HEALTH TIPS

ಮಿಲ್ಮಾ ಹಾಲು ಲೀಟರ್‍ಗೆ ಆರು ರೂ.ಹೆಚ್ಚಳ: ಡಿಸೆಂಬರ್ 1 ರಿಂದ ಬೆಲೆ ಏರಿಕೆ ಜಾರಿ


               ತಿರುವನಂತಪುರ: ಮಿಲ್ಮಾ ಹಾಲಿನ ಬೆಲೆ ಏರಿಕೆಯಾಗಲಿದೆ. ಡಿಸೆಂಬರ್ 1ರಿಂದ ಬೆಲೆ ಏರಿಕೆ ಜಾರಿಯಾಗಲಿದೆ. ಪ್ರತಿ ಲೀಟರ್‍ಗೆ 6 ರೂ.ಹೆಚ್ಚಳಗೊಳ್ಳಲಿದೆ.
          ಸರ್ಕಾರದ ಒಪ್ಪಿಗೆ ದೊರೆತರೆ ನಿನ್ನೆಯಿಂದ ಹಾಲಿನ ದರ ಏರಿಕೆ ಮಾಡಲು ಕ್ರಮ ಕೈಗೊಳ್ಳಲಾಗಿತ್ತು. ಆದರೆ ಬೆಲೆ ಏರಿಕೆಯನ್ನು ಜಾರಿಗೆ ತರಲು ಸರಕಾರ ಇನ್ನೂ ಮಿಲ್ಮಾಗೆ ನಿರ್ದೇಶನವನ್ನು ನೀಡಿಲ್ಲ. ಅನುಮೋದನೆ ದೊರೆತರೆ ಶುಕ್ರವಾರ ಮಿಲ್ಮಾ ಆಡಳಿತ ಮಂಡಳಿ ಸಭೆ ನಡೆಸಿ ಬೆಲೆ ಏರಿಕೆ ಜಾರಿಗೆ ತರಲು ನಿರ್ಧರಿಸಲಾಗಿದೆ. ಸಚಿವೆ ಜೆ.ಚಿಂಚುರಾಣಿ, ಮಿಲ್ಮಾ ಅಧ್ಯಕ್ಷ ಕೆ.ಎಸ್.ಮಣಿ ಹಾಗೂ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಬೆಲೆ ಏರಿಕೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಿದರು.
          ಹಾಲಿನ ದರ ಏರಿಕೆಯೊಂದಿಗೆ ಇತರೆ ಹಾಲಿನ ಉತ್ಪನ್ನಗಳ ಬೆಲೆಯೂ ಏರಿಕೆಯಾಗಲಿದೆ. ಮಿಲ್ಮಾ ನೇಮಿಸಿದ್ದ ತಜ್ಞರ ಸಮಿತಿಯ ಶಿಫಾರಸ್ಸು ಪ್ರತಿ ಲೀಟರ್ ಗೆ 8.57 ರೂ.ಹೆಚ್ಚಿಸಬೇಕೆಂದಿತ್ತು. ಹೈನುಗಾರರ ನಷ್ಟವನ್ನು ಮುಂದಿಟ್ಟುಕೊಂಡು ಬೆಲೆ ಏರಿಕೆ ಮಾಡಿದರೂ ರೈತರಿಗೆ ಈ ಯಾವ ಲಾಭವೂ ಸಿಗುತ್ತಿಲ್ಲ ಎಂಬ ಬಲವಾದ ಆರೋಪವಿದೆ.




Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries