HEALTH TIPS

ಸೋಷಿಯಲ್‌ ಮೀಡಿಯಾದಿಂದಾಗಿ ಸ್ಕೂಲ್ ಹುಡುಗರಿಗೆ ವಾರದಲ್ಲಿ ಒಂದು ರಾತ್ರಿಯ ನಿದ್ದೆ ಮಿಸ್‌ ಆಗುತ್ತಿದೆ, ಹುಷಾರ್!

 

ನಿದ್ದೆಯಂತೂ ಮನುಷ್ಯನಿಗೆ ಬೇಕೇ ಬೇಕು. ಯಾಕೆಂದರೆ ದಿನವಿಡೀ ಕೆಲಸ,ಯೋಚನೆ, ಚಿಂತೆಯಲ್ಲಿ ಮುಳುಗೆದ್ದ ಮೆದುಳಿಗೆ ರೆಸ್ಟ್‌ ಅತ್ಯಗತ್ಯ. ಮೆದುಳಿಗೆ ಮಾತ್ರವಲ್ಲ ದೇಹದ ಪ್ರತಿಯೊಂದು ಅಂಗಾಂಗಳಿಗೂ ನಿದ್ದೆ ಅವಶ್ಯಕ. ರಾತ್ರಿ ನಿದ್ದೆ ಸರಿಯಾಗಿ ಹೋಗದಿದ್ದರೆ, ಮರುದಿನವಂತೂ ದೇಹದಲ್ಲಿ ಉತ್ಸಾಹವೇ ಇಲ್ಲದಂತಾಗುತ್ತೆ. ನಿಮಗೆ ಗೊತ್ತಾ ಸಾಮಾಜಿಕ ಮಾಧ್ಯಮಗಳ ಹೆಚ್ಚಿನ ಬಳಕೆಯಿಂದಾಗಿ ಪ್ರಾಥಮಿಕ ಶಾಲಾ ಮಕ್ಕಳು ವಾರದಲ್ಲಿ ಒಂದು ಪೂರ್ಣ ರಾತ್ರಿಯಷ್ಟು ಉತ್ತಮ ನಿದ್ದೆಯನ್ನು ಪಡೆಯುತ್ತಿಲ್ಲ ಎನ್ನುವುದನ್ನು ಅಧ್ಯಯನವೊಂದು ಬಹಿರಂಗಪಡಿಸಿದೆ. ಈ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಈ ಲೇಖನವನ್ನು ಮಿಸ್‌ ಮಾಡದೇ ಓದಿ.

ಲೀಸೆಸ್ಟರ್‌ನಲ್ಲಿ ನಡೆದ ಬ್ರಿಟಿಷ್ ವಿಜ್ಞಾನ ಉತ್ಸವದಲ್ಲಿ ಪ್ರಸ್ತುತಪಡಿಸಲಾದ ಡಿ ಮಾಂಟ್‌ಫೋರ್ಟ್ ವಿಶ್ವವಿದ್ಯಾಲಯದ ಡಾ ಜಾನ್ ಶಾ ನೇತೃತ್ವದಲ್ಲಿ ಈ ಅಧ್ಯಯನ ಕೈಗೊಳ್ಳಲಾಗಿತ್ತು. ಈ ಅಧ್ಯಯನದ ಪ್ರಕಾರ 10 ರಿಂದ 11 ವರ್ಷ ವಯಸ್ಸಿನವರು ಪ್ರತಿ ರಾತ್ರಿ ಶಿಫಾರಸು ಮಾಡಲಾದ 12 ಗಂಟೆಗಳ ನಿದ್ರೆಯನ್ನು ಪಡೆಯುತ್ತಿಲ್ಲ ಮತ್ತು ಬದಲಿಗೆ ಕೇವಲ 8.7 ಗಂಟೆಗಳ ನಿದ್ದೆ ಹೋಗುತ್ತಿದ್ದಾರಂತೆ..!
 
ಈ ಅಧ್ಯಯನವನ್ನು ಹತ್ತು ವರ್ಷ ವಯಸ್ಸಿನ 60 ಮಕ್ಕಳ ಮೇಲೆ ಮಾಡಲಾಗಿತ್ತು. ಅವರಲ್ಲಿ ಹೆಚ್ಚಿನವರು ಸಾಮಾಜಿಕ ಮಾಧ್ಯಮದಲ್ಲಿ ತೊಡಗಿಸಿಕೊಂಡಿದ್ದವರು. ಅವರಲ್ಲಿ ಸುಮಾರು 89 ಪ್ರತಿಶತದಷ್ಟು ಜನರು ತಮ್ಮದೇ ಆದ ಸ್ಮಾರ್ಟ್‌ಫೋನ್ ಹೊಂದಿದ್ದರು. 55.4 ಪ್ರತಿಶತ ಜನರು ಟ್ಯಾಬ್ಲೆಟ್ ಅನ್ನು ಬಳಸುತ್ತಿದ್ದಾರೆಂದು ಅಧ್ಯಯನ ವರದಿ ಮಾಡಿದೆ. ಅದರಲ್ಲಿ 23.2 ಪ್ರತಿಶತ ಜನರು ಕಂಪ್ಯೂಟರ್ ಬಳಸಿದ್ದಾರೆ ಮತ್ತು ಒಂಬತ್ತು ಪ್ರತಿಶತ ಜನರು ಸ್ಮಾರ್ಟ್ ವಾಚ್ ಬಳಸಿದ್ದಾರೆ ಎಂದು ಈ ವರದಿಯಲ್ಲಿ ಹೇಳಿದ್ದಾರೆ.


ಅಧ್ಯಯನದಲ್ಲಿ ಕಂಡುಕೊಂಡಿದ್ದು ಏನೆಂದರೆ..

ಪೂರ್ವ-ಹದಿಹರೆಯದ ಮಕ್ಕಳಲ್ಲಿ ಸಾಮಾಜಿಕ ಮಾಧ್ಯಮ, ನಿದ್ರೆ ಮತ್ತು ಕಳೆದು ಹೋಗುವ ಭಯವನ್ನು ಅನ್ನು ಅಧ್ಯಯನದ ವಿಷಯವಾಗಿ ಆಯ್ಕೆ ಮಾಡಲಾಗಿತ್ತು. ಈ ಅಧ್ಯಯನದಲ್ಲಿ ಎಂಟು ಮಕ್ಕಳಲ್ಲಿ ಒಬ್ಬರು ಅವರು ಮಲಗಿರುವಾಗ ರಾತ್ರಿಯ ಸಮಯದಲ್ಲಿ ಸಾಮಾಜಿಕ ಮಾಧ್ಯಮವನ್ನು ಬಳಸುತ್ತಾರೆ ಎನ್ನುವುದನ್ನು ಕಂಡುಕೊಂಡಿದ್ದಾರೆ.

ಈ ಅಧ್ಯಯನದಲ್ಲಿ ಸುಮಾರು 69 ಪ್ರತಿಶತ ಮಕ್ಕಳು ತಾವು ಪ್ರತಿದಿನ ನಾಲ್ಕು ಗಂಟೆಗಳ ಕಾಲ ಸಾಮಾಜಿಕ ಮಾಧ್ಯಮದಲ್ಲಿ ಇರುವುದಾಗಿ ಹೇಳಿದ್ದಾರೆ. ಸುಮಾರು 66.1 ಪ್ರತಿಶತ ಮಕ್ಕಳು ಮಲಗುವ ಎರಡು ಗಂಟೆಗಳ ಮೊದಲು ಫೋನ್ ಬಳಸುತ್ತಾರೆಂದೂ ಮತ್ತು ಆಶ್ಚರ್ಯಕರವೆಂದರೆ ಸುಮಾರು 12.5 ಪ್ರತಿಶತದಷ್ಟು ಮಕ್ಕಳು ತಾವು ನಿದ್ದೆ ಮಾಡುವಾಗ ಮಧ್ಯರಾತ್ರಿಯಲ್ಲಿ ಫೋನ್ ಬಳಸುವುದಾಗಿ ಈ ಅಧ್ಯಯನದಲ್ಲಿ ಹೇಳಿದ್ದಾರೆ.

13ಕ್ಕಿಂತ ಚಿಕ್ಕ ವಯಸ್ಸಿನ ಮಕ್ಕಳಿಗೆ ಸಾಮಾಜಿಕ ತಾಣ ಅಪಾಯಕಾರಿ

ಆಶ್ಚರ್ಯಕರ ಸಂಗತಿಯೆಂದರೆ ಅನೇಕ ಸಾಮಾಜಿಕ ಮಾಧ್ಯಮ ವೆಬ್‌ಸೈಟ್‌ಗಳು 13 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಸೈನ್ ಅಪ್ ಮಾಡಲು ಅನುಮತಿಸುವುದಿಲ್ಲ ಎಂದು ಹೇಳಿಕೊಳ್ಳುತ್ತವೆ. ಆದರೂ 13ಕ್ಕಿಂತ ಚಿಕ್ಕ ವಯಸ್ಸಿನ ಮಕ್ಕಳು ಸಾಮಾಜಿಕ ಮಾಧ್ಯಮವನ್ನು ಬಳಸುತ್ತಿರುವುದು ಆಘಾತಕಾರಿ.ಅದರಲ್ಲೂ ಟಿಕ್‌ಟಾಕ್‌ನಂತಹ ಅಪ್ಲಿಕೇಷನ್‌ಗಳು ಅತ್ಯಂತ ಜನಪ್ರಿಯ ವೇದಿಕೆಯಾಗಿದ್ದು, ಇದನ್ನು 89 ಪ್ರತಿಶತ ಮಕ್ಕಳು ಬಳಸಿದ್ದಾರೆ.

ಸುಮಾರು 83.9 ಪ್ರತಿಶತ ಜನರು ಸ್ನ್ಯಾಪ್‌ಚಾಟ್ ಅನ್ನು ಬಳಸಿದ್ದಾರೆ, 87.5 ಪ್ರತಿಶತದಷ್ಟು ಯೂಟ್ಯೂಬ್ ಬಳಸಿದ್ದಾರೆ ಮತ್ತು 57 ಪ್ರತಿಶತ ಮಕ್ಕಳು ಇನ್ಸ್ಟಾಗ್ರಾಂನಲ್ಲಿದ್ದಾರೆ, 17 ಪ್ರತಿಶತದಷ್ಟು ಮಕ್ಕಳು ಜನಪ್ರಿಯ ಆನ್‌ಲೈನ್ ಫೋರಂ ರೆಡ್ಡಿಟ್ ಅನ್ನು ಬಳಸಿದ್ದಾರೆ ಮತ್ತು ಶೇಕಡಾ 2 ಕ್ಕಿಂತ ಕಡಿಮೆ ಜನರು ಫೇಸ್‌ಬುಕ್‌ನಲ್ಲಿದ್ದಾರೆ.ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಸಮಯವನ್ನು ಕಳೆಯುವ ಮಕ್ಕಳಲ್ಲಿ ನಿದ್ರೆಯ ಗುಣಮಟ್ಟವು ಕೆಟ್ಟದಾಗಿದೆ ಎನ್ನುವ ಕಳವಳಕಾರಿ ಸಂಗತಿಯನ್ನು ಸಂಶೋಧಕರು ತಿಳಿಸಿದ್ದಾರೆ.

ಮಕ್ಕಳ ನಿದ್ದೆ ಮೇಲೆ ಬೀಳುತ್ತಿದೆ ಅಡ್ಡಪರಿಣಾಮ

ಅಧ್ಯನಕಾರ ಡಾ ಶಾ ಹೇಳುವಂತೆ, "ಮಕ್ಕಳು ಸಾಮಾಜಿಕ ಮಾಧ್ಯಮಗಳಲ್ಲಿ ತೊಡಗಿಸಿಕೊಂಡಿರುವ ಬಗೆಯನ್ನುಯೋಚಿಸಿದಾಗ ಇದು ತುಂಬಾ ಭಯಾನಕವಾಗಿದೆ. ಇದು ನಿದ್ರೆಯ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಮತ್ತು ಮಕ್ಕಳಿಗೆ ಅವರ ಅರಿವಿನ ಬೆಳವಣಿಗೆ ಮತ್ತು ನಿಜವಾಗಿಯೂ ಅವರ ಸಾಮಾಜಿಕ ಅಭಿವೃದ್ಧಿಯ ವಿಷಯದಲ್ಲಿ ಇದು ಪೂರಕವಾಗಿರದು. ಏಕೆಂದರೆ ಅವರು ಯಾವಾಗಲೂ ಆನ್‌ಲೈನ್‌ನಲ್ಲಿದ್ದರೆ, ಅವರ ವೈಯಕ್ತಿಕವಾಗಿ ಇತರರೊಂದಿಗೆ ಬೆರೆಯುವಂತಹ ಸ್ವಭಾವವೂ ಕಡಿಮೆಯಾಗುತ್ತದೆ. ಆನ್‌ಲೈನ್‌ನಲ್ಲಿ ಏನು ನಡೆಯುತ್ತಿದೆ ಎಂಬುದರ ಕುರಿತು ನೀವು ನಿರಂತರವಾಗಿ ಚಿಂತಿಸುತ್ತಿದ್ದರೆ ಮತ್ತು ಸಾಮಾಜಿಕ ಮಾಧ್ಯಮವನ್ನು ಬಿಟ್ಟು ಸ್ವಲ್ಪ ಸಮಯವಾದ ತಕ್ಷಣ ಆನ್‌ಲೈನ್‌ನಲ್ಲಿ ಏನಾಗುತ್ತೋ ಎನ್ನುವ ಆತಂಕವನ್ನು ಅನುಭವಿಸುತ್ತಾರೆ. ತಾವು ಹಾಕಿರುವ ಪೋಸ್ಟ್‌ಗಳ ಬಗ್ಗೆ ಚಿಂತೆ ಮೂಡುತ್ತದೆ, ಈ ರೀತಿಯಾಗಿ ಸಾಮಾಜಿಕ ಮಾಧ್ಯಮದಿಂದಾಗಿ ಹೆಚ್ಚು ಆತಂಕದ ಮಟ್ಟವನ್ನು ಹೊಂದಿರುವ ಮಕ್ಕಳನ್ನು ನಾವು ನೋಡಿದ್ದೇವೆ ಮತ್ತು ಸಾಮಾಜಿಕ ಮಾಧ್ಯಮಗಳು ಸುಳಿಯಂತೆ ಅದು ಮಕ್ಕಳನ್ನು ಒಳಗೆ ತಳ್ಳುತ್ತಲೇ ಇರುತ್ತದೆ''.

ಮಕ್ಕಳ ಶಾರೀರಿಕ, ಬುದ್ಧಿ ಬೆಳವಣಿಗೆಗೆ ಬೇಕಾಗಿದೆ ಸಾಕಷ್ಟು ನಿದ್ದೆ ಪ್ರೌಢಾವಸ್ಥೆಯಲ್ಲಿ ನಿದ್ದೆ ಭಾವನೆಗಳ ಸಂಸ್ಕರಣೆ ಮತ್ತು ಜ್ಞಾಪಕಶಕ್ತಿಯ ಬಲವರ್ಧನೆ, ಸೃಜನಶೀಲತೆ ಮತ್ತು ಸಮಸ್ಯೆಗಳ ಪರಿಹಾರಕ್ಕೆ ಬಹಳ ಮುಖ್ಯವಾಗಿದೆ. ನೀವು ಸಾಕಷ್ಟು ನಿದ್ರೆ ಪಡೆಯದಿದ್ದಾಗ, ಆ ಪ್ರಕ್ರಿಯೆಗಳು ಸಂಭವಿಸುವ ಅವಕಾಶವನ್ನು ಪಡೆಯುವುದಿಲ್ಲ. ನಿದ್ರೆಯ ಸಮಯದಲ್ಲಿ ಜೈವಿಕ ಪ್ರಕ್ರಿಯೆಗಳಿಗೆ ಬಂದಾಗ, ನಾವು ನಿಧಾನಗತಿಯ ನಿದ್ರೆಗೆ ಪ್ರವೇಶಿಸಿದಾಗ, ನಮ್ಮ ದೇಹವು ವಿಶ್ರಾಂತಿ ಪಡೆಯುತ್ತದೆ, ಚೇತರಿಸಿಕೊಳ್ಳುತ್ತದೆ, ಬೆಳವಣಿಗೆಯ ಹಾರ್ಮೋನ್ ಅನ್ನು ಬಿಡುಗಡೆ ಮಾಡುತ್ತದೆ. ಪ್ರೌಢಾವಸ್ಥೆಯು ಮಕ್ಕಳ ಬೆಳವಣಿಗೆಯ ಹಂತ. ಅದಕ್ಕಾಗಿಯೇ ಕಿರಿಯ ಜನರು ವಯಸ್ಕರಿಗಿಂತ ಹೆಚ್ಚು ನಿದ್ರೆ ಪಡೆಯುತ್ತಾರೆ ಏಕೆಂದರೆ ಅವರು ಜೈವಿಕ ಬದಲಾವಣೆಗಳ ಮೂಲಕ ಹೋಗುತ್ತಿದ್ದಾರೆ. ಆದರೆ ಸಾಮಾಜಿಕ ಮಾಧ್ಯಮಗಳಿಗೆ ಆತುಕೊಂಡು ನಿದ್ದೆ ಕೆಟ್ಟಾಗ ಇವೆಲ್ಲದರ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಸಂಶೋಧಕ ಡಾ.ಶಾ ವಿವರಿಸಿದ್ದಾರೆ. ಈ ಲೇಖನದ ಮೂಲಕ ತಿಳಿಸುವುದೆಂದರೆ ಪ್ರೌಢಾವಸ್ಥೆಯಲ್ಲಿ ಮಕ್ಕಳ ಕೈಗೆ ಹೆಚ್ಚು ಮೊಬೈಲ್‌, ಟ್ಯಾಬ್ಲೆಟ್‌, ಲ್ಯಾಪ್‌ಟಾಪ್‌ಗಳಾಗಲಿ ನೀಡಬೇಡಿ. ಈಗಿನ ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲಿ ಈ ಗ್ಯಾಜೆಟ್‌ಗಳು ಪ್ರಯೋಜನಕಾರಿ. ಆದರೆ ಶಿಕ್ಷಣವನ್ನು ಹೊರತುಪಡಿಸಿ, ಸಾಮಾಜಿಕ ಮಾಧ್ಯಮಗಳತ್ತ ಮಕ್ಕಳು ಹೆಚ್ಚು ಕಣ್ಣುಹಾಯಿಸಿದರೆ, ಅದರಲ್ಲೇ ಹೆಚ್ಚು ಸಮಯ ಕಳೆದರೆ ಮಕ್ಕಳ ಬೆಳವಣಿಗೆಯೂ ಕುಂಠಿತವಾಗುವುದು ಮಾತ್ರವಲ್ಲ, ಭವಿಷ್ಯದಲ್ಲೂ ಸಮಸ್ಯೆಯನ್ನು ಹೆಚ್ಚಿಸಬಹುದು. ಹಾಗಾಗಿ ಪೋಷಕರೇ ಮಕ್ಕಳ ಕೈಗೆ ಗ್ಯಾಜೆಟ್‌ಗಳನ್ನು ನೀಡಿದರೂ ಅವರತ್ತ ಗಮನವಹಿಸಿ.Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


Qries