HEALTH TIPS

ಬ್ರಹ್ಮ್ಯಕ್ಯ ಕೇಶವಾನಂದ ಭಾರತೀ ಸ್ವಾಮೀಜಿಯವರು ಮಠ ಮತ್ತು ಯತಿವರ್ಯರ ಚಟುಟಿಕೆಗಳಿಗೆ ಮೇಲ್ಪಂಕ್ತಿ ಹಾಕಿಕೊಟ್ಟ ಸನ್ಯಾಸಿ -ಆರಾಧನೋತ್ಸವದಲ್ಲಿ ಹರ್ಷೇಂದ್ರಕುಮಾರ್ ಅಭಿಮತ



           ಕಾಸರಗೋಡು: ಶ್ರೀ ಎಡನೀರು ಮಠದ ಕೃಷ್ಣೈಕ್ಯ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಅವರು ಮಠ ಮತ್ತು ಮಠಾಧೀಶರ ಚಟುವಟಿಕೆಗಳಿಗೆ ಮೇಲ್ಪಂಕ್ತಿ ಹಾಕಿಕೊಟ್ಟ ಮಹಾನ್ ಚೇತನ ಆಗಿದ್ದರು ಎಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸಮೂಹ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಡಿ. ಸುರೇಂದ್ರ ಕುಮಾರ್ ತಿಳಿಸಿದ್ದಾರೆ.
           ಅವರು ಬುಧವಾರ ಎಡನೀರು ಕೃಷ್ಣೈಕ್ಯ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಅವರ ಎರಡನೇ ವಾರ್ಷಿಕ ಆರಾಧನಾ ಮಹೋತ್ಸವದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಗುರುನಮನ ಸಲ್ಲಿಸಿ ಮಾತನಾಡಿದರು.



           ಶ್ರೀಧರ್ಮಸ್ಥಳ ಮತ್ತು ಎಡನೀರು ಮಠಕ್ಕೆ ಅವಿನಾಭಾವ ಸಂಬಂಧವಿದೆ. ಯಕ್ಷಗಾನ, ಸಂಗೀತ ಸೇರಿದಂತೆ ವಿವಿಧ ಕಲೆಗಳ ಪೋಷಣೆಯ ಕೇಂದ್ರವಾಗಿರುವ ಎಡನೀರು ಮಠ ಹಲವಾರು ಕಲಾವಿದರಿಗೆ ಆಶ್ರಯ ನೀಡಿದೆ. ಕರ್ನಾಟಕದಲ್ಲಿ ಕನ್ನಡ ಭಾಷೆಯನ್ನು ಉತ್ತುಂಗಕ್ಕೇರಿಸಿದವರಲ್ಲಿ ಡಾ. ರಾಜ್‍ಕುಮಾರ್ ಅವರಂತೆ ಕಾಸರಗೋಡಿನಲ್ಲಿ ಯಕ್ಷಗಾನಕ್ಕೆ ತನ್ನದೇ ಆದ ಚೌಕಟ್ಟು ಒದಗಿಸಿಕೊಟ್ಟ ಖ್ಯಾತಿ ಶ್ರೀಗಳಿಗೆ ಸಲ್ಲುತ್ತದೆ. ತಮ್ಮ ಸರಳತೆ, ಮೃದು ಸ್ವಭಾವದಿಂದ ಶಿಷ್ಯಂದಿರನ್ನು ತನ್ನತ್ತ ಆಕರ್ಷಿಸುತ್ತಿದ್ದ ಕೇಶವಾನಂದ ಭಾರತೀ ಸ್ವಾಮೀಜಿ ಅವರು ಭಕ್ತ ಸಮೂಹಕ್ಕೆ ತಮ್ಮ ಪ್ರೀತಿ ಧಾರೆಯೆರೆದಿದ್ದಾರೆ.  ಕೃಷ್ಣೈಕ್ಯ ಕೇಶವಾನಂದ ಭಾರತೀ ಸ್ವಾಮೀಜಿ ಅವರು ಹಾಕಿಕೊಟ್ಟ ಪಥದಲ್ಲಿ ಸಾಗುತ್ತಿರುವ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರ ಕೆಲಸಕಾರ್ಯಗಳಿಗೆ ನಮ್ಮೆಲ್ಲರ ಸಹಕಾರ, ಪ್ರೋತ್ಸಾಹ ಸದಾ ಇರಲಿರುವುದಾಗಿ ತಿಳಿಸಿದರು. ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿದರು.


          ಈ ಸಂದರ್ಭ ಕಾಸರಗೋಡಿನ ವೈದ್ಯ ಡಾ. ಬಿ.ಎಸ್. ರಆವ್ ಹಾಗೂ ವೈದ್ಯ ಸಾಹಿತಿ ಡಾ. ರಮಾನಂದ ಬನಾರಿ ಅವರಿಗೆ ಪೂಜ್ಯ ಶ್ರೀ ಕೇಶವಾನಂದ ಭಾರತೀ ಸ್ಮøತಿ ಗೌರವ ಪ್ರದಾನ ಮಾಡಲಾಯಿತು. ಹಿರಣ್ಯ ವೆಂಕಟೇಶ್ವರ ಭಟ್ ಮತ್ತು ಡಾ. ಪ್ರಭಾಕರ ಜೋಷಿ ಅಭಿನಂದಿತರ ಪರಿಚಯದೊಂದಿಗೆ ಶುಭಾಶಂಸನೆಗೈದರು.  ಉದ್ಯಮಿ ಸುರೇಶ್ ನಾಯ್ಕ್ ಪೂನಾ ಮುಂತಾದವರು ಉಪಸ್ಥಿತರಿದ್ದರು. ಲೋಕಶಿಕ್ಷಣ ಟ್ರಸ್ಟ್ ಧರ್ಮದರ್ಶಿ ಟಿ.ಶ್ಯಾಮ ಭಟ್ ಐ.ಎ.ಎಸ್ ಸ್ವಾಗತಿಸಿದರು. ಎಂ.ಎಲ್ ಸಾಮಗ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಅಂಗವಾಗಿ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ 'ಚಂದ್ರಾವಳಿ ವಿಲಾಸ-ಮಾಯಾ ಮಾರುತೇಯ-ಚೂಡಾಮಣಿ-ಮಕರಾಕ್ಷ ಕಾಳಗ'ಯಕ್ಷಗಾನ ಬಯಲಾಟ ಜರುಗಿತು.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries