HEALTH TIPS

ಶಬರಿಮಲೆ ಯಾತ್ರೆ; ಆಹಾರ ಮಳಿಗೆ ಸಂಸ್ಥೆಗಳಿಗೆ ಪರವಾನಗಿ: ಆಹಾರ ಸುರಕ್ಷತಾ ದಳಗಳಿಂದ ತಪಾಸಣೆ: ಆರೋಗ್ಯ ಸಚಿವೆ


          ತಿರುವನಂತಪುರ: ಶಬರಿಮಲೆ ಯಾತ್ರೆಗೆ ಸಂಬಂಧಿಸಿದಂತೆ ಆಹಾರ ಮಳಿಗೆ ಸ್ಥಾಪನೆಗೆ ಪರವಾನಗಿ ಅಥವಾ ನೋಂದಣಿ ಕಡ್ಡಾಯಗೊಳಿಸಲಾಗುವುದು ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.
        ಸನ್ನಿಧಿ, ಪಂಪಾ, ನಿಲಕ್ಕಲ್ ಮತ್ತು ಎರುಮೇಲಿಯಲ್ಲಿ ಸುರಕ್ಷಿತ ಆಹಾರ ಮತ್ತು ಕುಡಿಯುವ ನೀರನ್ನು ಖಚಿತಪಡಿಸಿಕೊಳ್ಳಲು 24 ಗಂಟೆಗಳ ಆಹಾರ ಸುರಕ್ಷತಾ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಆಹಾರ ಸುರಕ್ಷತಾ ದಳಗಳು ತಪಾಸಣೆ ನಡೆಸಲಿವೆ ಎಂದು ಸಚಿವರು ತಿಳಿಸಿದ್ದಾರೆ.
         ಯಾತ್ರೆಗೆ ಸಂಬಂಧಿಸಿದಂತೆ ಆಹಾರ ಭದ್ರತಾ ಇಲಾಖೆ ಭರ್ಜರಿ ಸಿದ್ಧತೆ ನಡೆಸಿದೆ. ಸಭೆಯ ಅಧ್ಯಕ್ಷತೆಯನ್ನು ವೀಣಾ ಜಾರ್ಜ್ ವಹಿಸಿ ಕಾರ್ಯಚಟುವಟಿಕೆಗಳ ಮೌಲ್ಯಮಾಪನ ನಡೆಸಿದರು. ಶಬರಿಮಲೆ ಋತುವಿನ ಆರಂಭಕ್ಕೂ ಮುನ್ನ ಪ್ರಮುಖ ಜಲಮೂಲಗಳಿಂದ ನೀರನ್ನು ಸಂಗ್ರಹಿಸಿ ಪ್ರಯೋಗಾಲಯಗಳಿಗೆ ಪರೀಕ್ಷೆಗೆ ಕಳುಹಿಸಲಾಗುವುದು. ಹೋಟೆಲ್‍ನ ಕನಿಷ್ಠ ಒಬ್ಬ ಉದ್ಯೋಗಿಗೆ ಆಹಾರ ಸುರಕ್ಷತೆ ತರಬೇತಿ ನೀಡಲಾಗಿದೆ. ಇದಲ್ಲದೇ ಆಹಾರ ನೀಡುತ್ತಿರುವವರಿಗೂ ತರಬೇತಿ ನೀಡಲಾಗುವುದು.
        ಕುಮಳಿ, ವಂಡಿಪೆರಿಯಾರ್ ಮತ್ತು ಚೆಂಗನ್ನೂರಿನಲ್ಲಿ ವಿಶೇಷ ಪೂರ್ವ-ಋತು ತಪಾಸಣೆಗಳನ್ನು ನಡೆಸಲಾಗುವುದು. ದೇವಸ್ವಂ ಮಂಡಳಿಯ ಸಹಯೋಗದಲ್ಲಿ ಪಂಪಾ ಮತ್ತು ಸನ್ನಿಧಿಯಲ್ಲಿ ತಾತ್ಕಾಲಿಕ ಆಹಾರ ಸುರಕ್ಷತೆ ಪರೀಕ್ಷಾ ಪ್ರಯೋಗಾಲಯವನ್ನು ಪ್ರಾರಂಭಿಸಲಾಗುವುದು. ಇಲ್ಲಿ ತರಬೇತಿ ಪಡೆದ ಸಿಬ್ಬಂದಿಯನ್ನು ನೇಮಿಸಿಕೊಳ್ಳಲಾಗುವುದು. ಈ ಪ್ರಯೋಗಾಲಯಗಳಲ್ಲಿ ಪ್ರಸಾದ ತಯಾರಿಕೆಗೆ ಬೇಕಾದ ಕಚ್ಚಾ ವಸ್ತುಗಳ ಗುಣಮಟ್ಟವನ್ನು ಪರಿಶೀಲಿಸಲಾಗುವುದು.

ಅಗತ್ಯವಿದ್ದರೆ, ಹೆಚ್ಚಿನ ಪರೀಕ್ಷೆಗಾಗಿ ತಿರುವನಂತಪುರಂ ಫುಡ್ ಸೇಫ್ಟಿ ಲ್ಯಾಬ್‍ಗೆ ಕಳುಹಿಸಲಾಗುವುದು. ಮೊಬೈಲ್ ಲ್ಯಾಬ್‍ನ ಸೇವೆ ಲಭ್ಯವಾಗಲಿದೆ. ಇದಲ್ಲದೇ ಹಲವು ಭಾμÉಗಳಲ್ಲಿ ಆಹಾರ ಸುರಕ್ಷತೆ ಜಾಗೃತಿ ಮೂಡಿಸಲಾಗುವುದು. ಎಲ್ಲಾ ಅಂಗಡಿಗಳಲ್ಲಿ ಆಹಾರ ಸುರಕ್ಷತಾ ಇಲಾಖೆಯ ಟೋಲ್ ಫ್ರೀ ಸಂಖ್ಯೆಯನ್ನು ಪ್ರದರ್ಶಿಸಲಾಗುವುದು. ಪತ್ತನಂತಿಟ್ಟ ಸಹಾಯಕ ಆಹಾರ ಸುರಕ್ಷತಾ ಆಯುಕ್ತರು ಮತ್ತು ಜಂಟಿ ಆಹಾರ ಸುರಕ್ಷತಾ ಆಯುಕ್ತರು ದೈನಂದಿನ ಚಟುವಟಿಕೆಗಳನ್ನು ಮೌಲ್ಯಮಾಪನ ಮಾಡುತ್ತಿದ್ದಾರೆ ಎಂದು ಸಚಿವರು ಹೇಳಿದರು. 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


Qries