HEALTH TIPS

ಗ್ರಂಥಾಲಯದ ಪ್ರದರ್ಶನದಿಂದ ಪ್ರಧಾನ ಮಂತ್ರಿಯ ಕುರಿತಾದ ಪುಸ್ತಕ ಹಿಂಪಡೆತ: ಬಲಗೊಂಡ ಪ್ರತಿಭಟನೆ


           ಮಲಪ್ಪುರಂ: ಕ್ಯಾಲಿಕಟ್ ವಿಶ್ವವಿದ್ಯಾನಿಲಯದ ಗ್ರಂಥಾಲಯದ ಡಿಸ್‍ಪ್ಲೇ ಬಾಕ್ಸ್ ನಲ್ಲಿ ಪ್ರದರ್ಶಿಸಲಾಗಿದ್ದ  ಪ್ರಧಾನಿ ನರೇಂದ್ರ ಮೋದಿ ಅವರ ಪುಸ್ತಕವನ್ನು ಹಿಂಪಡೆಯಲಾಗಿದೆ.
          ಧಾರ್ಮಿಕ ಮೂಲಭೂತವಾದಿಗಳ ಆಕ್ಷೇಪದ ಹಿನ್ನೆಲೆಯಲ್ಲಿ ಮೋದಿ @20: ಡ್ರೀಮ್ಸ್ ಮೀಟ್ ಡೆಲಿವರಿ ಪುಸ್ತಕವನ್ನು ಗ್ರಂಥಾಲಯದ ಪ್ರದರ್ಶನದಿಂದ ತೆಗೆದುಹಾಕಲಾಗಿದೆ.  ಆದರೆ ಇದರ ವಿರುದ್ಧ ಪ್ರತಿಭಟನೆ ಪ್ರಬಲವಾಗಿದ್ದರಿಂದ ಕೆಲವೇ ಗಂಟೆಗಳಲ್ಲಿ ಪುಸ್ತಕವನ್ನು ಹಿಂದಕ್ಕೆ ಹಾಕಲಾಯಿತು. ಈ ಪುಸ್ತಕವು ಮೋದಿ ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗಿನಿಂದ 20 ವರ್ಷಗಳ ಆಡಳಿತ ಸುಧಾರಣೆಗಳ ಮೌಲ್ಯಮಾಪನವಾಗಿದೆ.
         ಮೂಲಭೂತವಾದಿ ಗುಂಪುಗಳಿಗೆ ಸೇರಿದ ಕೆಲವು ವಿದ್ಯಾರ್ಥಿಗಳು ಪುಸ್ತಕವನ್ನು ವಿಶ್ವವಿದ್ಯಾಲಯದ ಗ್ರಂಥಾಲಯದಲ್ಲಿ ಪ್ರದರ್ಶಿಸುವುದನ್ನು ವಿರೋಧಿಸಿದರು. ಈ ವಿರೋಧ ಬಲವಾಗುತ್ತಿದ್ದಂತೆ ವಿಶ್ವವಿದ್ಯಾನಿಲಯವೂ ಅವರ ಮುಂದೆ ಮಂಡಿಯೂರಿ ಪುಸ್ತಕ ಹಿಂಪಡೆದಿದೆ. ಆದರೆ ವಿಶ್ವವಿದ್ಯಾಲಯದ ಕ್ರಮದ ವಿರುದ್ಧ ಬಿಜೆಪಿ ಹರಿಹಾಯ್ದಿದೆ.
          ಕ್ಯಾಲಿಕಟ್ ವಿಶ್ವವಿದ್ಯಾನಿಲಯವು ಪಾಕಿಸ್ತಾನದ ಪರವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಆರೋಪಿಸಿದ್ದಾರೆ. ದೇಶವಿರೋಧಿ ಶಕ್ತಿಗಳ ಒತ್ತಡಕ್ಕೆ ಮಣಿದ ವಿಶ್ವವಿದ್ಯಾನಿಲಯ ಅಧಿಕಾರಿಗಳು ದೇಶದ ಶ್ರೇಷ್ಠ ಪ್ರಜಾಪ್ರಭುತ್ವ ಹಾಗೂ ಸಂವಿಧಾನಕ್ಕೆ ಅಪಮಾನ ಮಾಡಿದ್ದಾರೆ ಎಂದರು.
           ವಿಶ್ವವಿದ್ಯಾನಿಲಯದ ಕ್ರಮವನ್ನು ವಿರೋಧಿಸಿ ಯುವಮೋರ್ಚಾ ಸೆಕ್ರೆಟರಿಯೇಟ್ ಎದುರು ಪ್ರತಿಭಟನೆ ನಡೆಸಿತು. ಯುವಮೋರ್ಚಾ ರಾಜ್ಯಾಧ್ಯಕ್ಷ ಪ್ರಫುಲ್ ಕೃಷ್ಣನ್ ಮಾತನಾಡಿ, ವಿಶ್ವವಿದ್ಯಾನಿಲಯ ಧಾರ್ಮಿಕ ಉಗ್ರಗಾಮಿಗಳ ಪರ ಕೆಲಸ ಮಾಡುತ್ತಿದೆ. ಪಾಪ್ಯುಲರ್ ಫ್ರಂಟ್ ವಿರುದ್ಧ ಕ್ರಮ ಕೈಗೊಳ್ಳಬೇಕು. ರಾಜ್ಯ ಸರಕಾರ ಧಾರ್ಮಿಕ ಮೂಲಭೂತವಾದಿಗಳ ಪರ ನಿಂತಿದ್ದು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆ ನಡೆದಾಗ ಪುಸ್ತಕ ವಾಪಸ್ ನೀಡಲಾಯಿತು. ಪುಸ್ತಕ ಪುನಃ ಅಲ್ಲಿ ಪ್ರದರ್ಶಿಸದಿದ್ದರೆ ಸೆಕ್ರೆಟರಿಯೇಟ್ ಗೆ ಪುಸ್ತಕ ತರುತ್ತೇನೆ ಎಂದು ಯುವಮೋರ್ಚಾ ಅಧ್ಯಕ್ಷರು ಹೇಳಿದರು.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries