HEALTH TIPS

ಕೇರಳದ ನಾಪತ್ತೆಗಳ ಹಿಂದೆ ಏನು?: ಎಂಟು ತಿಂಗಳಲ್ಲಿ 7,000 ಕಣ್ಮರೆ ಪ್ರಕರಣ!: 5 ವರ್ಷಗಳಲ್ಲಿ 60,000 ಜನರು; ಹೆಚ್ಚಿನವರು ಮಹಿಳೆಯರೇ.. ಆಘಾತಕಾರಿ ಅಂಕಿ ಅಂಶಗಳು ಬಹಿರಂಗ

  
       ತಿರುವನಂತಪುರ: ಕಳೆದ ಐದು ವರ್ಷಗಳಲ್ಲಿ ರಾಜ್ಯದಲ್ಲಿ 60,000ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
       ಇದು ವಿವಿಧೆಡೆ ಪೋಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಪ್ರಕರಣಗಳ ಸಂಖ್ಯೆ. ಈ ವರ್ಷ ಆಗಸ್ಟ್‍ವರೆಗೆ 7,408 ಮಂದಿ ನಾಪತ್ತೆಯಾಗಿದ್ದಾರೆ. ಇಷ್ಟು ನೋಂದಾಯಿತ ಅಂಕಿ-ಅಂಶಗಳಿದ್ದರೆ, ದಾಖಲಾಗದ ಅಂಕಿ-ಸಂಖ್ಯೆಗಳು ಇರಬಹುದು ಎಂದು ಅಂದಾಜಿಸಲಾಗಿದೆ.
           ಕಳೆದ ಐದು ವರ್ಷಗಳಲ್ಲಿ ಕೇರಳದಾದ್ಯಂತ 66,838 ಮಂದಿ ನಾಪತ್ತೆಯಾಗಿದ್ದಾರೆ. 2019 ರಲ್ಲಿ ಮಾತ್ರ 12,802 ಮಂದಿ ಜನರು ನಿಗೂಢ ಸಂದರ್ಭಗಳಲ್ಲಿ ನಾಪತ್ತೆಯಾಗಿದ್ದಾರೆ. ಒಂದೇ ವರ್ಷದಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಕಾಣೆಯಾದವರಲ್ಲಿ ಹೆಚ್ಚಿನವರು ಮಹಿಳೆಯರು ಎಂದು ಅಂಕಿಅಂಶಗಳು ತೋರಿಸುತ್ತವೆ. ಪೋಲೀಸರು ಜಿಲ್ಲಾವಾರು ಅಂಕಿಅಂಶಗಳನ್ನು ಮತ್ತು ಪತ್ತೆಯಾದವರ ವಿವರಗಳನ್ನು ನಿರ್ದಿಷ್ಟಪಡಿಸಿಲ್ಲ.
         ಇಂತಹ ನಾಪತ್ತೆಯಾದವರ ತನಿಖೆಯೇ ಕೇರಳವನ್ನು ಬೆಚ್ಚಿಬೀಳಿಸುವ ಆಭಿಚಾರ ಹತ್ಯೆಗಳ ವರೆಗೂ ವಿಸ್ತರಿಸಿದೆ. ಹಾಗಾಗಿ ಪ್ರತಿ ನಾಪತ್ತೆಯೂ ಈಗ ನಿಗೂಢವಾಗಿದೆ. ಪತ್ತನಂತಿಟ್ಟ ಇಳಂತೂರು ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ರಾಜ್ಯದ ಪೋಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಆರೋಪಿಗಳ ತನಿಖೆಯನ್ನು ತೀವ್ರಗೊಳಿಸುವಂತೆ ರಾಜ್ಯ ಪೋಲೀಸ್ ಮುಖ್ಯಸ್ಥರು ಸೂಚಿಸಿದ್ದಾರೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries