HEALTH TIPS

ಪೆರಡಾಲದಲ್ಲಿ ಮದ್ಯವರ್ಜನ ಶಿಬಿರ ಆರಂಭ: ಮದ್ಯ ವ್ಯಸನಿಗಳನ್ನು ವ್ಯಸನಮುಕ್ತರಾಗಿಸುವತ್ತ ನವಜೀವನ ಸಮಿತಿಯಿಂದ ಮೊದಲಬಾರಿಗೆ ಆಯೋಜನೆ


               ಬದಿಯಡ್ಕ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಬೆಳ್ತಂಗಡಿ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು, ಸೌಪರ್ಣಿಕ ನವಜೀವನ ಸಮಿತಿ ಬದಿಯಡ್ಕ ಇವರ ನೇತೃತ್ವದಲ್ಲಿ,
ಮಲ್ಲಾಂಬಿಕ ನವಜೀವನ ಸಮಿತಿ ಮಲ್ಲ, ಮಹಾದೇವ ನವಜೀವನ ಸಮಿತಿ ಕಳತ್ತೂರು,  ಮಂಜುನಾಥ ನವಜೀವನ ಸಮಿತಿ ಅಡೂರು, ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಬದಿಯಡ್ಕ ವಲಯ,  ಉದನೇಶ್ವರ ದೇವಸ್ಥಾನದ ಆಡಳಿತ ಸಮಿತಿ ಪೆರಡಾಲ, ಜಸ್ಟಿಸ್ ಕೆ ಎಸ್ ಹೆಗ್ಡೆ ಚಾರಿಟೇಬಲ್ ಟ್ರಸ್ಟ್ ದೇರಳಕಟ್ಟೆ ಇದರ ಸಹಯೋಗದೊಂದಿಗೆ    ಗ್ರಾಮ ಪಂಚಾಯತಿ ಆರೋಗ್ಯ ಇಲಾಖೆ ಹಾಗೂ ಪೋಲಿಸ್ ಠಾಣೆ ಸಹಕಾರದೊಂದಿಗೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಸಂಶೋಧನಾ ಕೇಂದ್ರದ 1584 ಮದ್ಯವರ್ಜನ ಶಿಬಿರವು ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ಸಭಾಭವನದಲ್ಲಿ ಉದ್ಘಾಟನೆಗೊಂಡಿತು.            ಹಿರಿಯ ಧಾರ್ಮಿಕ ಮುಖಂಡ ವಸಂತ ಪೈ ಬದಿಯಡ್ಕ ದೀಪ ಬೆಳಗಿಸಿ ಉದ್ಘಾಟಿಸಿದರು. ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ಅಶ್ವಥ್ ಪೂಜಾರಿ ಲಾಲ್‍ಬಾಗ್  ಅಧ್ಯಕ್ಷತೆ ವಹಿಸಿದ್ದರು.  ಮುಖ್ಯ ಅತಿಥಿಗಳಾಗಿ ಪೆರಡಾಲ ಶ್ರೀ ಉದನೇಶ್ವರ  ದೇವಸ್ಥಾನದ ಆಡಳಿತ ಮೊಕ್ತೇಸರ ವೆಂಕಟ್ರಮಣ ಭಟ್, ಬದಿಯಡ್ಕ ಗ್ರಾಮ ಪಂಚಾಯತಿ ಅಧ್ಯಕ್ಷೆ ಶಾಂತಾ ಬಾರಡ್ಕ, ಬದಿಯಡ್ಕ ಪೋಲೀಸ್ ಠಾಣಾಧಿಕಾರಿ ವಿನೋದ್ ಕುಮಾರ್,  ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಅಖಿಲೇಶ್ ನಗುಮುಗಂ,  ಪೆರಡಾಲ ಕ್ಷೇತ್ರ ಆಡಳಿತ ಮಂಡಳಿ ಸದಸ್ಯ ಜಗನ್ನಾಥ ರೈ,  ಬದಿಯಡ್ಕ ಗ್ರಾಮ ಪಂಚಾಯತಿ ಸದಸ್ಯ ಶ್ಯಾಮ್ ಪ್ರಸಾದ್ ಮಾನ್ಯ, ಡಾ.ದೀಪಾ ಲಕ್ಷ್ಮಿ ಮುಳ್ಳೇರಿಯಾ, ಪ್ರೊ.ಎ. ಶ್ರೀನಾಥ್, ಶ್ಯಾಮ್ ಆಳ್ವ, ನಾರಾಯಣ ಭಟ್ ಪಂಜಿತಡ್ಕ, ತಾರನಾಥ್ ರೈ,  ರೋಹಿತಾಕ್ಷ, ಸೇವಾ ಪ್ರತಿನಿಧಿಗಳಾದ ಜಲಜಾಕ್ಷಿ,  ಕವಿತ, ಸುಮಿತ್ರ, ಅನಿತಾ,  ಬೇಬಿ, ನಲಿನಾಕ್ಷಿ, ಗಾಯತ್ರಿ, ಕಮಲಾಕ್ಷಿ ಮೊದಲಾದವರು ಉಪಸ್ಥಿತರಿದ್ದರು.


          ಯೋಜನಾಧಿಕಾರಿಯವರಾದ ಮುಕೇಶ್ ಸ್ವಾಗತಿಸಿ ಕವಿತ ರೈ ವಂದಿಸಿದರು.  ದಿನೇಶ್ ಕೊಕ್ಕಡ ಕಾರ್ಯಕ್ರಮ ನಿರೂಪಿಸಿದರು
ಕರಾವಳಿ ಪ್ರಾದೇಶಿಕ ವಿಭಾಗ ಉಡುಪಿ ಜನ ಜಾಗೃತಿ ಯೋಜನಾಧಿಕಾರಿ ತಿಮ್ಮಯ್ಯ ನಾಯ್ಕಪ್ರಾಸ್ತಾವಿಕವಾಗಿ ಮಾತನಾಡಿದರು.
           ಅಭಿಮತ: ಗಡಿನಾಡಲ್ಲಿ ನಾಡ ಬೆಳಗುವ ಶಿಬಿರ.
           ಲಕ್ಷಾಂತರ ಜನರ ಬದುಕಿಗೆ ಹೊಸ ದಾರಿ ತೋರಿದ ಪುಣ್ಯದ ಕೆಲಸವನ್ನು ಇಂದು ಪಾನಮುಕ್ತರಾದವರೇ ಆಯೋಜಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ.  ನವಜೀವನ ಸಮಿತಿ ನೇತೃತ್ವದ  ಮಧ್ಯವರ್ಜನ ಶಿಬಿರಗಳು ಎಲ್ಲಾ ಜಿಲ್ಲೆಗಳಲ್ಲಿಯೂ ನಡೆಯುವಂತಾಗಬೇಕು. ಮಧ್ಯದ ಬದಲು ಪರಸ್ಪರ ಪ್ರೀತಿ ವಿಶ್ವಾಸದ ಲಹರಿ ಸಮಾಜದಲ್ಲಿ ತುಂಬಿ ಎಲ್ಲರ ಬದುಕೂ ಸುಖ ಸಂತೋಷದಿಂದ ತುಂಬುವಂತಾಗಬೇಕು.  ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗಳು ನಿಜಾರ್ಥದಲ್ಲಿ ಪ್ರತಿ ಗ್ರಾಮಗಳನ್ನೂ ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿವೆ.
                  ವಸಂತ ಪೈ. ಧಾರ್ಮಿಕ ಮುಂದಾಳು.(ಉದ್ಘಾಟಿಸಿ ಅಭಿಮತ)        2) ಹೀಗೊಂದು ಶಿಬಿರ ಆಯೋಜಿಸಬೇಕೆಂಬ ಕನಸು ನಮ್ಮ ಸೌಪರ್ಣಿಕಾ ನವಜೀವನ ಸಮಿತಿಯದ್ದಾಗಿತ್ತು. ಆದುದರಿಂದ ಧರ್ಮಸ್ಥಳಕ್ಕೆ ತೆರಳಿ ಹೆಗ್ಗಡೆಯವರ ಆಶೀರ್ವಾದ ಪಡೆದು ಸಮಿತಿಯ ನೇತೃತ್ವದಲ್ಲಿ ಈ ಶಿಬಿರವನ್ನು ಪ್ರಾರಂಭಿಸಿದ್ದೇವೆ. ಸೇವಾ ಪ್ರತಿನಿಧಿಗಳ ಬೆಂಬಲ, ಮೇಲ್ವಿಚಾರಕರ ಸಲಹೆ, ಯೋಜನಾಧಿಕಾರಿಗಳ ಮಾರ್ಗದರ್ಶನ ಹಾಗೂ ವಿವಿಧ ನವಜೀವನ ಸಮಿತಿಗಳ ಪೂರ್ಣ ಸಹಕಾರ ನಮ್ಮ ಕನಸು ನನಸಾಗಲು ಸಹಾಯಕವಾಗಿದೆ. ಹೊಸ ದಾಖಲೆ ಸೃಷ್ಟಿಸುವುದರೊಂದಿಗೆ ಹೊಸ ಸಾಧ್ಯತೆಗಳತ್ತ ಇದು ಬೆಳಕು ಚೆಲ್ಲಲಿದೆ.
               ಜಯರಾಮ ಪಾಟಾಳಿ ಪಡುಮಲೆ.
              ಅಧ್ಯಕ್ಷರು, 1584ನೇ ಮಧ್ಯವರ್ಜನ ಶಿಬಿರ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


Qries