HEALTH TIPS

ಮುಳಿಯಾರು - ಆನೆಹಿಂಡುಗಳ ದಾಳಿ: ವ್ಯಾಪಕ ಬೆಳೆ ನಾಶದ


         ಮುಳ್ಳೇರಿಯ: ಮುಳಿಯಾರು ಗ್ರಾಮದ  ಬಳ್ಳಮೂಲೆ, ಬೆಳ್ಳಿಪ್ಪಾಡಿ, ಚರವಿಯಲ್ಲಿ ಆನೆಹಿಂಡುಗಳ ಧಾಳಿಯಾಗಿದ್ದು ಬೆಳೆ ನಾಶಪಡಿಸುತ್ತಾ ಅಟ್ಟಹಾಸದಿಂದ ಮುಂದುವರಿದಿದೆ.
          ಸೋಮವಾರ, ಮಂಗಳವಾರ ರಾತ್ರಿ ಈ ಪ್ರದೇಶಗಳಲ್ಲಿ ಕಾಡಾನೆಗಳು ನಿರಂತರ ದಾಳಿ ನಡೆಸಿದ್ದು, ಫಲಭರಿತ ತೆಂಗಿನಮರಗಳು, ಅಡಿಕೆ , ಬಾಳೆ ಇತ್ಯಾದಿ ಬೆಳೆಗಳನ್ನು ನಾಶಮಾಡಿವೆ.             ಕರುಣಾಕರನ್ ನಾಯರ್,  ಬಳ್ಳಮೂಲೆ ಗೋವಿಂದ ಭಟ್, ಗೋಪಾಲಕೃಷ್ಣ ಭಟ್, ಲೀಲಾ, ಚಂದ್ರನ್, ಮಾಧವನ್, ಶ್ರೀಧರನ್ ಸೇರಿದಂತೆ ಹಲವರ ತೋಟಗಳನ್ನು ನಾಶಪಡಿಸಿವೆ. ಕೃಷಿಕರು ಈ ದುರಂತದ ಪರಿಣಾಮವನ್ನು ತಾಳಲಾರದೆ ಅಧಿಕೃತರಿಗೆ ದೂರು ನೀಡಿದ್ದು, ಪರಿಶೀಲನೆ ನಡೆಸುವುದಾಗಿ ಅಧಿಕೃತರು ತಿಳಿಸಿದ್ದಾರೆ.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


Qries