HEALTH TIPS

2024ಕ್ಕೆ ಟಿಡಿಪಿಗೆ ಅಧಿಕಾರ ಕೊಡದಿದ್ದರೆ ಅದೇ ನನ್ನ ಕೊನೆ ಚುನಾವಣೆ: ಚಂದ್ರಬಾಬು

 

              ಕರ್ನೂಲ್: 2024ಕ್ಕೆ ಜನರು ತೆಲುಗು ದೇಶಂ ಪಕ್ಷವನ್ನು ಅಧಿಕಾರಕ್ಕೆ ತರದೇ ಇದ್ದರೆ ಅದೇ ನನ್ನ ಅಂತಿಮ ಚುನಾವಣೆ ಆಗಲಿದೆ ಎಂದು ಟಿಡಿಪಿ ಅಧ್ಯಕ್ಷ ಎನ್, ಚಂದ್ರಬಾಬು ನಾಯ್ಡು ಹೇಳಿದ್ದಾರೆ.

                 ಬುಧವಾರ ರಾತ್ರಿ, ಕರ್ನೂಲ್ ಜಿಲ್ಲೆಯ ರೋಡ್ ಶೋನಲ್ಲಿ ಭಾವನಾತ್ಮಕ ಭಾಷಣ ಮಾಡಿದ ಅವರು, ಟಿಡಿಪಿ ಅಧಿಕಾರಕ್ಕೆ ಬರುವವರೆಗೂ ವಿಧಾನಸಭೆಗೆ ಕಾಲಿಡುವುದಿಲ್ಲ ಎಂಬ ತಮ್ಮ ಮಾತನ್ನು ಪುನರುಚ್ಛರಿಸಿದರು.

                    'ನಾನು ಮತ್ತೆ ವಿಧಾನಸಭೆಗೆ ಹೋಗಬೇಕು ಎಂದಿದ್ದರೆ, ರಾಜಕೀಯದಲ್ಲಿ ಮುಂದುವರಿಯಬೇಕು ಎಂದಿದ್ದರೆ, ಆಂಧ್ರಪ್ರದೇಶಕ್ಕೆ ನ್ಯಾಯ ಒದಗಿಸಬೇಕಿದ್ದರೆ ಮುಂದಿನ ಚುನಾವಣೆಯಲ್ಲಿ ಟಿಡಿಪಿಯನ್ನು ಗೆಲ್ಲಿಸಬೇಕು. ಇಲ್ಲವಾದರೆ ಅದು ನನ್ನ ಕೊನೆಯ ಚುನಾವಣೆಯಾಗಲಿದೆ'ಎಂದಿದ್ದಾರೆ.

               ನೀವು ನನ್ನನ್ನು ನಂಬುತ್ತೀರಾ? ನನ್ನನ್ನು ಆಶೀರ್ವದಿಸುತ್ತೀರಾ? ಎಂದು ಜನಸ್ತೋಮಕ್ಕೆ ಪ್ರಶ್ನಿಸಿದ್ದಾರೆ.

                 ನವೆಂಬರ್ 19, 2021ರಂದು ಸದನದಲ್ಲಿ ಆಡಳಿತಾರೂಢ ವೈಎಸ್‌ಆರ್ ಕಾಂಗ್ರೆಸ್ ಪಕ್ಷವು ತಮ್ಮ ಪತ್ನಿಯನ್ನು ಅವಮಾನಿಸಿದೆ ಎಂದು ಆರೋಪಿಸಿದ ವಿರೋಧ ಪಕ್ಷದ ನಾಯಕ ಚಂದ್ರಬಾಬು ನಾಯ್ಡು, ಅಧಿಕಾರಕ್ಕೆ ಮರಳಿದ ಬಳಿಕವಷ್ಟೇ ವಿಧಾನಸಭೆಗೆ ಹೆಜ್ಜೆ ಇಡುವುದಾಗಿ ಘೋಷಿಸಿದ್ದರು.

                'ನನ್ನ ಹೋರಾಟ ಮಕ್ಕಳ ಭವಿಷ್ಯಕ್ಕಾಗಿ, ರಾಜ್ಯದ ಭವಿಷ್ಯಕ್ಕಾಗಿ, ಈ ಹಿಂದೆಯೂ ನಾನು ಅಭಿವೃದ್ಧಿ ಮಾಡಿದ್ದೇನೆ. ಅದನ್ನು ಸಾಬೀತುಪಡಿಸುವ ಮಾದರಿ ಇದೆ'ಎಂದಿದ್ದಾರೆ.

               ಈ ಬಗ್ಗೆ ಯೋಚಿಸಿ, ನಾನು ಹೇಳುವುದು ಸರಿ ಎನಿಸಿದರೆ ನನಗೆ ಸಹಕಾರ ನೀಡಿ ಎಂದು ಜನರನ್ನು ಒತ್ತಾಯಿಸಿದ್ದಾರೆ.

             'ನನ್ನ ವಯಸ್ಸಿನ ಬಗ್ಗೆ ಕೆಲವರು ಅಣಕ ಮಾಡುತ್ತಿದ್ದಾರೆ. ನಾನು ಮತ್ತು ಪ್ರಧಾನಿ ಮೋದಿ ಒಂದೇ ವಯಸ್ಸಿನವರು. ಬೈಡನ್ 79ನೇ ವಯಸ್ಸಿನಲ್ಲಿ ಅಮೆರಿಕದ ಅಧ್ಯಕ್ಷರಾಗಿದ್ದಾರೆ' ಎಂದು 72 ವರ್ಷದ ಟಿಡಿಪಿ ನಾಯಕ ಹೇಳಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


Qries