HEALTH TIPS

ಚಿನ್ಮಯ ಮಿಷನ್ ಕಾಸರಗೋಡು ವತಿಯಿಂದ ನಾಳೆ ಸೌಂದರ್ಯ ಲಹರಿ ಸಾಮೂಹಿಕ ಪಾರಾಯಣ ಯಜ್ಞ           ಕಾಸರಗೋಡು: ಜಗದ್ಗುರು ಶಂಕರಾಚಾರ್ಯ ವಿರಚಿತ 100 ಶ್ಲೋಕಗಳನ್ನೊಳಗೊಂಡ ಸೌಂದರ್ಯ ಲಹರಿ ಸ್ತೋತ್ರದ ಮಹಾಪಾರಾಯಣ ಯಜ್ಞವು ಸೆಪ್ಟೆಂಬರ್ 17 ರಂದು ಬೆಳಿಗ್ಗೆ 10 ಗಂಟೆಯಿಂದ ವಿದ್ಯಾನಗರ ಚಿನ್ಮಯ ತೇಜಸ್ ಸಭಾಂಗಣದಲ್ಲಿ ನಡೆಯಲಿರುವುದಾಗಿ ಚಿನ್ಮಯ ಮಿಷನ್ ಅಧ್ಯಕ್ಷ ಎ.ಕೆ ನಾಯರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
           ವಿಶ್ವದಲ್ಲಿ ಶಾಂತಿ ಸಮಾಧಾನ ನೆಲೆಗೊಳ್ಳುವುದರ ಜತೆಗೆ ಹಾಪಾರಾಯಣದಲ್ಲಿ ಪಾಲ್ಗೊಳ್ಳುವವರಿಗೆ ಸಕಲ ಐಶ್ವರ್ಯ, ಮನಶಾಂತಿ, ರೋಗ ಶಮನ ಇಷ್ಟಾರ್ಥ ಸಿದ್ಧಿ ಉದ್ದೇಶದೊಂದಿಗೆ ಮಹಾಪಾರಾಯಣ ಯಜ್ಞ ನಡೆಸಲಗುತ್ತಿದೆ.  ಮಹಾಪಾರಾಯಣದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ ಈ ಯಜ್ಞದ ಸ್ವಯಂಸೇವಕರು ಕಳೆದ ಆರು ತಿಂಗಳುಗಳಿಗೂ ಹೆಚ್ಚು ಕಾಲದಿಂದ ಆನ್ ಲೈನ್ ಯಾ ಪ್ರತ್ಯಕ್ಷವಾಗಿ ಈ ಸ್ತೋತ್ರಗಳನ್ನು ಅಭ್ಯಸಿಸುತ್ತಿದ್ದಾರೆ. ಇದುವರೆಗೆ ನೋಂದಾಯಿಸಿದ 1700 ಕ್ಕೂ ಹೆಚ್ಚಿನ ಜನರು ಸೆ. 17ರಂದು ನೇರವಾಗಿ ಬಂದು ಚಿನ್ಮಯ ತೇಜಸ್ ಆಡಿಟೋರಿಯಂನಲ್ಲಿ ಪಾರಾಯಣ ಮಾಡಲಿರುವರು. ಅಲ್ಲದೆ 1000 ಕ್ಕೂ ಹೆಚ್ಚಿನ ಕೇಂದ್ರಗಳಲ್ಲಿ ಝೂಮ್ ಮೀಟಿಂಗುಗಳ ಮೂಲಕ ಹಾಗೂ ಯೂಟ್ಯೂಬ್ ಮೂಲಕ ಒಂದು ಲಕ್ಷಕ್ಕೂ ಅಧಿಕ ಮಂದಿ ಪ್ರಪಂಚದ ವಿವಿಧಡೆಗಳಲ್ಲಿ ಭಾಗವಹಿಸಲಿದ್ದಾರೆ. ಮೈಸೂರು ಕೃಷ್ಣರಾಜನಗರ ಯಡತೊರೆ ಶ್ರೀ ಯೋಗಾನಂದೇಶ್ವರ ಸರಸ್ವತಿ ಮಠಾಧಿಪತಿ ಶ್ರೀ ಶಂಕರ ಭಾರತಿ ಸ್ವಾಮೀಜಿ ಮುಖ್ಯ ಅತಿಥಿಯಾಘಿ ಭಾಗವಹಿಸಿ ಯಜ್ಞವನ್ನು ಅನುಗ್ರಹಿಸುವರು.  17 ರಂದು ಬೆಳಗ್ಗೆ 10. 25ಕ್ಕೆ ಸ್ವಾಮೀಜಿಯವರನ್ನು ಹಾಗೂ ಇತರ ಸನ್ಯಾಸಿ ವರ್ಯರುಗಳನ್ನು ಮುಖ್ಯ ಅತಿಥಿಗಳನ್ನು ಕೇರಳೀಯ ಸಾಂಪ್ರದಾಯಿಕ ಶೈಲಿಯ ತಾಲಪೆÇ್ಪಲಿ , ವಾದ್ಯ ಮೇಳಗಳೊಂದಿಗೆ ವೇದಿಕೆಗೆ ಕರೆದೊಯ್ಯಲಾಗುವುದು. ಚಿನ್ಮಯ ಮಿಷನ್ ಕೇರಳ ರಾಜ್ಯದ ಮುಖ್ಯಸ್ಥ ಹಾಗೂ ಕಾರ್ಯಕ್ರಮದ ಮುಖ್ಯ ಸಂಘಾಟಕರೂ ಆದ ಸ್ವಾಮಿ ವಿವಿಕ್ತಾನಂದ ಸರಸ್ವತಿ ಪ್ರಾಸ್ತಾವಿಕ ಭಾಷಣ ಮಾಡಲಿರುವರು. ಬಳಿಕ ಎಡನೀರು ಮಠಾಧಿಪತಿ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿ,  ಉಪ್ಪಳ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತಿ ಸ್ವಾಮಿಗಳು ಆಶೀರ್ವಚನ ನೀಡುವರು. ಶ್ರೀ ಶಂಕರ ಭಾರತಿ ಸ್ವಾಮಿಗಳು ಅಧ್ಯಕ್ಷ ಭಾಷಣ ಮಾಡಲಿರುವರು. ಬಳಿಕ ಮಹಾಪಾರಾಯಣ ನಡೆಯುವುದು. 12:40ಕ್ಕೆ ಮಂಗಳಾರತಿಯೊಂದಿಗೆ ಕಾರ್ಯಕ್ರಮವು ಸಂಪನ್ನಗೊಳ್ಳಲಿದೆ. ಸಾಮೂಹಿಕ ಪಾರಾಯಣ ಯಜ್ಞದಲ್ಲಿ ಅಂಬಲತ್ತರ ಮೂರನೇ ಮೈಲು ಶಂಕರ ಅದ್ವೈತ ಆಶ್ರಮದ ಸ್ವಾಮಿ ಭೂಮಾನಂದ ಪುರಿ , ಚಿನ್ಮಯ ಮಿಷನ್ ಸ್ವಾಮಿಗಳು, ಇತರ ಗಣ್ಯ ವ್ಯಕ್ತಿಗಳು ಭಾಗವಹಿಸಲಿರುವರು ಎಂದು ತಿಳಿಸಿದರು.
           ಸುದ್ದಿಗೋಷ್ಠೀಯಲ್ಲಿ ಚಿನ್ಮಯ ಮಿಷನ್ ಕಾರ್ಯದರ್ಶಿ ಕೆ. ಬಾಲಚಂದ್ರನ್, ಕೆ.ಎಂ ನಾರಾಯಣನ್, ಪ್ರಾಂಶುಪಾಲ ಡಾ. ಬಿಜು ಮಾಡತ್ತಿಲ್, ಹರಿಹರನ್ ನಂಬ್ಯಾರ್ ಮಾಡತ್ತಿಲ್ ಉಪಸ್ಥಿತರಿದ್ದರು. 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


Qries