HEALTH TIPS

ಮಂಗಳವಾರ ಮಹಾಕಾಳೇಶ್ವರ ದೇವಸ್ಥಾನ ಕಾರಿಡಾರ್ ಅಭಿವೃದ್ಧಿ ಯೋಜನೆಗೆ ಪ್ರಧಾನಿ ಚಾಲನೆ

 

           ಉಜ್ಜಯಿನಿ - ಮಧ್ಯಪ್ರದೇಶದ ಪ್ರವಾಸೋದ್ಯಮದ ಆಕರ್ಷಣೆಯನ್ನ ಹೆಚ್ಚು ಮಾಡಲು 856 ಕೋಟಿ ರೂಪಾಯಿ ವೆಚ್ಚದ ಮಹಾ ಕಾಳೇಶ್ವರ ದೇವಸ್ಥಾನ ಕಾರಿಡಾರ್ ಅಭಿವೃದ್ಧಿ ಯೋಜನೆಗೆ ಪ್ರಧಾನಿ ಮಂಗಳವಾರ ಚಾಲನೆ ನೀಡಲಿದ್ದಾರೆ. ಮೆಗಾ ಕಾರಿಡಾರ್‌ನ ಉದ್ಘಾಟನೆಯನ್ನು ಸಾಂಕೇತಿಕವಾಗಿ ಗುರುತಿಸಲು ಪ್ರಧಾನಮಂತ್ರಿ ಅವರು 'ಶಿವಲಿಂಗ'ವನ್ನು ಅಧಿಕೃತವಾಗಿ ಅನಾವರಣ ಗೊಳಿಸಲಿದ್ದಾರೆ.

ಹೊಸ ಕಾರಿಡಾರ್ 900 ಮೀಟರ್‌ಗಿಂತಲೂ ಹೆಚ್ಚು ಉದ್ದವನ್ನು ಹೊಂದಿದ್ದು,

               ಸಾಲಾಗಿ 108 ಅಲಂಕೃತ ಮರಳುಗಲ್ಲು ಸ್ತಂಭಗಳನ್ನು ಹೊಂದಿದ್ದು, ಮೇಲ್ಭಾಗದಲ್ಲಿ ಅಲಂಕಾರಿಕ 'ತ್ರಿಶೂಲ' ವಿನ್ಯಾಸವನ್ನು ಮತ್ತು ಅದರ ಮುಖದ ಮೇಲೆ ಶಿವನ 'ಮುದ್ರೆಗಳನ್ನು' ಹೊಂದಿದೆ. ಇದು ದೇವತೆಯ ಕಲಾತ್ಮಕ ಶಿಲ್ಪಗಳಿಂದ ಸುತ್ತುವರೆದಿರುವ ಚಿಮ್ಮುವ ಕಾರಂಜಿ ಗಳು ಮತ್ತು ಶಿವ ಪುರಾಣದ ಕಥೆಗಳನ್ನು ಚಿತ್ರಿಸುವ 53 ಪ್ರಕಾಶಿತ ಭಿತ್ತಿಚಿತ್ರಗಳನ್ನು ಹೊಂದಿದೆ. ಅಕ್ಟೋಬರ್ 11 ರಂದು ಸಂಜೆ 5:30 ರ ಸುಮಾರಿಗೆ ಪ್ರಧಾನಿ ಮೋದಿ ಉಜ್ಜಯಿನಿಗೆ ಬಂದಿಳಿಯಲಿದ್ದಾರೆ ಎಂದು ಮಧ್ಯಪ್ರದೇಶ ಕ್ಯಾಬಿನೆಟ್ ಸಚಿವ ಭೂಪೇಂದ್ರ ಸಿಂಗ್ ಈ ಹಿಂದೆ ಹೇಳಿದ್ದರು.

              'ಪ್ರಧಾನಿ ಜನರಿಗೆ ಅರ್ಪಿಸಲಿರುವ 'ಮಹಾಕಾಲ ಲೋಕ'ದ ಉದ್ಘಾಟನೆಗೆ ಮೆಗಾ ವ್ಯವಸ್ಥೆ ಮಾಡಲಾಗಿದೆ. ಉಜ್ಜಯಿನಿ ತಲುಪಿದ ನಂತರ ಅವರು ತಮ್ಮ ವಾಹನ ಜಾಥಾದಲ್ಲಿ ದೇವಸ್ಥಾನ ಸಂಕೀರ್ಣಕ್ಕೆ ತೆರಳಿ ಮಹಾಕಾಳೇಶ್ವರದಲ್ಲಿ 'ಪೂಜೆ' ನೆರವೇರಿಸಲಿದ್ದಾರೆ. ಆ ಬಳಿಕ 'ನಂದಿ ದ್ವಾರ'ಕ್ಕೆ ತೆರಳಿ ಕಾರಿಡಾರ್‌ ಉದ್ಘಾಟನೆ ಮಾಡಲಿದ್ದಾರೆ' ಎಂದು ಯೋಜನೆಯನ್ನು ಅನುಷ್ಠಾನಗೊಳಿಸಿರುವ ಉಜ್ಜಯಿನಿ ಸ್ಮಾರ್ಟ್‌ ಸಿಟಿ ಲಿಮಿಟೆಡ್‌ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಕ್ಟೋಬರ್ 7 ರಿಂದಲೂ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ, ಲೇಸರ್ ಶೋ ಮೂಲಕ ಐತಿಹ್ಯ ತಿಳಿಸಲಾಗುತ್ತಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries