HEALTH TIPS

ಹತ್ತು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಸಿಮಿ ಈಗ ಮಲಪ್ಪುರಂನಲ್ಲಿ ಸಾನಿಯಾ ಆಗಿ ಪತ್ತೆ


            ಪತ್ತನಂತಿಟ್ಟ: ಹತ್ತು ವರ್ಷಗಳ ಸುಧೀರ್ಘ ಕಾಲದ ಬಳಿಕ  ನಾಪತ್ತೆಯಾಗಿದ್ದ ಮಹಿಳೆಯನ್ನು ಪೋಲೀಸರು ಪತ್ತೆ ಮಾಡಿದ್ದಾರೆ. ಪತ್ತನಂತಿಟ್ಟದಿಂದ ನಾಪತ್ತೆಯಾಗಿದ್ದ ಮಹಿಳೆಯನ್ನು ಮಲಪ್ಪುರಂನ ಪೆರಿಂತಲ್ಮಣ್ಣಲ್ಲಿ ಪೋಲೀಸರು ಕೊನೆಗೂ ಪತ್ತೆ ಮಾಡಿದ್ದಾರೆ.
          ಸಿಮಿಕುಮಾರಿ ಪ್ರೀತಿಯ ಬಲೆಯಲ್ಲಿ ಸಿಕ್ಕಿಬಿದ್ದಿರಬಹುದು ಎಂದು ವರದಿಯಾಗಿತ್ತು. ಇದೀಗ ಪೋಲೀಸರು ಸಿಮಿಕುಮಾರಿಯನ್ನು 42 ವರ್ಷದ ಸಾನಿಯಾ ಎಂದು ಗುರುತಿಸಿದ್ದಾರೆ. ತಹಶೀಲ್ದಾರ ಎಸ್ ಶ್ರೀಕುಮಾರ್ ನಡೆಸಿದ ತನಿಖೆಯ ನಂತರ ಪತ್ತೆಯಾಗಿದೆ.
           ಹತ್ತು ವರ್ಷಗಳ ಹಿಂದೆ ಪತಿ ಮತ್ತು ಮಕ್ಕಳನ್ನು ತ್ಯಜಿಸಿ ಸಿಮಿ ನಾಪತ್ತೆಯಾಗಿದ್ದಳು. ಅವರು ಪತ್ತನಂತಿಟ್ಟದ ಪಂದಳಂನಲ್ಲಿ ವಾಸಿಸುತ್ತಿದ್ದರು. ಪತ್ತನಂತಿಟ್ಟದಲ್ಲಿ ವರದಿಯಾದ ನಾಪತ್ತೆ ಪ್ರಕರಣಗಳ ತನಿಖೆಯು ಇಳಂತೂರ್ ಹತ್ಯೆಯ ಹಿನ್ನೆಲೆಯಲ್ಲಿ ತೀವ್ರಗೊಂಡಿರುವ ಪರಿಸ್ಥಿತಿಯಲ್ಲಿ ಪೋಲೀಸರು ಸಿಮಿಕುಮಾರಿಯತ್ತ  ತಲುಪಿದ್ದಾರೆ.
        ಮೇ 2012 ರಲ್ಲಿ ಸಿಮಿ ತನ್ನ ಮನೆಯಿಂದ ನಾಪತ್ತೆಯಾಗಿದ್ದಳು. ಪತಿಯ ಹೇಳಿಕೆ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸಿದರೂ ಸಿಮಿ ಪತ್ತೆಯಾಗಿರಲಿಲ್ಲ. ಸಿಮಿ ಜೊತೆಗೆ ಒಂದು ಮಗು ಕೂಡಾ ನಾಪತ್ತೆಯಾಗಿತ್ತು. ಇಳಂತೂರು ಜೋಡಿ ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ಮಹಿಳೆಯರ ನಾಪತ್ತೆ ಪ್ರಕರಣದ ತನಿಖೆ ತೀವ್ರಗೊಳಿಸಿದಾಗ ಸಿಮಿ ಪೆರಿಂತಲ್ಮಣ್ಣ ಸೂಪರ್ ಮಾರ್ಕೆಟ್ ನಲ್ಲಿ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದಾಳೆ ಎಂದು ತಿಳಿದುಬಂತು.
         ಆಲಪ್ಪುಳ ಮೂಲದ ಹನ್ಸಿಲ್ (38) ಎಂಬಾತನ ಜತೆ ಸಿಮಿ ಮಲಪ್ಪುರಂನಲ್ಲಿ ನೆಲೆಸಿದ್ದಳು. ಇತ್ತೀಚಿಗೆ ಇವರಿಬ್ಬರು ಬೇರೆ ಬೇರೆಯಾಗಿ ಜೀವನ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ. ಹನ್ಸ್ ಪ್ರಸ್ತುತ ಪುನಲೂರಿನಲ್ಲಿ ತಂಗಿರುವುದು ಕೂಡ ಪತ್ತೆಯಾಗಿದೆ. ಹಂಸಿಲ್ ಪಂದಳಂನಲ್ಲಿ ಸಿಮಿ ಕೆಲಸ ಮಾಡುತ್ತಿದ್ದ ಸಂಸ್ಥೆಯಲ್ಲಿ ಸಹೋದ್ಯೋಗಿಯಾಗಿದ್ದರು. ಈ ಅವಧಿಯಲ್ಲಿ ಸಿಮಿಯನ್ನು ಪ್ರೀತಿಯ ಬಲೆಯಲ್ಲಿ ಸಿಲುಕಿಸಿ ಮಲಪ್ಪುರಂಗೆ ಕರೆದೊಯ್ಯಲಾಯಿತು. ಒಂಬತ್ತು ವರ್ಷಗಳ ಕಾಲ ಒಟ್ಟಿಗೆ ವಾಸಿಸುತ್ತಿದ್ದ ಸಿಮಿ ಇಸ್ಲಾಂಗೆ ಮತಾಂತರಗೊಂಡು ಸಾನಿಯಾ ಆದಳು.
       ಪೋಲೀಸರಿಗೆ ಮೊದಲ ಮಾಹಿತಿ ಸಿಕ್ಕಿದ್ದು ಹಂಸಿಲ್ ಬಗ್ಗೆ. ನಂತರ ಆತನನ್ನು ಪತ್ತೆ ಮಾಡಿ ವಿಚಾರಣೆ ನಡೆಸಿದಾಗ ಸಿಮಿ ಪೆರಿಂತಲ್ಮಣ್ಣಾದಲ್ಲಿ ಕೆಲಸ ಮಾಡುತ್ತಿದ್ದಾಳೆ ಎಂದು ಪೋಲೀಸರಿಗೆ ತಿಳಿದು ಬಂದಿದೆ. ನಂತರ ಪೋಲೀಸರು ಸೈಬರ್ ಸೆಲ್ ಸಹಾಯದಿಂದ ಸಿಮಿಯನ್ನು ಪತ್ತೆ ಮಾಡಿದರು.
         ಕಳೆದ ಒಂದು ವರ್ಷದಿಂದ ಹನ್ಸಿಲ್‍ನಿಂದ ಬೇರ್ಪಟ್ಟಿರುವುದಾಗಿ ಸಿಮಿ ಹೇಳಿದ್ದಾಳೆ. ಸಂಬಂಧದಲ್ಲಿ ಮಕ್ಕಳಿಲ್ಲ. ಆಕೆಯ ಮಾಜಿ ಪತಿಯ ಮಗಳು ಇನ್ನೂ ಸಿಮಿಯೊಂದಿಗೆ ವಾಸಿಸುತ್ತಿದ್ದಾಳೆ. ಹನ್ಸಿಲ್ ಜೊತೆ ವಿಚ್ಛೇದನ ಪ್ರಕರಣ ಪ್ರಗತಿಯಲ್ಲಿದೆ ಎಂಬುದು ಪೋಲೀಸರಿಗೆ ಸಿಕ್ಕಿರುವ ಮಾಹಿತಿಯಾಗಿದೆ. ತನಿಖೆ ಮುಂದುವರಿದಿದೆ.




Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries