HEALTH TIPS

ಸುಲ್ತಾನ್ ಗೋಲ್ಡ್‍ನಿಂದ ಡ್ರಗ್ ವಿರೋಧಿ ಅಭಿಯಾನ-26ರಂದು 'ಡಿಯರ್ ಪೇರೆಂಟ್- ಚಿಲ್ಡ್ರನ್'ಯೋಜನೆಗೆ ಚಾಲನೆ          ಕಾಸರಗೋಡು: ಶಾಲಾ ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿರುವ ಮಾದಕ ವಸ್ತುಗಳ ಸೇವನೆಯ ವಿರುದ್ಧ ಸುಲ್ತಾನ್ ಗೋಲ್ಡ್ 'ಡಿಯರ್ ಪೇರೆಂಟ್- ಚಿಲ್ಡ್ರನ್' ಎಂಬ ವಿಶೇಷ ಕಾರ್ಯಕ್ರಮವನ್ನು ಜಾರಿಗೊಳಿಸುತ್ತಿದ್ದು, ಮಾದಕ ವ್ಯಸನದ ಕೂಪಕ್ಕೆ ಬೀಳದೆ ತಮ್ಮ ಮಕ್ಕಳನ್ನು ಜೀವನದಲ್ಲಿ ಯಶಸ್ಸಿನತ್ತ ಸಾಗುವ ಬಗ್ಗೆ ಮಾರ್ಗದರ್ಶನ ಮಾಡಲು ಪೆÇೀಷಕರಿಗೆ ವೈಜ್ಞಾನಿಕವಾಗಿ ಶಕ್ತಿ ತುಂಬುವ ಪ್ರಯತ್ನ ಈ ಮೂಲಕ ನಡೆಸಲಿದೆ ಎಂದು ಸುಲ್ತಾನ್ ಗ್ರೂಪ್ ಜನರಲ್ ಮ್ಯಾನೇಜರ್ ಎ.ಕೆ.ಉಣ್ಣಿತ್ತಾನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.  
           ಮೂವತ್ತನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಸಂಸ್ಥೆಯು ಕಾಪೆರ್Çರೇಟ್ ಸಾಮಾಜಿಕ ಜವಾಬ್ದಾರಿಯ ಯೋಜನೆಯನ್ವಯ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದೆ. ಯೋಜನೆ ಅಂಗವಾಗಿ ಜಿಲ್ಲೆಯ ಶಾಲೆಗಳಲ್ಲಿ ಪೆÇೀಷಕರಿಗೆ ಕೌನ್ಸೆಲಿಂಗ್ ತರಗತಿಗಳನ್ನು ಆಯೋಜಿಸಲಾಗುತ್ತಿದೆ. ನ.26ರಂದು ಮಧ್ಯಾಹ್ನ 2 ಗಂಟೆಗೆ ಬದಿಯಡ್ಕದ ಪೆರಡಾಲ ನವಜೀವನ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಶಾಸಕ ಎನ್.ಎ.ನೆಲ್ಲಿಕುನ್ನು  ಯೋಜನೆಗೆ ಚಾಲನೆ ನೀಡುವರು. ನಾರ್ಕೋಟಿಕ್ ಸೆಲ್ ಡಿವೈಎಸ್ಪಿ ಮ್ಯಾಥ್ಯೂ ಎಂ.ಎ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಸುಲ್ತಾನ್ ಗೋಲ್ಡ್ ವ್ಯವಸ್ಥಾಪಕ ನಿರ್ದೇಶಕ ಡಾ.ಅಬ್ದುಲ್ ರವೂಫ್, ಬದಿಯಡ್ಕ ಪೆÇಲೀಸ್ ಠಾಣೆ ಎಸ್.ಎಚ್.ಒ ಕೆ.ಪಿ.ವಿನೋದ್ ಕುಮಾರ್ ಅತಿಥಿಗಳಾಗಿ ಭಾಗವಹಿಸುವರು.
          ಸುಲ್ತಾನ್‍ಗೋಲ್ಡ್ ಸಂಸ್ಥೆ  ಶಾಲೆಗಳಲ್ಲಿ ಕಳೆದ ಹತ್ತು ವರ್ಷಗಳಿಂದ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು, ಈ ಬಾರಿ ಸಮಾಜವನ್ನು, ಅದರಲ್ಲೂ ಮುಖ್ಯವಾಗಿ ವಿದ್ಯಾರ್ಥಿಗಳನ್ನು ಬಲಿ ತೆಗೆದುಕೊಲ್ಳುತ್ತಿರುವ ಮಾದಕ ವಸ್ತುಗಳ ವಿರುದ್ಧ ಜಾಗೃತಿ ಅಭಿಯಾನ ನಡೆಸಲುದ್ದೇಶಿಸಿದೆ. ಜೇಸೀಸ್ ಅಂತರಾಷ್ಟ್ರೀಯ ತರಬೇತುದಾರ ವಿ ವೇಣುಗೋಪಾಲ್ ತರಗತಿಗಳನ್ನು ನಡೆಸಿಕೊಡಲಿದ್ದಾರೆ. 1992 ರಲ್ಲಿ ಪ್ರಾರಂಭವಾದ ಸುಲ್ತಾನ್ ಗ್ರೂಪ್ ಇಂದು ಕೇರಳ ಮತ್ತು ಕರ್ನಾಟಕದಲ್ಲಿ 9 ಆಭರಣ ಅಂಗಡಿಗಳು ಮತ್ತು 3 ವಾಚ್ ಮಳಿಗೆಗಳನ್ನು ಹೊಂದಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ  ಕಾಸರಗೋಡು ಶಾಖೆಯ ಮುಖ್ಯಸ್ಥ ಅಶ್ರಫ್ ಅಲಿ ಮೂಸಾ, ಶಾಖಾ ಪ್ರಬಂಧಕ ಮುಬೀನ್ ಹೈದರ್, ತರಬೇತುದಾರ ವಿ ವೇಣುಗೋಪಾಲ್, ಕಾಞಂಗಾಡ್ ಸುಲ್ತಾನ್ ಮಾರ್ಕೆಟಿಂಗ್ ಮ್ಯಾನೇಜರ್ ಬಿಜು ಜೋಸೆಫ್, ಕಾಸರಗೋಡು ಸುಲ್ತಾನ್ ಮಾರ್ಕೆಟಿಂಗ್ ಮ್ಯಾನೇಜರ್ ಮಜೀದ್ ಕೆ ಎಂ ಪಾಲ್ಗೊಂಡಿದ್ದರು.
 .

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


Qries