HEALTH TIPS

ಮಾದಕ ವಸ್ತುಗಳ ವಿರುದ್ಧದ ಹೋರಾಟದಲ್ಲಿ ಇಡೀ ಸಮಾಜ ಒಗ್ಗಟ್ಟಾಗಬೇಕು: ಎನ್ ಎ ನೆಲ್ಲಿಕುನ್ನು





            ಕಾಸರಗೋಡು: ಜಿಲ್ಲಾಡಳಿತ, ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ನಾಯಮರ್‍ಮೂಲೆ ತನ್‍ಬೀಹುಲ್ ಇಸ್ಲಾಂ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಸ್ಥಳೀಯ ಸ್ವ-ಸರ್ಕಾರ ಇಲಾಖೆ ಹಾಗೂ ಅಬಕಾರಿ ಇಲಾಖೆ ಸಹಕಾರದೊಂದಿಗೆ ಹಮ್ಮಿಕೊಂಡಿದ್ದ ಮಾದಕ ಮುಕ್ತ ಕೇರಳ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಶಾಸಕ ಎನ್.ಎ ನೆಲ್ಲಿಕುನ್ನು ಉದ್ಘಾಟಿಸಿದರು.
            ಈ ಸಂದರ್ಭ ಮಾತನಾಡಿದ ಅವರು, ಮಾದಕ ವ್ಯಸನವನ್ನು ಶಾಶ್ವತವಾಗಿ ತೊಲಗಿಸುವ ಧ್ಯೇಯೋದ್ದೇಶದಲ್ಲಿ ಇಡೀ ಸಮಾಜದ ಜನತೆ ಒಂದಾಗಬೇಕು. ಪ್ರತಿ ಸಮುದಾಯದ ಜನತೆ ಅಮಲು ಪದಾರ್ಥಗಳ ನಿರ್ಮೂಲನೆಗೂ ಪ್ರಾಮುಖ್ಯತೆ ನೀಡಬೇಕು ಎಂದು ತಿಳಿಸಿದರು.  ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್ ಚಂದ್ ಅಧ್ಯಕ್ಷತೆ ವಹಿಸಿದ್ದರು. ಉಪ ಅಬಕಾರಿ ಆಯುಕ್ತ ಡಿ.ಬಾಲಚಂದ್ರನ್ ಪ್ರಾಸ್ತಾವಿಕ ಮಾತನಾಡಿದರು. ವಿಮುಕ್ತಿ ಮಿಷನ್ ಜಿಲ್ಲಾ ಸಂಚಾಲಕ ಹರಿದಾಸ್ ಪಾಲಕೀಲ್ ಮಾದಕ ವಸ್ತು ವಿರೋಧಿ ಪ್ರತಿಜ್ಞಾವಿಧಿ ಬೋಧಿಸಿದರು. ಚೆಂಗಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಖಾದರ್‍ಬದರಿಯಾ, ಗ್ರಾಪಂ ಸದಸ್ಯೆ ಪಿ. ಖದೀಜಾ, ಜಿಲ್ಲಾ ಮಾಹಿತಿ ಅಧಿಕಾರಿ ಎಂ.ಮಧುಸೂದನನ್, ವಿಎಚ್‍ಎಸ್‍ಇ ಸಹಾಯಕ ನಿರ್ದೇಶಕಿ ಉದಯ ಕುಮಾರಿ, ಎಇಒ ಯತೀಶ್ ಕುಮಾರ್ ರೈ, ವಿದ್ಯಾಕಿರಣ ಜಿಲ್ಲಾ ಸಂಯೋಜಕ ಪಿ.ದಿಲೀಪ್ ಕುಮಾರ್, ಕೈಟ್ ಜಿಲ್ಲಾ ಸಂಯೋಜಕ ಎನ್.ಪಿ.ರಾಜೇಶ್ ಉಪಸ್ಥಿತರಿದ್ದರು.
              ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಕೆ.ವಿ.ಪುಷ್ಪಾ ಸ್ವಾಗತಿಸಿದರು. ಶಾಲಾ ಮುಖ್ಯೋಪಾಧ್ಯಾಯ ಪಿ.ನಾರಾಯಣನ್ ವಂದಿಸಿದರು. ಕಾರ್ಯಕ್ರಮದ ನಂತರ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉದ್ಘಾಟಿಸಿದ ಮಾದಕ ವಸ್ತು ವಿರೋಧಿ ಚಟುವಟಿಕೆಗಳ ನೇರಪ್ರಸಾರ ಮತ್ತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಮಾದಕ ವಸ್ತು ವಿರೋಧಿ ಸಂದೇಶವನ್ನು ಒಳಗೊಂಡ ಕಿರು ವಿಡಿಯೋವನ್ನು ಪ್ರದರ್ಶಿಸಲಾಯಿತು.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries