HEALTH TIPS

ತ್ಯಾಜ್ಯ ವಿಲೇವಾರಿಯಿಂದ ಕೇಂದ್ರಕ್ಕೆ ₹250 ಕೋಟಿ ಆದಾಯ ನಿರೀಕ್ಷೆ

 

               ನವದೆಹಲಿ: ವಿಶೇಷ ಸ್ವಚ್ಛ ಅಭಿಯಾನದಡಿ ತ್ಯಾಜ್ಯ ವಿಲೇವಾರಿ ಮೂಲಕ ಕೇಂದ್ರ ಸರ್ಕಾರ ₹250 ಕೋಟಿಗೂ ಅಧಿಕ ಆದಾಯ ಗಳಿಸಲಿದೆ. ಜೊತೆಗೆ ಸರಳ ಜೀವನಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಅಂದಾಜು 500 ನಿಯಮಗಳು ಮತ್ತು ಪ್ರಕ್ರಿಯೆಗಳನ್ನು ಸರಳಗೊಳಿಸಿದೆ ಎಂದು ಹಿರಿಯ ಅಧಿಕಾರಿ ವಿ.ಶ್ರೀನಿವಾಸ್‌ ಶುಕ್ರವಾರ ತಿಳಿಸಿದ್ದಾರೆ.

                    ಸ್ವಚ್ಛ ಅಭಿಯಾನದಲ್ಲಿ ಸುಮಾರು ಮೂರು ಲಕ್ಷ ಸಾರ್ವಜನಿಕ ಕುಂದುಕೊರತೆಗಳನ್ನು ನಿವಾರಿಸಲಾಗಿದೆ. ಈ ಪೈಕಿ 4,500 ಕುಂದುಕೊರತೆಗಳು ಪಿಂಚಣಿದಾರರಿಗೆ ಸಂಬಂಧಿಸಿದ್ದವು ಎಂದು ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಕುಂದುಕೊರತೆ ಇಲಾಖೆ ಕಾರ್ಯದರ್ಶಿ ಶ್ರೀನಿವಾಸ್‌ ತಿಳಿಸಿದ್ದಾರೆ.

               ಕೇಂದ್ರ ಸರ್ಕಾರದ 61,532 ಕಚೇರಿಗಳಲ್ಲಿ ಅ.2ರಿಂದ 31ರ ವರೆಗೆ ಸ್ವಚ್ಛ ಅಭಿಯಾನ ಹಮ್ಮಿಕೊಂಡಿದ್ದು, ತ್ಯಾಜ್ಯ ವಿಲೇವಾರಿಯಿಂದ ₹252.25 ಕೋಟಿ ಆದಾಯ ಬರಲಿದೆ. ಜೊತೆಗೆ 34.69 ಲಕ್ಷ ಚದರ ಅಡಿ ಹೆಚ್ಚುವರಿ ಜಾಗ ತ್ಯಾಜ್ಯಮುಕ್ತವಾಗಲಿದೆ ಎಂದು ಅವರು ತಿಳಿಸಿದ್ದಾರೆ.


 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries