HEALTH TIPS

ಕಾರ್ಣಿಕ್‌ ಸೇತುವೆ ನೆಲಸಮ: 27 ತಾಸು ರೈಲು ಸಂಚಾರ ಬಂದ್‌

 

          ಮುಂಬೈ: ದಕ್ಷಿಣ ಮುಂಬೈನ ಛತ್ರಪತಿ ಶಿವಾಜಿ ಮಹರಾಜ್ ರೈಲು ನಿಲ್ದಾಣ ಮತ್ತು ಮಸೀದಿ ಬಂದರ್‌ ರೈಲು ನಿಲ್ದಾಣ ನಡುವಿನ ಬ್ರಿಟಿಷರ ಕಾಲದ ಕಾರ್ಣಿಕ್ ಸೇತುವೆಯ ನೆಲಸಮ ಕಾರ್ಯಾಚರಣೆ ನಡೆಯುವ ಕಾರಣ ಕೇಂದ್ರೀಯ ರೈಲ್ವೆಯು ಶನಿವಾರ ರಾತ್ರಿಯಿಂದ 27 ಗಂಟೆಗಳ ಕಾಲ ಈ ಮಾರ್ಗದಲ್ಲಿ ರೈಲು ಸಂಚಾರ ಬಂದ್‌ ಮಾಡಲಿದೆ.

             ಶನಿವಾರ (ನ.19) ರಾತ್ರಿ 11ಗಂಟೆಯಿಂದ ನ.21ರ ಮಧ್ಯರಾತ್ರಿ 2 ಗಂಟೆವರೆಗೂ ಈ ಮಾರ್ಗ ಬಂದ್ ಆಗಿರಲಿದೆ. ಹೀಗಾಗಿ ನಗರ ಮತ್ತು ಎಕ್ಸ್‌ಪ್ರೆಸ್‌ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ ಎಂದು ಕೇಂದ್ರೀಯ ರೈಲ್ವೆ ತಿಳಿಸಿದೆ.

            'ಇದರಿಂದ 37 ಲಕ್ಷ ಪ್ರಯಾಣಿಕರಿಗೆ ಸಮಸ್ಯೆಯಾಗಲಿದೆ. ಕಾರ್ಣಿಕ್‌ ಸೇತುವೆಯನ್ನು 1866-67ರಲ್ಲಿ ನಿರ್ಮಿಸಲಾಗಿದ್ದು, ಇದು ಅಸುರಕ್ಷಿತವಾಗಿದೆ ಎಂದು 2018ರಲ್ಲಿ ಐಐಟಿ ಬಾಂಬೆ ತಜ್ಞರು ಘೋಷಿಸಿದ್ದರು. 2014ರಿಂದಲೇ ಸೇತುವೆ ಮೇಲೆ ಭಾರಿ ವಾಹನಗಳ ಸಂಚಾರವನ್ನು ನಿಲ್ಲಿಸಲಾಗಿತ್ತು' ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


Qries