HEALTH TIPS

ಪರೀಕ್ಷೆಯಲ್ಲಿ ದನದ ಮಾಂಸ ಕುರಿತ ಪ್ರಶ್ನೆ: ಬನಾರಸ್‌ ಹಿಂದೂ ವಿ.ವಿಯಲ್ಲಿ ವಿವಾದ

 

            ಲಖನೌ: ವಾರಾಣಸಿಯ ಬನಾರಸ್‌ ಹಿಂದೂ ವಿಶ್ವವಿದ್ಯಾಲಯದ (ಬಿಎಚ್‌ಯು) ವೃತ್ತಿಪರ ಪದವಿ ಕೋರ್ಸ್‌ನ (ಬಿ.ವೋಕ್) ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ ದನದ ಮಾಂಸದ ಕುರಿತು ಕೇಳಿರುವ ಪ್ರಶ್ನೆಯು ವಿವಾದ ಹುಟ್ಟುಹಾಕಿದೆ.

                ಬಿ.ವೋಕ್‌ನ ಎರಡನೇ ಸೆಮಿಸ್ಟರ್‌ ಪ್ರಶ್ನೆಪತ್ರಿಕೆಯಲ್ಲಿ ಕೇಟರಿಂಗ್‌ ಮತ್ತು ಹೋಟೆಲ್‌ ಮ್ಯಾನೇಜ್‌ಮೆಂಟ್‌ ವಿಷಯಕ್ಕೆ ಸಂಬಂಧಿಸಿ ದನದ ಮಾಂಸದ ವರ್ಗೀಕರಣಗಳ ಬಗ್ಗೆ ಪ್ರಶ್ನೆ ಕೇಳಲಾಗಿತ್ತು.

ಇದನ್ನು ಖಂಡಿಸಿ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಪ್ರಶ್ನೆಪತ್ರಿಕೆ ತಯಾರಿಸಿದವರ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

         ದನದ ಮಾಂಸದ ವರ್ಗೀಕರಣದ ಬಗ್ಗೆ ವ್ಯಾಖ್ಯಾನಿಸಿ ಎಂದು ಕೇಳಿರುವ ಪ್ರಶ್ನೆಯಿಂದ ಹಿಂದೂಗಳ ಭಾವನೆಗಳಿಗೆ ನೋವುಂಟಾಗಿದೆ ಎಂದು ಎಬಿವಿಪಿ ಕಾರ್ಯಕರ್ತರು ಹೇಳಿದ್ದಾರೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries