HEALTH TIPS

ಅಷ್ಟು ಪಾಪ್ಯುಲರ್ ಆಗುವುದು ಬೇಡ: ಪಿ.ಎಫ್.ಐ ಕಾರ್ಯಕರ್ತರನ್ನು ಬೆನ್ನಟ್ಟಿ ಹಿಡಿದ ಪೋಲೀಸರು ಮತ್ತು ಸ್ಥಳೀಯರು


                   ಕೊಚ್ಚಿ: ಹರತಾಳದ ಹೆಸರಿನಲ್ಲಿ ಸಾರ್ವಜನಿಕರಿಗೆ ಬೆದರಿಕೆ ಹಾಕಿದ್ದ ಪಾಪ್ಯುಲರ್ ಫ್ರಂಟ್ ಕಾರ್ಯಕರ್ತರನ್ನು ಪೋಲೀಸರು ಬೆನ್ನಟ್ಟಿ ಬಂಧಿಸಿದ್ದಾರೆ.
                       ಕೊಚ್ಚಿ ಟೌನ್ ಹಾಲ್ ಪ್ರದೇಶದಲ್ಲಿ ಪೋಲೀಸರ ಈ ಕ್ರಮ ಗಮನ ಸೆಳೆದಿದೆ. ತೆರೆದಿದ್ದ ಹೊಟೇಲ್‍ಗಳನ್ನು ಮುಚ್ಚುವುದಾಗಿ ದಾಳಿಕೋರರು ಬೆದರಿಕೆ ಹಾಕಿದ್ದಾರೆ. ವ್ಯಾಪಾರಿಗಳಿಗೆ ಬೆದರಿಕೆ ಹಾಕಿ ಹಿಂಸಾಚಾರ ನಡೆಸಿದ ಪಾಪ್ಯುಲರ್ ಫ್ರಂಟ್ ಕಾರ್ಯಕರ್ತರ ವಿರುದ್ಧ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರದರ್ಶನದ ನಂತರ, ಪಾಪ್ಯುಲರ್ ಫ್ರಂಟ್ ಸದಸ್ಯರು ಘಟನಾ ಸ್ಥಳದಲ್ಲಿ ಹಿಂಸಾಚಾರ ನಡೆಸಲು ಪ್ರಯತ್ನಿಸಿದರು. ಪೆÇಲೀಸರನ್ನು ಕಂಡ ಅವರು ಬೈಕ್‍ನಲ್ಲಿ ಪರಾರಿಯಾಗಲು ಯತ್ನಿಸಿದ್ದು, ಕಾರ್ಯಕರ್ತರನ್ನು ಪೋಲೀಸರು ಬೆನ್ನಟ್ಟಿ ಹಿಡಿದಿದ್ದಾರೆ.
               ಕಣ್ಣೂರಿನ ಪಯ್ಯನ್ನೂರಿನಲ್ಲಿ ಬೆದರಿಕೆ ಹಾಕಿದ ಪಾಪ್ಯುಲರ್ ಫ್ರಂಟ್ ದಾಳಿಕೋರರನ್ನು ಸ್ಥಳೀಯರು ಹಿಡಿದು ಪೋಲೀಸರಿಗೆ ಒಪ್ಪಿಸಿದ್ದಾರೆ. ಸ್ಥಳೀಯ ಪಿ ಎಫ್ ಐ ಕಾರ್ಯಕರ್ತರು ಬೈಕ್‍ನಲ್ಲಿ ಬಂದು ಸ್ಥಳೀಯರಿಗೆ ಬೆದರಿಕೆ ಹಾಕಿ ಅಂಗಡಿಗಳನ್ನು ಮುಚ್ಚಿಸಲು ಯತ್ನಿಸಿದರು. ನಾಲ್ಕು ದ್ವಿಚಕ್ರ ವಾಹನಗಳಲ್ಲಿ ಬಂದ ಎಂಟು ಮಂದಿ ಪಯ್ಯನ್ನೂರಿನ ಅಂಗಡಿಗಳಿಗೆ ನುಗ್ಗಿ ಬೆದರಿಕೆ ಹಾಕಿದ್ದಾರೆ. ಹಮಾಲರು, ಆಟೊರಿಕ್ಷಾ ಚಾಲಕರು ಸೇರಿದಂತೆ ಸ್ಥಳೀಯರು ಅತೀ ಸಾಹಸಿಕವಾಗಿ ಅವರನ್ನು ಸದೆಬಡಿದಿದ್ದಾರೆ.
               ಪಾಪ್ಯುಲರ್ ಫ್ರಂಟ್ ಮತ್ತು ಎಸ್‍ಡಿಪಿಐ ರಾಜ್ಯದಾದ್ಯಂತ ವ್ಯಾಪಕ ಹಿಂಸಾಚಾರವನ್ನು ನಿನ್ನೆ ನಡೆಸಿ ಭೀತಿ ಸೃಷ್ಟಿಸಿತು.  ಹಲವೆಡೆ ದಾಳಿಕೋರರು ವಾಹನಗಳ ಮೇಲೆ ಕಲ್ಲು, ಪೆಟ್ರೋಲ್ ಬಾಂಬ್ ಎಸೆದಿದ್ದಾರೆ. ಕಣ್ಣೂರಿನಲ್ಲಿ ಪತ್ರಿಕಾ ವಾಹನ ಹಾಗೂ ಆರ್‍ಎಸ್‍ಎಸ್ ಕಚೇರಿ ಮೇಲೆ ಬಾಂಬ್ ದಾಳಿ ನಡೆದಿದೆ. ಮುಸುಕುಧಾರಿ ತಂಡಗಳು ನೆಡುಂಬಸ್ಸೆರಿ, ಕೊಟ್ಟಾಯಂ ಮತ್ತು ಕೋಯಿಕ್ಕೋಡ್‍ನಲ್ಲಿ ಹೋಟೆಲ್‍ಗಳನ್ನು ಧ್ವಂಸಗೊಳಿಸಿವೆ. ಈರಾಟುಪೇಟೆಯಲ್ಲಿ ವಾಹನ ತಡೆದ ಹರತಾಳ ನಡೆಸಿದ ಬೆಂಬಲಿಗರನ್ನು ಹಿಂದಕ್ಕೆ ಓಡಿಸಲು ಪೋಲೀಸರು ಲಾಠಿ ಪ್ರಹಾರ ನಡೆಸಿದರು. ಕೊಲ್ಲಂ ಪಲ್ಲಿಮುಕ್ ನಲ್ಲಿ ಹರತಾಳ ಪರರ ಬೈಕ್ ಪೆÇಲೀಸ್ ಅಧಿಕಾರಿಗೆ ಡಿಕ್ಕಿ ಹೊಡೆದಿದೆ. ಇದೇ ವೇಳೆ ದಾಳಿಕೋರರ ಜತೆ ವಾಗ್ದಾಳಿ ನಡೆಸಿದ ಸಾರ್ವಜನಿಕರು ಬೀದಿಗಿಳಿದು ಪಾಪ್ಯುಲರ್ ಫ್ರಂಟ್ ಕಾರ್ಯಕರ್ತರನ್ನು ಓಡಿಸುವಲ್ಲಿ ಯಶಸ್ವಿಯಾದರು. 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


Qries