ್ತೆಯಾಗಿದ್ದವು.

                ತಮ್ಮ ವಿರುದ್ಧ ಕೇಸ್​ ದಾಖಲಾಗಿದೆ ಎಂದು ತಿಳಿಯುತ್ತಲೇ ಅವರು ಜರ್ಮನಿಗೆ ಎಸ್ಕೇಪ್​ ಆಗಿದ್ದರು. ಇದೀಗ ಸಿಕ್ಕಿಬಿದ್ದಿದ್ದಾರೆ. 2004-05 ಮತ್ತು 2011-12 ರ ನಡುವೆ ವಿದ್ಯಾರ್ಥಿಗಳ ಶುಲ್ಕವಾಗಿ ಸಂಗ್ರಹಿಸಲಾದ 2.70 ಕೋಟಿ ರೂಪಾಯಿಗಳನ್ನು ಧಾರ್ಮಿಕ ಸಂಸ್ಥೆಗಳಿಗೆ ವರ್ಗಾಯಿಸಲಾಗಿದೆ ಎಂಬುದನ್ನು ಮಧ್ಯಪ್ರದೇಶ ಪೊಲೀಸರು ಪತ್ತೆ ಮಾಡಿದ್ದರು. ಈ ಹಣವನ್ನು ಬಿಷಪ್ ವೈಯಕ್ತಿಕ ಅಗತ್ಯಗಳಿಗಾಗಿ ಬಳಸಿಕೊಂಡಿದ್ದರು ಎಂಬ ಆರೋಪವಿದೆ.

 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries