HEALTH TIPS

ಡೆಬಿಟ್​ ಮತ್ತು ಕ್ರೆಡಿಟ್​ ಕಾರ್ಡ್​ಗಳ ಮೂಲಕದ ಪಾವತಿಗೆ ಟೋಕನೈಸೇಷನ್​ ಕಡ್ಡಾಯ

 

            ಡೆಬಿಟ್​ ಮತ್ತು ಕ್ರೆಡಿಟ್​ ಕಾರ್ಡ್​ಗಳ ಮೂಲಕದ ಪಾವತಿಗೆ ಅ.1ರಿಂದ ಟೋಕನೈಸೇಷನ್​ ಕಡ್ಡಾಯವಾಗಿದ್ದು, ಆನ್​ಲೈನ್​ ಪಾವತಿಗೆ ಸಿವಿವಿ ಅಥವಾ ಒನ್​ ಟೈಮ್​ ಪಾಸ್​ವರ್ಡ್​ (ಒಟಿಪಿ) ಬದಲು ಟೋಕನ್​ ನಂಬರ್​ ನೀಡುವಂತೆ ಆರ್​ಬಿಐ ಸೂಚಿಸಿದೆ. ಇದರ ಉದ್ದೇಶ ಡೆಬಿಟ್​ ಅಥವಾ ಕ್ರೆಡಿಟ್​ ಕಾರ್ಡ್​ಗಳ ವಿವರದ ಸಂರಕ್ಷಣೆ ಆಗಲಿದೆ.

 * ಅ. 1ರ ನಂತರ ಆನ್​ಲೈನ್​ ಪಾವತಿಯ ಗೇಟ್​ ವೇಗಳು ಗ್ರಾಹಕರ ಡಿಬಿಟ್​ ಅಥವಾ ಕ್ರೆಡಿಟ್​ ಕಾರ್ಡ್​ಗೆ ಸಂಬಂಧಿಸಿದ ಮಾಹಿತಿಯನ್ನು ಸಂಗ್ರಹಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.
* ಕಾರ್ಡ್​ನ 16 ಅಂಕಿಗಳು ಮತ್ತು ಕಾರ್ಡ್​ ಕಾರ್ಯಾವಧಿಯ ಅಂತಿಮ ದಿನಾಂಕವನ್ನು ನಮೂದು ಮಾಡುವ ಪ್ರಕ್ರಿಯೆ ಸೆ. 30ಕ್ಕೆ ಮುಗಿಯಲಿದೆ.
* ಕಾರ್ಡ್​ ವಿವರದ ಬದಲಿಗೆ ಟೋಕನ್​ ನಂಬರ್​ ನಮೂದು ಮಾಡಬೇಕು.
* ಹೊಸ ಪ್ರಕ್ರಿಯೆಯಿಂದ ಕಾರ್ಡ್​ 16 ಅಂಕಿ, ಕಾರ್ಡ್​ ಕಾರ್ಯಾವಧಿಯ ಅಂತಿಮ ದಿನಾಂಕ ಸಂಗ್ರಹಿತ ವಾಗಿರುವುದಿಲ್ಲ. ಟೋಕನ್​ ನಂಬರ್​ ಚಾಲ್ತಿ ಆಗುತ್ತದೆ.

              ಟೋಕನೈಸೇಷನ್​ ಪ್ರಕ್ರಿಯೆ
*ಆನ್​ಲೈನ್​ ಮೂಲಕ ಟೋಕನೈಸೇಷನ್​ ಮಾಡಿಸಲು ಗ್ರಾಹಕರು 'ಕಾರ್ಡ್​ ಸುರಕ್ಷತೆ ಗೊಳಿಸಿ' ಆಯ್ಕೆಯನ್ನು ಕ್ಲಿಕ್​ ಮಾಡಬೇಕು.
* ಆಯ್ಕೆಯ ನಂತರ ನೋಂದಾಯಿತ ಮೊಬೈಲ್​ಗೆ ಒಟಿಪಿ ರವಾನೆ. ಇದನ್ನು ವೆಬ್​ಪುಟದಲ್ಲಿ ನಮೂದಿಸುತ್ತಿದಂತೆ ಟೋಕನೈಸೇಷನ್​ ಪ್ರಕ್ರಿಯೆ ಶುರು.
* ಟೋಕನ್​ ಸಂಖ್ಯೆಯನ್ನು ಪಾವತಿ ಮಾಡಬೇಕಾದವರೊಂದಿಗೆ ಅಂದರೆ, ಆನ್​ಲೈನ್​ ಪಾವತಿಗಳು, ಪಾಯಿಂಟ್​ ಆಫ್​ ಸೇಲ್​ ಹಂಚಿಕೊಳ್ಳಲು ಅಡ್ಡಿಯಿಲ್ಲ.
* ಪದೇ ಪದೇ ಇಂಥ ಪಾವತಿಗಳು ಬಂದಾಗ ನಿಮ್ಮ ಟೋಕನ್​ ಸಂಖ್ಯೆ ಸ್ವಯಂಚಾಲಿತವಾಗಿಯೇ ಪರದೆ ಮೇಲೆ ಕಾಣುತ್ತದೆ. ಅದನ್ನು ಖಾತ್ರಿ ಮಾಡಿಕೊಂಡು ಕ್ಲಿಕ್​ ಮಾಡಿದರೆ ಪಾವತಿ ಸಲೀಸು.


Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries