HEALTH TIPS

ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರಕ್ಕಾಗಿ ಅರ್ಜಿ ಆಹ್ವಾನ

             ಕಾಸರಗೋಡು: ಕಲೆ, ಕ್ರೀಡೆ, ಶಿಕ್ಷಣ, ಸಮಾಜಸೇವಾ ಕ್ಷೇತ್ರಗಳಲ್ಲಿ ಅಪರೂಪದ ಸಾಧನೆಗೈದು ಅಸಾಧಾರಣ, ಕೆಚ್ಚೆದೆಯ ಮತ್ತು ಸಾಹಸಮಯ ಚಟುವಟಿಕೆಗಳೊಂದಿಗೆ ವಿಜ್ಞಾನ ಮತ್ತು ಸಾಮಾಜಿಕ ವಿಜ್ಞಾನ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದ ಮಕ್ಕಳನ್ನು 'ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ' ನೀಡಿ ರಾಷ್ಟ್ರವು ಗೌರವಿಸಲಿದೆ.
                  ಪ್ರಶಸ್ತಿಯು ಒಂದು ಲಕ್ಷ ರೂಪಾಯಿ ನಗದು, ಪ್ರಶಸ್ತಿ ಪತ್ರ, ಫಲಕ ಹಾಗೂ ಇತರೆ ಬಹುಮಾನಗಳನ್ನು ಒಳಗೊಂಡಿರುತ್ತದೆ. 5 ರಿಂದ 18 ವರ್ಷದೊಳಗಿನ ವಯಸ್ಸಿನ ಗುಂಪುಗಳಲ್ಲಿ ಗಮನಾರ್ಹ ಸಾಧನೆ ತೋರಿದ ಮಕ್ಕಳನ್ನು ಅಕ್ಟೋಬರ್ 31 ರಂದು ಸಂಜೆ 5 ಗಂಟೆಯೊಳಗೆ www.award.gov.in/ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲಪುರಸ್ಕಾರ್-2023 ಪೆÇೀರ್ಟಲ್‍ನಲ್ಲಿ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.  ಪ್ರಶಸ್ತಿ ವಿಜೇತರನ್ನು ಡಿಸೆಂಬರ್ 26 ರಂದು ವೀರ್ ಬಾಲ್ ದಿವಸದಂದು ಘೋಷಿಸಲಾಗುವುದು ಮತ್ತು ಅರ್ಹ ಪ್ರತಿಭೆಗಳಿಗೆ ಗಣರಾಜ್ಯೋತ್ಸವದಂದು ಪ್ರಶಸ್ತಿಗಳನ್ನು ವಿತರಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.                              ಪ್ರಶಸ್ತಿಗಾಗಿ ಪರಿಗಣಿಸುವ ವಲಯಗಳು:
               ಮಾನವ ಜೀವನ, ಪರಿಸರ ಅಥವಾ ಪರಿಸರ ವಿಜ್ಞಾನದ ಮೇಲೆ ಪ್ರಭಾವ ಬೀರುವ ವಿಜ್ಞಾನ ಮತ್ತು ಸಮಾಜ ವಿಜ್ಞಾನ ಕ್ಷೇತ್ರಗಳಲ್ಲಿ ನವೀನ ವಿಚಾರಗಳನ್ನು ಪ್ರಸ್ತುತಪಡಿಸಿದ ಮಕ್ಕಳು,  ಬಾಲ್ಯವಿವಾಹ, ಮಕ್ಕಳ ಮೇಲಿನ ದೌರ್ಜನ್ಯ ಮತ್ತು ಮಾದಕ ವಸ್ತುಗಳ ಸೇವನೆಯಂತಹ ಸಾಮಾಜಿಕ ಅನಿಷ್ಟಗಳ ವಿರುದ್ಧ ಸಾಮಾಜದಾಲ್ಲಿ ಬದಲಾವಣೆ ತರಲು ಪ್ರಮುಖ ಪಾತ್ರ ವಹಿಸಿದವರು, ಶಿಕ್ಷಣ ಕ್ಷೇತ್ರದಲ್ಲಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಾಧನೆ ಮಾಡಿದವರು, ಕ್ರೀಡಾ ಕ್ಷೇತ್ರದಲ್ಲಿ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಸಾಧನೆ ಮಾಡಿದವರು,   ಕಲೆ ಮತ್ತು ಸಾಂಸ್ಕøತಿಕ ಕ್ಷೇತ್ರದಲ್ಲಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಗಮನ ಸೆಳೆದವರು,  ತನ್ನ ಪ್ರಾಣವನ್ನು ಪಣಕ್ಕಿಟ್ಟು ಇತರ ಜೀವಗಳನ್ನು ಉಳಿಸಲು ತೋರಿದ ಕೆಚ್ಚೆದೆಯ ಸಾಹಸಗಳು,  ಪ್ರಕೃತಿ ದುರಂತ ಗಳಿಂದಲೂ  ಇತರ ಅಪಾಯಗಳಿಂದ ಇತರರನ್ನು ರಕ್ಷಿಸಲು ಮಾಡಿದ ಧೀರ ಕಾರ್ಯಗಳು, ಅಸಾಧಾರಣ ಮನೋಧೈರ್ಯದಿಂದ ಅತೀ ದೊಡ್ಡ ವಿಪತ್ತುಗಳಿಂದ ರಕ್ಷಣೆ ಗೊಂಡವರ(2020 ಆಗಸ್ಟ್ 31 ರ ನಂತರ ಮಾಡಿದ ಚಟುವಟಿಕೆಗಳನ್ನು ಮಾತ್ರ ಪ್ರಶಸ್ತಿಗೆ ಪರಿಗಣಿಸಲಾಗುತ್ತದೆ)ನ್ನು ಪ್ರಶಸ್ತಿಗೆ ಪರಿಗಣಿಸಲಾಗುತ್ತದೆ.  ಹೆಚ್ಚಿನ ಮಾಹಿತಿಗಾಗಿ www.award.gov.in  ಗೆ ಭೇಟಿ ನೀಡಬಹುದಾಗಿದ್ದು, ಈ ಬಗ್ಗೆ ಮಾಃಇತಿಗೆ ದೂರವಾಣಿ ಸಂಖ್ಯೆ(04994 256990, 9061357776)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.


 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


Qries