HEALTH TIPS

ನಾಳೆ ರಾಜ್ಯಾದ್ಯಂತ ಕಾರ್ಯನಿರ್ವಹಿಸಲಿರುವ ಶಾಲೆಗಳು: ರಜೆ ಇಲ್ಲ: ಸರ್ಕಾರ                   ತಿರುವನಂತಪುರ: ರಾಜ್ಯದಲ್ಲಿ ನಾಳೆ ವಿದ್ಯಾಸಂಸ್ಥೆಗಳು ಕಾರ್ಯನಿರ್ವಹಿಸಲಿವೆ. ರಾಜ್ಯ ಶಿಕ್ಷಣ ಕ್ಯಾಲೆಂಡರ್ ಪ್ರಕಾರ ನಾಳೆ ಶಾಲೆ ತೆರೆಯಲಿದೆ.
                   ಇಂದು ರಾಜ್ಯದಲ್ಲಿ ಹರತಾಳ ಘೋಷಣೆ ಮಾಡಿರುವುದರಿಂದ ಬಹುತೇಕ ಶಾಲೆಗಳಲ್ಲಿ ತರಗತಿಗಳನ್ನು ನಡೆಸಲಾಗಿಲ್ಲ ಎಂದು ತಿಳಿದುಬಂದಿದೆ.
                      ನಾಳೆ ಮಾತ್ರವಲ್ಲದೆ ಈ ವರ್ಷ ಇನ್ನೂ 2 ಶನಿವಾರಗಳು ಕೆಲಸದ ದಿನಗಳಾಗಿ ಬರಲಿವೆ. ರಾಜ್ಯದ ಶಾಲೆಗಳು ಶನಿವಾರ, ಅಕ್ಟೋಬರ್ 29 ಮತ್ತು ಡಿಸೆಂಬರ್ 3 ರಂದು ತೆರೆದಿರುತ್ತವೆ. ಸೆಪ್ಟೆಂಬರ್, ಅಕ್ಟೋಬರ್ ಮತ್ತು ಡಿಸೆಂಬರ್ ಹೊರತುಪಡಿಸಿ ಈ ವರ್ಷ ಶನಿವಾರದ ಶಾಲೆಗಳಿಗೆ ಯಾವುದೇ ಕೆಲಸದ ದಿನಗಳಿಲ್ಲ. ಆದರೆ ಪೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಗಳಿಗೆ ಇದು ಅನ್ವಯಿಸುವುದಿಲ್ಲ.
         ಎನ್‍ಐಎಯ ರಾಷ್ಟ್ರವ್ಯಾಪಿ ತಪಾಸಣೆಯನ್ನು ಪ್ರತಿಭಟಿಸಿ ಪಾಪ್ಯುಲರ್ ಫ್ರಂಟ್ ಹರ್ತಾಳ್ ನ ಭಾಗವಾಗಿ ವಿಶ್ವವಿದ್ಯಾನಿಲಯಗಳು ಇಂದು ನಡೆಯಬೇಕಿದ್ದ ಪರೀಕ್ಷೆಗಳನ್ನು ಮುಂದೂಡಿದ್ದವು. ಮತ್ತೊಂದೆಡೆ, ಪಿಎಸ್‍ಸಿ ಪರೀಕ್ಷೆಗಳಿಗೆ ಯಾವುದೇ ಬದಲಾವಣೆ ಇಲ್ಲ ಎಂದು ಅಧಿಕಾರಿಗಳು ನಿನ್ನೆ ತಿಳಿಸಿದ್ದರು. ವಿಶ್ವವಿದ್ಯಾಲಯದ ಪರೀಕ್ಷೆಗಳ ಪರಿಷ್ಕøತ ದಿನಾಂಕವನ್ನು ಮುಂದೆ ಪ್ರಕಟಿಸಲಾಗುವುದು.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


Qries