HEALTH TIPS

ರಂಗಚಿನ್ನಾರಿಯಿಂದ 'ಮುತ್ತು ಉದುರುವ ಸಮಯ': ಪದ್ಮಕುಟೀರದಲ್ಲಿ ರಂಗೇರಿದ ಕನ್ನಡದ ಖ್ಯಾತನಾಮರೊಂದಿಗಿನ ಮಧುರ ಮಿಲನ ಕಾರ್ಯಕ್ರಮ           
 
           ಕಾಸರಗೋಡು: ರಂಗಚಿನ್ನಾರಿ ಕಾಸರಗೋಡು ಮತ್ತು ಬೆಂಗಳೂರಿನ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದೊಂದಿಗೆ ನಗರದ ಕರಂದಕ್ಕಾಡು ಪದ್ಮಗಿರಿ ಕಲಕುಟೀರದಲ್ಲಿ ಆಯೋಜಿಸಲಾದ ಕಾರ್ಯಕ್ರಮ ಕನ್ನಡದ ಖ್ಯಾತನಾಮರ ಸಮ್ಮಿಲನಕ್ಕೆ ಕಾರಣವಾಯಿತು.
              ಪದ್ಮಗಿರಿ ಕಲಾಕುಟೀರದ ಡಾ. ಶ್ರೀಪಾದ ರಾವ್ ವೇದಿಕೆ ಅಕ್ಷರಶ: ಕನ್ನಡದ ಕಟ್ಟಾಳುಗಳ, ಪಂಡಿತ ಪಾಮರರ, ಸಾಂಸ್ಕøತಿಕ ಕಲಾವಿದರ ಮಧುರ ಮಿಲನದ ತಾಣವಾಗಿ ಮಾರ್ಪಟ್ಟಿತ್ತು. 'ಮುತ್ತು ಉದುರುವ ಸಮಯ'ಎಂಬ ವಿಶೇಷ ಕಾರ್ಯಕ್ರಮವನ್ನು ರಂಗ ಚಿನ್ನಾರಿ ಆಯೋಜಿಸಿತ್ತು. ಕಲೆ, ಸಾಹಿತ್ಯ, ಸಂಸ್ಕøತಿ, ಹಾಸ್ಯ, ಸಂಗೀತ, ಕತೆ, ವಿಡಂಬನೆ, ಸಂವಾದ, ಹರಟೆ, ಎಲ್ಲವೂ ಅಲ್ಲಿತ್ತು. ಒಂದಷ್ಟು ಕತೆ, ಸಾಹಿತ್ಯ, ಹರಟೆ, ಹಾಸ್ಯಗಳ ಮಧ್ಯೆ ಖ್ಯಾತ ಗಾಯಕರಿಂದ ಗಾಯನದ ರಸದೌತಣವನ್ನೂ ಉಣಬಡಿಸಲಾಯಿತು. ಡಾ. ಬಿ.ಎ ವಿವೇಕ್ ರೈ, ಸುಬ್ರಾಯ ಚೊಕ್ಕಾಡಿ, ವೈ.ಕೆ ಮುದ್ದುಕೃಷ್ಣ, ಡಾ. ನಾ.ದಾ ಶೆಟ್ಟಿ, ಅಂತಾರಾಷ್ಟ್ರೀಯ ಖ್ಯಾತಿಯ ಚಿತ್ರ ರಚನಾಕಾರ ಪಿ.ಎಸ್ ಪುಣಿಂಚಿತ್ತಾಯ, ಖ್ಯಾತ ಹಾಸ್ಯ ಸಾಹಿತಿ ಹೆಚ್. ದುಂಡಿರಾಜ್, ಡಾ. ಪ್ರಮಿಳಾ ಮಾಧವ್, ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಹೀಗೆ ಹತ್ತು ಹಲವು ಮಂದಿ ಖ್ಯಾತನಾಮರೊಂದಿಗೆ ಮಧುರ ಮಿಲನ ನಡೆಯಿತು. ಹೆಚ್. ದುಂಡೀರಾಜ್ ಅವರ ಹಾಸ್ಯ ಚಟಾಕಿಗಳು ಸಭಿಕರನ್ನು ನಗೆಗಡಲಲ್ಲಿ ತೇಲಿಸಿತು.            ಬೆಳಗ್ಗೆ ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರು ಕಾರ್ಯಕ್ರಮವನ್ನು ದೀಪ ಪ್ರಜ್ವಲನಗೊಳಿಸುವ ಮೂಲಕ ಉದ್ಘಾಟಿಸಿ ಆಶೀರ್ವಚನ ನೀಡಿದರು. ಈ ಸಂದರ್ಭ ಖ್ಯಾತ ಹಾಡುಗಾರ, ವೈ.ಕೆ ಮುದ್ದುಕೃಷ್ಣ ಅವರ ಆತ್ಮ ಕಥನ'ಹಾಡು ಹಿಡಿದ ಜಾಡು'ಕೃತಿಯನ್ನು ಹಂಪಿ ಕನ್ನಡ ವಿಶ್ವ ವಿದ್ಯಾಲಯದ ನಿವೃತ್ತ ಉಪ ಕುಲಪತಿ ಡಾ. ಬಿ.ಎ ವಿವೇಕ್ ರೈ ಅವರು ಎಡನೀರುಶ್ರೀಗಳ ಉಪಸ್ಥಿತಿಯಲ್ಲಿ ಲೋಕಾರ್ಪಣೆಗೈದರು. ಇದೇ ವೇದಿಕೆಯಲ್ಲಿ ಡಾ. ನಾ.ದಾ ಶೆಟ್ಟಿ ಅವರ 'ಅಶ್ವತ್ಥಾಮ'ಕೃತಿಯನ್ನೂ ಬಿಡುಗಡೆಗೊಳಿಸಲಾಯಿತು. ಕಾಸರಗೋಡು ಚಿನ್ನಾ ಮತ್ತು ಡಾ. ನಾ.ದಾ. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
          

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


Qries