HEALTH TIPS

ನಾಲಂದದಲ್ಲಿ ಓಝೋನ್ ದಿನಾಚರಣೆ


              ಪೆರ್ಲ: ಓಝೋನ್ ಪದರ ಭೂಮಿಯನ್ನು ಸೂರ್ಯನ ಶಾಖದಿಂದ ರಕ್ಷಿಸುವ ಕೊಡೆ ಮಾತ್ರವಲ್ಲ ಇದು ಭೂಮಂಡಲ ಜೀವ ಸಂಕಲ್ಪವನ್ನು ರಕ್ಷಿಸುವ ಪದರವಾಗಿ ಕೆಲಸ ಮಾಡುತ್ತಿದೆ. ನಮ್ಮನ್ನು ರಕ್ಷಿಸುತ್ತಿರುವ ಈ ರಕ್ಷಾ ಕವಚವನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮ
ಮೇಲಿದೆ ಎಂದು ಪೆರ್ಲ ನಾಲಂದ ಕಾಲೇಜ್ ನ ಭೂವಿಜ್ಞಾನ ಉಪನ್ಯಾಸಕಿ ಸುಚಿತ್ರ ಅರಿವು ಮೂಡಿಸಿದರು.
          ಕಾಲೇಜಿನ ಎನ್ ಎಸ್ ಎಸ್ ನೇತೃತ್ವದಲ್ಲಿ ಶುಕ್ರವಾರ ನಡೆದ ಓಝೋನ್ ದಿನ ಆಚರಣೆಯ ಸಮಾರಂಭದಲ್ಲಿ ಅವರು ಮಾತನಾಡಿದರು.
        ಸೂರ್ಯನಿಂದ ಹೊರಬರುವ ಯು ವಿ ಕಿರಣಗಳ ವಿರುದ್ಧ ಭೂಮಿಯ ಮೇಲಿನ ಏಕೈಕ ರಕ್ಷಣೆಯಾಗಿರುವ ಓಝೋನ್  ಪದರದ ಪ್ರಾಮುಖ್ಯತೆ ಮತ್ತು ಅಗತ್ಯದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶವನ್ನು ಈ ದಿನ ಹೊಂದಿದೆ. ಯು ಎನ್ ಪರಿಸರ ಕಾರ್ಯಕ್ರಮವು ಓಝೋನ್ ಪದರವನ್ನು  ಹಾನಿ ಮಾಡುವ ವಸ್ತುಗಳನ್ನು ತೆರವುಗೊಳಿಸುವ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ. ಭೂಮಿಯ ರಕ್ಷಣಾತ್ಮಕ ಕವಚವನ್ನು  ರಕ್ಷಿಸುವ ಸಮಯ-ಉದ್ದೇಶಿತ ಕ್ರಮಗಳನ್ನು  ತೆಗೆದುಕೊಳ್ಳುವಂತೆಯೂ ಇದು ಕರೆ ನೀಡುತ್ತಿದೆ.  ಇದು ನಮಗೆ  ಪ್ರೇರಣೆ ಆಗಲಿ ಎಂದು ಅವರು ತಿಳಿಸಿದರು.
         ಎನ್ ಎಸ್ ಎಸ್ ಕಾರ್ಯಕ್ರಮ ಅಧಿಕಾರಿ ಪ್ರಜಿತ್, ಕಾರ್ಯದರ್ಶಿಗಳಾದ ನವೀನ್ ರಾಜ್, ವಿನಾಯಕ, ಶರಣ್ಯ  ಉಪಸ್ಥಿತರಿದ್ದರು. ಅಮೃತ ಸ್ವಾಗತಿಸಿ,  ಯಜ್ನೇಶ್ ವಂದಿಸಿದರು.  ಐಶ್ವರ್ಯ ನಿರೂಪಿಸಿದರು. 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


Qries