HEALTH TIPS

ಜಿಲ್ಲೆಯ ಆರೋಗ್ಯ ಸಮಸ್ಯೆ ಸೆಕ್ರೆಟೇರಿಯೆಟ್ ಎದುರು ನಿರಾಹಾರ ಸತ್ಯಾಗ್ರಹ

 


                ಕಾಸರಗೋಡು: ಜಿಲ್ಲೆಯ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸುವ ಪ್ರಸ್ತಾವನೆಯೊಂದಿಗೆ ಅಕ್ಟೋಬರ್ 2 ರಿಂದ ಖ್ಯಾತ ಸಾಮಾಜಿಕ ಹೋರಾಟಗಾರ್ತಿ ದಯಾಬಾಯಿ ನೇತೃತ್ವದಲ್ಲಿ ಸೆಕ್ರೆಟರಿಯೇಟ್ ಎದುರು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಲಾಗುವುದು ಎಂದು ಅಂಬಲತ್ತರ ಕುಞÂಕೃಷ್ಣನ್ ಸುದ್ದಿಗೋಷ್ಠೀಯಲ್ಲಿ ತಿಳಿಸಿದ್ದಾರೆ.
           ಜಿಲ್ಲೆಯ ನಾನಾ ಕಡೆ ಹುಟ್ಟುವ ಮಕ್ಕಳು ರೋಗಪೀಡಿತರಾಗಿ ಜನಿಸುತ್ತಿದೆ.ಈ ಕುರಿತು ಸರಕಾರಕ್ಕೆ ಹಲವು ಬಾರಿ ಮನವಿ, ದೂರು ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಅಸಹಾಯಕ ತಾಯಂದಿರು ಮುಷ್ಕರ ನಡೆಸಿದರೂ, ಆರೋಗ್ಯ ಕ್ಷೇತ್ರದಲ್ಲಿ ಹೆಚ್ಚಿನ ಪ್ರಗತಿಯಾಗಿಲ್ಲ. ಈ ನಿಟ್ಟಿನಲ್ಲಿ ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆಯಿದೆ.
            ಕೇರಳ ಸರ್ಕಾರವು ಕೇಂದ್ರಕ್ಕೆ ನೀಡಿರುವ ಏಮ್ಸ್ ಪ್ರಸ್ತಾವನೆಯಲ್ಲಿ ಕಾಸರಗೋಡು ಜಿಲ್ಲೆಯ ಹೆಸರನ್ನು ಸೇರಿಸಬೇಕು, ಉಕ್ಕಿನಡ್ಕ ವೈದ್ಯಕೀಯ ಕಾಲೇಜು ಆಸ್ಪತ್ರೆ ಶೀಘ್ರ ಪೂರ್ತಿಘೊಳಿಸುವುದರೊಂದಿಗೆ  ಜಿಲ್ಲಾ ಆಸ್ಪತ್ರೆ, ಜನರಲ್ ಆಸ್ಪತ್ರೆ, ಟಾಟಾ ಆಸ್ಪತ್ರೆ, ಅಮ್ಮ-ಮಕ್ಕಳು ಆಸ್ಪತ್ರೆಯಲ್ಲಿ ಪರಿಣತ ಚಿಕಿತ್ಸೆ ಏರ್ಪಡಿಸಬೇಕು,  ಎಲ್ಲಾ ಗ್ರಾಮ ಪಂಚಾಯಿತಿ  ಮತ್ತು ನಗರಸಭೆಗಳಲ್ಲಿ ಡೇ ಕೇರ್ ಸೆಂಟರ್ ಸ್ಥಾಪಿಸಬೇಕು, ಎಂಡೋಸಲ್ಫಾನ್ ಸಂತ್ರಸ್ತರನ್ನು ಗುರುತಿಸಲು ವಿಶೇಷ ವೈದ್ಯಕೀಯ ಶಿಬಿರವನ್ನು ತುರ್ತಾಗಿ ಆಯೋಜಿಸುವಂತೆ ಒತ್ತಾಯಿಸಿ ಸತ್ಯಾಗ್ರಹ ನಡೆಯಲಿರುವುದಾಗಿ ತಿಳಿಸಿದರು.
           ಸುದ್ದಿಗೋಷ್ಠಿಯಲ್ಲಿ ದಯಾಬಾಯಿ, ಕರೀಂ ಚೌಕಿ, ಸುಬೈರ್ ಪಡ್ಪು,  ಹಮೀದ್ ಚೇರಂಗೈ, ಮುನೀರ್ ಆರಂಗಡಿ, ಶಾಫಿ ಕಲ್ಲುವಳಪ್ಪಿಲ್, ತಾಜುದ್ದೀನ್ ಪಡಿಂಜಾರ್ ಉಪಸ್ಥಿತರಿದ್ದರು.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries