HEALTH TIPS

ಮಧ್ಯಮ ವರ್ಗಕ್ಕೆ ಉತ್ತಮ ವೈದ್ಯಕೀಯ ವಿಮೆ ಕೊಡಿ: ನೀತಿ ಆಯೋಗ

 

            ನವದೆಹಲಿ: 'ದೇಶದ ಶೇ 6.8ರಷ್ಟು ಮಧ್ಯಮ ವರ್ಗದ ಮಂದಿ ಮಾತ್ರವೇ ಖಾಸಗಿ ವೈದ್ಯಕೀಯ ವಿಮೆ ಹೊಂದಿದ್ದಾರೆ. ಆದ್ದರಿಂದ ಮಧ್ಯಮ ವರ್ಗದ ಜನರಿಗಾಗಿ ಉತ್ತಮ ಮಾದರಿಯ ವೈದ್ಯಕೀಯ ವಿಮೆಯನ್ನು ಕೊಡುವ ಅಗತ್ಯ ಇದೆ' ಎಂದು ನೀತಿ ಆಯೋಗದ (ಆರೋಗ್ಯ) ಸದಸ್ಯ ಡಾ.

ವಿ.ಕೆ. ಪಾಲ್‌ ಹೇಳಿದರು.

                   ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಮಂಗಳವಾರ ಆಯೋಜಿಸಿದ್ದ 'ಎಫ್‌ಐಸಿಸಿಐ ಹೀಲ್‌ 2022' ಕಾರ್ಯಕ್ರಮದಲ್ಲಿ 'ಭಾರತದ ಆರ್ಥಿಕ ಬೆಳವಣಿಗೆಯಲ್ಲಿ ಆರೋಗ್ಯಸೇವೆಗಳ ಪಾತ್ರ' ವಿಷಯದ ಕುರಿತು ಅವರು ಮಾತನಾಡಿದರು. 'ಕಳೆದುಹೋಗಿರುವ ಮಧ್ಯಮ ವರ್ಗ'ದ 30ರಿಂದ 40 ಕೋಟಿ ಜನರಿಗೆ ವೈದ್ಯಕೀಯ ವಿಮೆ ಬೇಕು ಎನ್ನುವುದನ್ನು ನೀತಿ ಆಯೋಗವು ಹಿಂದಿನಿಂದ ಹೇಳಿಕೊಂಡು ಬಂದಿದೆ' ಎಂದರು.

               'ಆರೋಗ್ಯ ಕ್ಷೇತ್ರದ ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿ ದೇಶದಲ್ಲಿ ಎರಡು ಮಧ್ಯಮ ಅವಧಿಯ ಬಂಡವಾಳ ಯೋಜನೆಗಳಿವೆ. ಒಂದು, 15ನೇ ಹಣಕಾಸು ಆಯೋಗದ ಅಡಿಯಲ್ಲಿ ₹77 ಸಾವಿರ ಕೋಟಿ ಹೂಡಿಕೆ ಆಗುತ್ತಿದೆ. ಇನ್ನೊಂದು ಆಯುಷ್ಮಾನ್‌ ಭಾರತ ವಿಮೆ ಮಿಷನ್‌ ಅಡಿಯಲ್ಲಿ ₹64 ಸಾವಿರ ಕೋಟಿ ಬಳಕೆಯಾಗುತ್ತಿದೆ. ಈ ಎರಡೂ ಐದು ವರ್ಷದ ಅವಧಿಗೆ ಹೂಡಿಕೆ ಆಗುವಂಥವು' ಎಂದು ವಿವರಿಸಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries