HEALTH TIPS

ಪೆರ್ಲದಲ್ಲಿ ಮರಾಟಿ ಬೋರ್ಡಿಂಗ್ ಹಾಲ್ ನ ನಾಲ್ಕನೇ ವಾರ್ಷಿಕೋತ್ಸವ ಆಚರಣೆ


          ಪೆರ್ಲ : ಶ್ರೀಶಾರದಾ ಮರಾಟಿ ಸಮಾಜ ಸೇವಾ ಸಂಘ ಶಾರದಾ ಮರಾಟಿ ಮಹಿಳಾ ವೇದಿಕೆ,ಶಾರದಾ ಮರಾಟಿ ಚಾರಿಟೇಬಲ್ ಟ್ರಸ್ಟ್ ಪೆರ್ಲ ಇವುಗಳ ಸಂಯುಕ್ತ ಆಶ್ರಯದಲ್ಲಿ ಪೆರ್ಲ ಮರಾಟಿ ಬೋರ್ಡಿಂಗ್ ಹಾಲ್ ನ ನಾಲ್ಕನೇ ವಾರ್ಷಿಕೋತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಿತು. ಶ್ರೀ ಶಾರದಾ ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಬಾಲಕೃಷ್ಣ ನಾಯ್ಕ್ ಬಾರಿಕ್ಕಾಡು ಧ್ವಜಾರೋಹಣಗೈದರು. ಬಳಿಕ ಗಣಪತಿ ಹವನ,ಸಾರ್ವಜನಿಕ ಶ್ರೀಸತ್ಯನಾರಾಯಣ ಪೂಜೆ ಜರಗಿತು.

            ಈ ಸಂದರ್ಭದಲ್ಲಿ ಶ್ರೀಶಾರದಾ ಭಜನಾ ಮಂಡಳಿ ಏಳ್ಕಾನ ಅವರಿಂದ ಕುಣಿತ ಭಜನೆ ಜರಗಿತು. ಬಳಿಕ ಟ್ರಸ್ಟ್ ನ ಆಧ್ಯಕ್ಷ ಡಾ.ಬಿ.ಜಿ,ನಾಯ್ಕ್  ಅವರ ಆಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಕರ್ನಾಟಕ ಮರಾಟಿ ಸಂಘದ ಅಧ್ಯಕ್ಷ ದುರ್ಗಾಪ್ರಸಾದ್ ಮಜಕಾರ್ ಉದ್ಘಾಟಿಸಿದರು.ವಿಜ್ಞಾನಿ  ರಾಷ್ಟ್ರೀಯ ವೈಮಾಂತರಿಕ್ಷ  ಪ್ರಯೋಗ ಶಾಲೆ ಬೆಂಗಳೂರಿನ ಶೋಭಾವತಿ ಎಂ.ಟಿ ಮುಖ್ಯ ಅತಿಥಿಗಳಾಗಿದ್ದರು. 


              ಕಾಸರಗೋಡು ಜಿ,ಪಂ.ಸದಸ್ಯ ನಾರಾಯಣ ನಾಯ್ಕ ಅಡ್ಕಸ್ಥಳ, ಕೇರಳ ಮರಾಟಿ ಸಂರಕ್ಷಣ ಸಮಿತಿ ರಾಜ್ಯಾಧ್ಯಕ್ಷ ಶ್ಯಾಂಪ್ರಸಾದ್ ಮಾನ್ಯ, ಮಹಿಳಾ ವೇದಿಕೆ ಆಧ್ಯಕ್ಷೆ ಪುμÁ್ಪ ಅಮೆಕ್ಕಳ, ಕೇರಳ ಮರಾಟಿ ಶಾರದೋತ್ಸವ ಸಮಿತಿ ಆಧ್ಯಕ್ಷ ರಾಜಗೋಪಾಲ ಎ.ಕೆ, ಕೇರಳ ಮರಾಟಿ ಉದ್ಯೋಗಸ್ಥರ ಸೇವಾ ಸಮಿತಿ ಅಧ್ಯಕ್ಷ ನಾರಾಯಣ ನಾಯ್ಕ ಇಳಂತೋಡಿ, ಶಾರದಾ ಮರಾಟಿ ಚಾರಿಟೇಬಲ್ ಟ್ರಸ್ಟ್ ನ ಮೇನೇಜಿಂಗ್ ಟ್ರಸ್ಟಿ ಹಾಗೂ ಮರಾಟಿ ಸಂರಕ್ಷಣಾ ಸಮಿತಿಯ ಸ್ಥಾಪಕ ಕಾರ್ಯದರ್ಶಿ ಡಾ.ಬಿ.ನಾರಾಯಣ ನಾಯ್ಕ್,ದಕ್ಷಿಣ ಕನ್ನಡ ಮರಾಟಿ ಸಂರಕ್ಷಣಾ ಸಮಿತಿಯ ಅಧ್ಯಕ್ಷರು ಶ್ರೀಧರ್ ಮುಂಡೋವು ಮೂಲೆ,ಎಣ್ಮಕಜೆ ಪಂ.ಸದಸ್ಯೆ ಕುಸುಮಾವತಿ ಟೀಚರ್,ಡಾ ಜನಾರ್ಧನ ನಾಯ್ಕ್, ಡಾ,ಕೃಷ್ಣ ನಾಯ್ಕ್,ಡಾ.ಬಿ.ಶಿವ ನಾಯ್ಕ, ಶ್ರೀ ವಿಜಯನ್ ಮೊದಲಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಯಕ್ಷಗಾನ ಕಲಾವಿದ,   ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿ ಗಡಿನಾಡ ಘಟಕ ಅಧ್ಯಕ್ಷ ಚನಿಯಪ್ಪ ನಾಯ್ಕ್ ಎನ್, ಮರಾಟಿಗರ ಹೆಮ್ಮೆಯ ಗಗನ ಸಖಿ ನಿಶಾ ಬಿ.ಕೆ.ನಾಯ್ಕ್  , ಡಾ.ಪಲ್ಲವಿ ಬಿ, ಅಂತರಾಷ್ಟ್ರೀಯ ಯೋಗಪಟು ತೃಪ್ತಿ ಎನ್ ಮತ್ತು ಯಶಶ್ವಿನಿ ಎನ್ ಅವರ ವಿಶೇಷ ಸಾಧನೆಗೆ ವಿಶಿಷ್ಟ ಸೇವಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಮರಾಟಿ ಸಮಾಜದ ಹಿರಿಯರನ್ನು, ಎಸ್ಸಸೆಲ್ಸಿ,ಪ್ಲಸ್ ಟು ಹಾಗೂ ಉನ್ನತ ಶಿಕ್ಷಣದಲ್ಲಿ ಸಾಧನೆಗೈದರವರನ್ನು,ಚುನಾಯಿತ ಜನಪ್ರತಿನಿಧಿಗಳನ್ನು,ವಿವಿಧ ಇಲಾಖೆಯ ನಿವೃತ್ತ ಉದ್ಯೋಗಸ್ಥರರನ್ನು ಸಭೆಯಲ್ಲಿ ಸನ್ಮಾನಿಸಲಾಯಿತು. ವಿಶಿಷ್ಟ ಸೇವಾ ಪುರಸ್ಕಾರ ಪಡೆದ  ಕೇರಳದ ಮರಾಟಿ ಜನಾಂಗದ ಹೆಮ್ಮೆಯ ಗಗನ ಸಖಿ ನಿಶಾ ಬಿ. ಕೆ. ನಾಯ್ಕ್ ರವರು ಯುವ ಜನತೆಗೆ  ಸ್ಫೂರ್ತಿ ಯಾದರು. ವಿಶಿಷ್ಟ ಸೇವಾ ಪುರಸ್ಕಾರ ಪಡೆದ ಇನ್ನೋರ್ವ ಪ್ರತಿಭೆ
       ಅಂತಾ ರಾಷ್ಟ್ರೀಯ ಮಟ್ಟದ ಯೋಗ ಪಟು ತೃಪ್ತಿ ಯ ನ್ ತಮ್ಮ ಯೋಗ ಪ್ರದರ್ಶನದಿಂದ ಜನರನ್ನು ಧಿಗ್ಭ್ರಮೆ ಗೊಳಿಸಿದರು.  ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಕಲ ಚೇತನೆ ತೃμÁ ಲಕ್ಷ್ಮಿ ಯವರ ನೃತ್ಯ  ಜನಮನ ದಲ್ಲಿ ಹೊಸ ಸ್ಪೂರ್ತಿಯನ್ನು ನೀಡಿತು. ಬಾಲಕೃಷ್ಣ ನಾಯ್ಕ್ ಬಾರಿಕ್ಕಾಡು ಸ್ವಾಗತಿಸಿ ಬಾಲಕೃಷ್ಣ ನಾಯ್ಕ್ ಏಳ್ಕಾನ ವಂದಿಸಿದರು. ಸತೀಶ್ ಕುಮಾರ್ ಕಯ್ಯಾರ್ ಹಾಗೂ ದಯಾನಂದ ಪಟೇಲ್ ಬಾಳಿಗುಳಿ ನಿರೂಪಿಸಿದರು. ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶನಗೊಂಡಿತು. 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


Qries