HEALTH TIPS

ಕೊರೊನಾ ವಿರುದ್ಧದ ಭಾರತದ ಮೊದಲ ಮದ್ದು:'ವಿನ್‌ಕೋವ್-19'ನ 2ನೇ ಟ್ರಯಲ್‌ ಯಶಸ್ವಿ

 

               ಹೈದರಾಬಾದ್: 'ಸಾರ್ಸ್‌-ಕೋವ್-2' (ಕೊರೊನಾ ವೈರಸ್‌) ವೈರಸ್‌ ಸೋಂಕಿನ ಚಿಕಿತ್ಸೆಗಾಗಿ ಅಭಿವೃದ್ಧಿಪಡಿಸಿರುವ 'ವಿನ್‌ಕೋವ್-19' ಔಷಧಿಯ 2ನೇ ಹಂತದ ಕ್ಲಿನಿಕಲ್‌ ಟ್ರಯಲ್‌ ಯಶಸ್ವಿಯಾಗಿದೆ.

                 ಔಷಧಿಯನ್ನು ಅಭಿವೃದ್ಧಿಪಡಿಸಿರುವ ಹೈದರಾಬಾದ್‌ ವಿಶ್ವವಿದ್ಯಾಲಯ, ಸಿಎಸ್‌ಐಆರ್‌-ಸಿಸಿಎಂಬಿ ಹಾಗೂ ವಿಐಎನ್‌ಎಸ್‌ ಬಯೋಪ್ರಾಡಕ್ಟ್ಸ್‌ ಲಿಮಿಟೆಡ್‌, ಕ್ಲಿನಿಕಲ್‌ ಟ್ರಯಲ್‌ ಯಶಸ್ವಿಯಾಗಿರುವ ಕುರಿತು ಮಂಗಳವಾರ ಘೋಷಣೆ ಮಾಡಿವೆ.

                   ಕೊರೊನಾ ವೈರಸ್ ವಿರುದ್ಧ ಭಾರತದಲ್ಲಿ ಅಭಿವೃದ್ಧಿಪಡಿಸಲಾಗಿರುವ 'ಮೊದಲ ಔಷಧಿ' ಇದಾಗಿದೆ ಎಂದು ಈ ಸಂಸ್ಥೆಗಳು ಹೇಳಿಕೊಂಡಿವೆ.

                 'ವಿನ್‌ಕೋವ್‌-19'ನ 3ನೇ ಹಂತದ ಕ್ಲಿನಿಕಲ್‌ ಟ್ರಯಲ್‌ನ ಸಿದ್ಧತೆ ನಡೆಯುತ್ತಿದ್ದು, ಔಷಧಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಹ ಅನುಮತಿ ಕೋರಲಾಗಿದೆ ಎಂದು ಸಂಸ್ಥೆಗಳು ಹೇಳಿವೆ.

                    'ಕೊರೊನಾ ವೈರಸ್ ಸೋಂಕಿಗೆ ಚಿಕಿತ್ಸೆ ನೀಡಲು ಅಭಿವೃದ್ಧಿಪಡಿಸಲಾಗಿರುವ ಪ್ರತಿಕಾಯಗಳಿರುವ ಈ ಔಷಧಿ ಭಾರತದಲ್ಲಿಯೇ ಮೊದಲು. ಈ ವೈರಸ್‌ ಸೋಂಕಿನ ಚಿಕಿತ್ಸೆಗೆ ಒಂದಕ್ಕಿಂತ ಹೆಚ್ಚು ಔಷಧಿಗಳ ಆಯ್ಕೆ ಹೊಂದಬೇಕಾಗಿರುವುದು ಅಗತ್ಯ' ಎಂದು ಸಿಎಸ್‌ಐಆರ್‌-ಸಿಸಿಎಂಬಿ ನಿರ್ದೇಶಕ ಡಾ.ವಿನಯ್ ನಂದಿಕೂರಿ ಹೇಳಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries