HEALTH TIPS

ರಂಗಸಿರಿ ಸಾಂಸ್ಕøತಿಕ ವೇದಿಕೆಯ ನೇತೃತ್ವದಲ್ಲಿ ಬಲೀಂದ್ರ ರಚನಾ ಸ್ಪರ್ಧೆ: ಬದಿಯಡ್ಕದಲ್ಲಿ ಗಮನಸೆಳೆದ ಪರ್ಬ ಆಚರಣೆ; ಹಸಿರುಪಟಾಕಿ

      
            ಬದಿಯಡ್ಕ: ರಂಗಸಿರಿ ಸಾಂಸ್ಕøತಿಕ ವೇದಿಕೆಯ ಮುಂದಾಳುತ್ವದಲ್ಲಿ ಬದಿಯಡ್ಕದಲ್ಲಿ `ಬಲೀಂದ್ರ ಪರ್ಬ' ವಿಶಿಷ್ಟ ರೀತಿಯ ಕಾರ್ಯಕ್ರಮ ಆಯೋಜಿಸಲಾಯಿತು. ಇಲ್ಲಿನ ಗಣೇಶಮಂದಿರದ ಮುಂಭಾಗದಲ್ಲಿ ಜರಗಿದ ಸಾಂಪ್ರದಾಯಿಕ ಬಲೀಂದ್ರ ರಚನಾ ಸ್ಪರ್ಧೆಯಲ್ಲಿ ನಾಲ್ಕು ತಂಡಗಳು ಭಾಗವಹಿಸಿದ್ದುವು. ನಮ್ಮ ನಾಡು, ಸಂಸ್ಕøತಿ, ಆಚರಣೆಗಳು ಜನಮಾನಸದಲ್ಲಿ ನೆಲೆಯೂರಬೇಕುನ್ನುವ ಸದುದ್ದೇಶದಿಂದ ಆಯೋಜಿಸಲಾದ ಬಲೀಂದ್ರ ಪರ್ಬ ಗಮನಸೆಳೆಯಿತು. ತುಳುನಾಡಿಗೆ ಬಲಿ ಚಕ್ರವರ್ತಿಯ ಆಗಮನದ ಪುಣ್ಯದಿನ ಬಲಿಪಾಡ್ಯದಂದು ಸ್ಪರ್ಧಾಳುಗಳು ಪಾಲ್ಗೊಂಡು ಸಾಂಪ್ರದಾಯಿಕ ಶೈಲಿಯಲ್ಲಿ ಬಲ್ಯಂದ್ರ ಬಲ್ಯಂದ್ರ ಹರಿಯೋ ಹರಿ ಎಂಬುದಾಗಿ ಕರೆಯುವ ಮೂಲಕ ತಮ್ಮ ಚಕ್ರವರ್ತಿಗೆ ಸ್ವಾಗತವನ್ನು ನೀಡಿದರು. ಈ ಸಂದರ್ಭದಲ್ಲಿ ಆತನಿಗೆ ನೀಡಲಾಗುವ ತಿಂಡಿ ತಿನಿಸುಗಳಾದ ಮೂಡೆಕೊಟ್ಟಿಗೆ, ರಸಾಯನ, ಸಿಹಿ ಅವಲಕ್ಕಿ, ಪಾನಕ, ನೀರುದೋಸೆ, ಬೆಲ್ಲಕಾಯಿ, ಹೊದಳು, ಸೇಮಿಗೆ ಇತ್ಯಾದಿಗಳ ಪರಿಚಯವನ್ನು ತಂಡಗಳು ಮಾಡಿಕೊಟ್ಟರು.



                  ಬಲೀಂದ್ರ ರಚನೆ :
           ಒಟ್ಟು ನಾಲ್ಕು ತಂಡಗಳು ಬಲೀಂದ್ರ ರಚನಾ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವು. ನಾಲ್ಕು ಜನರ ಒಂದು ತಂಡವೆಂಬ ನಿಯಮ, ತಯಾರಿಗೆ ಒಂದು ಗಂಟೆಯ ಸಮಯಾವಕಾಶವನ್ನು ನೀಡಲಾಗಿತ್ತು. ಸಾಧಾರಣವಾಗಿ ಕೃಷಿಕರು ಬಾಳೆ ದಂಡಿನಿಂದ ಬಲೀಂದ್ರನ ರಚನೆಯನ್ನು ಮಾಡುತ್ತಾರೆ. ಪಾಲೆ ಮರದ ಗೆಲ್ಲಿನಿಂದಲೂ ಬಲೀಂದ್ರನನ್ನು ಮಾಡುವುದು ವಿಶೇಷವಾಗಿದೆ. ಕಾಸರಗೋಡಿನ ಮಲಯಾಳಿಗರು `ಪೊಲಿಯೇಂದ್ರ' ಎಂಬ ಹೆಸರಿನಿಂದ ಬಲೀಂದ್ರ ಸಂಪ್ರದಾಯವನ್ನು ಇಂದಿಗೂ ಕೆಲವೆಡೆ ಆಚರಿಸುತ್ತಾರೆ. ಪಾರೆಹೂವಿನ ಮಾಲೆ ಬಲೀಂದ್ರನಿಗೆ ವಿಶೇಷವಾಗಿದೆ. ಅದಲ್ಲದೆ ತುಳಸಿ, ಚೆಂಡು ಹೂವುಗಳ ಬಳಕೆಯೂ ಇದೆ. ದೀಪಾವಳಿ ಸಂರ್ಧೆ ಹಣತೆಯ ಬೆಳಕಿನಿಂದ ಬಲೀಂದ್ರ ಆಕರ್ಷವಾಗಿ ಕಾಣುತ್ತಾನೆ. ಗಣೇಶ ಭಟ್ ಮುಣ್ಚಿಕ್ಕಾನ ಮತ್ತು ತಂಡದವರು ಮೊದಲ ಬಹುಮಾನವಾಗಿ ರೂ.2500 ಮತ್ತು ಶಾಶ್ವತ ಫಲಕವನ್ನು ಪಡೆದುಕೊಂಡರು. ಇತರ ತಂಡಗಳಿಗೆ ಪ್ರೋತ್ಸಾಹಕವಾಗಿ ರೂ. 500 ಮತ್ತು ಪ್ರಮಾಣಪತ್ರವನ್ನು ವಿತರಿಸಲಾಯಿತು. ನಿರ್ಣಾಯಕರಾಗಿ ಹಿರಿಯ ಚಿತ್ರ ಕಲಾ ಶಿಕ್ಷಕ ಬಾಲ ಮಧುರಕಾನನ, ಅಧ್ಯಾಪಿಕೆ ಪ್ರಭಾವತಿ ಕೆದಿಲ್ಲಾಯ ಪುಂಡೂರು, ಕಲಾವಿದೆ ಅನಘ್ರ್ಯ ಟಿ. ಭಟ್ ಸಹಕರಿಸಿದರು.
                        ಪರಿಸರ ಸ್ನೇಹಿ ಪಟಾಕಿ :
          ಓಟೆ ಬಿದಿರಿನಿಂದ ಗಣೇಶ್ ಭಟ್ ಮುಣ್ಚಿಕ್ಕಾನ ಅವರು ವಿಶೇಷವಾಗಿ ತಯಾರಿಸಿದ ಫಿರಂಗಿ ಸಾರ್ವಜನಿಕರ ಗಮನಸೆಳೆಯಿತು. ಒಂದೂವರೆ ಮೀಟರ ಉದ್ದದ ಬಿದಿರಿಗೆ ತೂತು ಮಾಡಿ ಅದರಲ್ಲಿ ಸೀಮೆ ಎಣ್ಣೆಯನ್ನು ಬಳಸಿ ಹೊಗೆಯನ್ನು ತುಂಬುವಂತೆ ಮಾಡಲಾಗುತ್ತದೆ. ನಂತರ ದೊಂದಿಯ ಮೂಲಕ ಕೊಳವೆ ತೂತಿಗೆ ಬೆಂಕಿಯನ್ನು ಸ್ಪರ್ಶಿಸಿದ ಕೂಡಲೇ ಅದರಿಂದ ಸ್ಪೋಟದ ಶಬ್ದ ಉಂಟಾಗುತ್ತದೆ. ಪರಿಸರಕ್ಕೆ ಯಾವುದೇ ಹಾನಿಯುಂಟಾಗದ ಈ ಪಟಾಕಿಯು ಅಪಾಯರಹಿತವೂ ಆಗಿದೆ.
          ಕಾರ್ಯಕ್ರಮದ ಕೊನೆಯಲ್ಲಿ ಬಹುಮಾನ ವಿತರಿಸಲಾಯಿತು. ರಂಗಸಿರಿಯ ಗೌರವ ಸಲಹೆಗಾರರಾದ ಲಕ್ಷ್ಮಣ ಪ್ರಭು ಕರಿಂಬಿಲ, ಡಾ. ಬೇ.ಸೀ. ಗೋಪಾಲಕೃಷ್ಣ ಭಟ್, ಡಾ.ನರೇಶ ಮುಳ್ಳೇರಿಯ, ದಿನೇಶ್ ಬೊಳುಂಬು, ರಂಗಸಿರಿಯ ಸದಸ್ಯರು, ಹಿತೈಷಿಗಳು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.



         ಪ್ರಕೃತಿಗೆ ಹಾನಿಯುಂಟಾಗದಂತೆ ಮಕ್ಕಳಿಗೆ ಮನೋರಂಜನೆ ನೀಡಲು ಇದೂ ಒಂದು ವ್ಯವಸ್ಥೆಯಾಗಿದೆ. ಹಸಿರು ಪಟಾಕಿಯು ಪರಿಸಕ್ಕೆ ಯಾವುದೇ ಹಾನಿಯುಂಟುಮಾಡುವುದಿಲ್ಲ. ಹಬ್ಬ ಎಂದರೆ ಎಲ್ಲರೂ ಸೇರಿ ಆಚರಿಸುವುದಾಗಿದ್ದು, ರಂಗಸಿರಿ ಸಂಸ್ಥೆಯು ಇದಕ್ಕೊಂದು ವೇದಿಕೆಯನ್ನು ಸೃಷ್ಟಿಸಿರುವುದು ನಮ್ಮ ನಾಡಿಗೇ ಹೆಮ್ಮೆಪಡುವ ವಿಚಾರವಾಗಿದೆ.
              ಗಣೇಶ್ ಭಟ್ ಮುಣ್ಚಿಕ್ಕಾನ, ಕೃಷಿಕರು.
         ನಮ್ಮ ನಾಡು, ನುಡಿ, ಸಂಸ್ಕøತಿಯ ಪರಿಚಯ ಮುಂದಿನ ತಲೆಮಾರಿಗೆ ದಾಟಿಸುವುದು ನಮ್ಮ ಕರ್ತವ್ಯವಾಗಿದೆ ಎಂಬುದನ್ನು ಮನಗಂಡು ತುಳುನಾಡಿನ ಚಕ್ರವರ್ತಿ ಬಲೀಂದ್ರನನ್ನು ಸ್ವಾಗತಿಸುವ ವಿಶಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ತೆಂಕಣ ಕೇರಳದಲ್ಲಿ ಓಣಂ ಸಂದರ್ಭದಲ್ಲಿ ಬಲೀಂದ್ರನನ್ನು ಸ್ವಾಗತಿಸುವುದು ವಾಡಿಕೆ. ಆದರೆ ನಾವು ತುಳುನಾಡಿನಲ್ಲಿ ದೀಪಾವಳಿ ಪರ್ಬದ ದಿನಗಳಲ್ಲಿ ಬಲೀಂದ್ರ ಕರೆಯುವುದು ಸಂಪ್ರದಾಯವಾಗಿದೆ.
                   - ಡಾ. ಶ್ರೀಶಕುಮಾರ ಪಂಜಿತ್ತಡ್ಕ, ರಂಗಸಿರಿ ಸಾಂಸ್ಕøತಿಕ ವೇದಿಕೆಯ ಸ್ಥಾಪಕರು
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries