HEALTH TIPS

ಐಟಿಯಿಂದ ₹100 ಕೋಟಿ ದಾಖಲೆಯಿಲ್ಲದ ಆದಾಯ ಪತ್ತೆ

 

             ನವದೆಹಲಿ: ರಿಯಲ್‌ ಎಸ್ಟೇಟ್‌ ಮತ್ತು ವಜ್ರದ ವ್ಯಾಪಾರದಲ್ಲಿ ತೊಡಗಿದ್ದ ಬಿಹಾರ ಮೂಲದ ಪ್ರತ್ಯೇಕ ಉದ್ಯಮ ಸಮೂಹಗಳ ಮೇಲೆ ಇತ್ತೀಚೆಗೆ ದಾಳಿ ನಡೆಸಿದ್ದ ಆದಾಯ ತೆರಿಗೆ ಇಲಾಖೆಯು (ಐಟಿ), ದಾಖಲೆಯಿಲ್ಲದ ₹100 ಕೋಟಿ ಆದಾಯವನ್ನು ಪತ್ತೆ ಮಾಡಿದೆ ಎಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ಮಂಗಳವಾರ ತಿಳಿಸಿದೆ.

                 ಬಿಹಾರದ ಪಟ್ನಾ, ಭಗಲ್‌ಪುರ್‌, ದೆರ್ಹಿ-ಆನ್‌-ಸೋನ್‌, ಉತ್ತರ ಪ್ರದೇಶದ ಲಖನೌ ಮತ್ತು ದೆಹಲಿಯ ಸುಮಾರು 30 ಸ್ಥಳಗಳಲ್ಲಿ ನವೆಂಬರ್‌ 17ರಂದು ಶೋಧ ಕಾರ್ಯಾಚರಣೆ ಜಾರಿ ಮಾಡಲಾಯಿತು. ದಾಳಿ ವೇಳೆ, ₹5 ಕೋಟಿ ಮೌಲ್ಯದ ದಾಖಲೆ ಇಲ್ಲದ ನಗದು ಮತ್ತು ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು 14 ಬ್ಯಾಂಕ್‌ ಲಾಕರ್‌ಗಳನ್ನು ಜಪ್ತಿ ಮಾಡಲಾಗಿದೆ.

                 ಚಿನ್ನ ಮತ್ತು ವಜ್ರಾಭರಣ ವ್ಯಪಾರ ಸಮೂಹವು ₹12 ಕೋಟಿ ದಾಖಲೆಯಿಲ್ಲದ ಆದಾಯವನ್ನು ಚಿನ್ನ ಕೊಳ್ಳಲು ಮತ್ತು ಮಳಿಗೆಗಳ ದುರಸ್ತಿಗಾಗಿ ಇರಿಸಿದೆ ಎಂದು ತನ್ನ ಲೆಕ್ಕಪತ್ರದಲ್ಲಿ ದಾಖಲಿಸಿದೆ. ಈ ಕುರಿತು ಕೂಲಂಕುಶವಾಗಿ ಪರಿಶೀಲಿಸಿದ ವೇಳೆ ₹12 ಕೋಟಿಗೂ ಹೆಚ್ಚು ದಾಖಲೆಯಿಲ್ಲದ ಆದಾಯ ಪತ್ತೆಯಾಗಿದೆ ಎಂದು ಸಿಬಿಡಿಟಿ ತಿಳಿಸಿದೆ.

               ರಿಯಲ್‌ ಎಸ್ಟೇಟ್‌ ವ್ಯವಹಾರದ ಸಮೂಹವು ಭೂಮಿ ಖರೀದಿ, ಕಟ್ಟಡಗಳ ನಿರ್ಮಾಣ, ಅಪಾರ್ಟ್‌ಮೆಂಟ್‌ಗಳ ಮಾರಾಟದಲ್ಲಿ ನಡೆಸಿರುವ ನಗದು ವ್ಯವಹಾರಕ್ಕೆ ದಾಖಲೆಯಿಲ್ಲ ಎಂದು ತಿಳಿದುಬಂದಿದೆ. ಈ ರೀತಿಯ ದಾಖಲೆಯಿಲ್ಲದೇ ₹80 ಕೋಟಿಗೂ ಹೆಚ್ಚು ನಗದು ವ್ಯವಹಾರ ನಡೆದಿದೆ ಎಂದು ಸಂಸ್ಥೆ ಹೇಳಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries