HEALTH TIPS

ಉಬ್ರಂಗಳ ಕ್ಷೇತ್ರದ ಪದಾಧಿಕಾರಿಗಳಿಂದ ಡಾ.ವೀರೇಂದ್ರ ಹೆಗ್ಗಡೆ ಭೇಟಿ


           ಬದಿಯಡ್ಕ: ಉಬ್ರಂಗಳ ಬಡಗುಶಬರಿಮಲೆ ಶ್ರೀ ಮಹಾದೇವ ಪಾರ್ವತಿ ಶ್ರೀಶಾಸ್ತಾರ ದೇವಸ್ಥಾನದ ನವೀಕರಣ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವಕ್ಕೆ ಧರ್ಮಸ್ಥಳದ ಧÀರ್ಮಾಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರನ್ನು ಬರಮಾಡಿಕೊಳ್ಳುವ ಸಲುವಾಗಿ ಬ್ರಹ್ಮಕಲಶೋತ್ಸವ ಸಮಿತಿಯ ಪದಾಧಿಕಾರಿಗಳು ಧರ್ಮಸ್ಥಳ ಕ್ಷೇತ್ರದಲ್ಲಿ ಭೇಟಿಮಾಡಿದರು.
          ಉಬ್ರಂಗಳ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯಗಳ ಪ್ರಗತಿಯ ಕುರಿತು ಅವರಿಗೆ ಮಾಹಿತಿಯನ್ನು ನೀಡಲಾಯಿತು. ಕಾರ್ಯಕ್ರಮಕ್ಕೆ ಆಗಮಿಸುವುದಾಗಿ ತಿಳಿಸಿದ ಧರ್ಮಾಧಿಕಾರಿಗಳು ಎಲ್ಲಾ ವಿವಿಧ ಸಹಕಾರವನ್ನು ನೀಡುವುದಾಗಿ ತಿಳಿಸಿದರು. ಆಡಳಿತ ಮೊಕ್ತೇಸರ ಡಾ. ಕಿಶೋರ್‍ಕುಮಾರ್ ಕುಣಿಕುಳ್ಳಾಯ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಮಧುಸೂದನ ಆಯರ್ ಮಂಗಳೂರು, ಕೋಶಾಧಿಕಾರಿ ಪ್ರಶಾಂತ್ ಕುಣಿಕುಳ್ಳಾಯ ಉಬ್ರಂಗಳ, ಕಿರಣ್ ಕುಣಿಕುಳ್ಳಾಯ ಉಬ್ರಂಗಳ ಉಪಸ್ಥಿತರಿದ್ದರು. 2022 ದಶಂಬರ 25ರಿಂದ ಮೊದಲ್ಗೊಂಡು 2023 ಜನವರಿ 5ರ ತನಕ ಬ್ರಹ್ಮಕಲಶ, ವಿಶೇಷ ಪಾಟು ಉತ್ಸವ, ಶ್ರೀಭೂತಬಲಿ ಉತ್ಸವ ಮತ್ತು ಶ್ರೀಧೂಮಾವತಿ ದೈವದ ಕೋಲ ವಿವಿಧ ಕಾರ್ಯಕ್ರಮಗಳೊಂದಿಗೆ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳವರ ನೇತೃತ್ವದಲ್ಲಿ ಜರಗಲಿರುವುದು.
Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


Qries