HEALTH TIPS

ಧಾರ್ಮಿಕ ಸಂಸ್ಕಾರವನ್ನು ನೀಡುವ ಕೇಂದ್ರ ಭಜನಾಮಂದಿರ: ಎಡನೀರು ಶ್ರೀ: ಮಾವಿನಕಟ್ಟೆ ಶ್ರೀ ಅಯ್ಯಪ್ಪ ಭಜನಾಮಂದಿರದ 41ನೇ ವಾರ್ಷಿಕೋತ್ಸವದ ಧಾರ್ಮಿಕ ಸಭೆ


              ಬದಿಯಡ್ಕ: ಯಾವುದೇ ತಾರತಮ್ಯವಿಲ್ಲದೆ ಎಲ್ಲರನ್ನೂ ಒಂದುಗೂಡಿಸುವ ಹಿಂದೂಧರ್ಮದ ಪ್ರಧಾನ ಕೇಂದ್ರವಾಗಿ ಭಜನಾಮಂದಿರವಿದೆ. ಭಜನಾಮಂದಿರವು ಬೇಧಭಾವವಿಲ್ಲದೆ ಧಾರ್ಮಿಕ ಸಂಸ್ಕಾರವನ್ನು ನೀಡುವ ಭಕ್ತರ ಶ್ರದ್ಧಾಕೇಂದ್ರವಾಗಿದೆ ಎಂದು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ನುಡಿದರು.
           ಮಾವಿನಕಟ್ಟೆ ಶ್ರೀ ಅಯ್ಯಪ್ಪ ಭಜನಾ ಮಂದಿರದ 41ನೇ ವಾರ್ಷಿಕೋತ್ಸವದ ಸಂದಭರ್Àದಲ್ಲಿ ಸೋಮವಾರ ನಡೆದ ಧಾರ್ಮಿಕ ಸಭೆಯನ್ನು ದೀಪಬೆಳಗಿಸಿ ಉದ್ಘಾಟಿಸಿ ಅವರು ಆಶೀರ್ವಚನವನ್ನು ನೀಡಿದರು.
        ಪಾಮರರಿಂದ ಪಂಡಿತರ ವರೆಗೆ ಎಲ್ಲರೂ ದೇವರ ಭಜನೆಯಲ್ಲಿ ಪಾಲ್ಗೊಂಡಾಗ ನಾಡು ಸಮೃದ್ಧಿಯಾಗುತ್ತದೆ. ಮಂದಿರವನ್ನು ಸುವ್ಯವಸ್ಥಿತವಾಗಿ ನಡೆಸಿಕೊಂಡು ಬರುತ್ತಿರುವ ಭಕ್ತರಿಗೆ ದೇವರ ಅನುಗ್ರಹವಿರಲಿ ಎಂದರು.
            ಶ್ರೀಮಂದಿರದ ಸೇವಾಸಮಿತಿಯ ಅಧ್ಯಕ್ಷ ಕೆ. ಗಂಗಾಧರ್ ತೆಕ್ಕೆಮೂಲೆ ಅಧ್ಯಕ್ಷತೆ ವಹಿಸಿದ್ದರು. ಅಯ್ಯಪ್ಪ ಸೇವಾ ಸಮಿತಿಯ ರಾಜ್ಯಸಮಿತಿ ಸದಸ್ಯ ನಾರಾಯಣ ಗುರುಸ್ವಾಮಿ ಕೊಟ್ಟೋಡಿ ಧಾರ್ಮಿಕ ಭಾಷಣದಲ್ಲಿ ಮಂಡಲ ವ್ರತಕಾಲದಲ್ಲಿ ವ್ರತಧಾರಿಗಳ ಅನುಷ್ಠಾನದ ಕುರಿತು ಮಾತನಾಡಿದರು. ಅಯ್ಯಪ್ಪ ಮಾಲೆ ಧರಿಸಿದಾಗಲೂ ಇತರ ದಿನಗಳಲ್ಲಿಯೂ ನಮ್ಮ ಆತ್ಮದಲ್ಲಿ ಪರಮಾತ್ಮನನ್ನು ತುಂಬಿಕೊಳ್ಳಬೇಕು. ಪ್ರತೀ ಮನೆಯಲ್ಲಿಯೂ ದೇವರ ನಾಮಸ್ಮರಣೆ ನಿರಂತರ ನಡೆದಾಗ ಅನ್ಯಾಯ, ಅಧರ್ಮಗಳು ದೂರವಾಗುತ್ತದೆ ಎಂದರು. ಯುಎಇ ಉದ್ಯಮಿ ಶಿವಶಂಕರ ನೆಕ್ರಾಜೆ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಊರಿನ ಹಿರಿಯರಾದ ಕೆ.ಕಣ್ಣನ್ ಕೋಳಾರಿಯಡ್ಕ, ಕುಂಞÂಕಣ್ಣ ಮಣಿಯಾಣಿ ತೆಕ್ಕೆಮೂಲೆ, ಬಟ್ಯಪಾಟಾಳಿ ಪಡುಮೂಲೆ ಇವರನ್ನು ಸನ್ಮಾನಿಸಲಾಯಿತು. ಬಾಲಗೋಕುಲದ ವಿದ್ಯಾರ್ಥಿಗಳಿಗೆ ನೃತ್ಯ ಭಜನಾ ತರಬೇತಿಯನ್ನು ನೀಡಿದ ರವಿರಾಜ ಏಳ್ಕಾನ ಅವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಕೃಷ್ಣಲೀಲಾ ಬಾಲಗೋಕುಲದ ವಿದ್ಯಾರ್ಥಿಗಳು ಪ್ರಾರ್ಥನೆಯನ್ನು ಹಾಡಿದರು. ಶ್ರೀಮಂದಿರದ ಸೇವಾಸಮಿತಿಯ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಮೈಲ್‍ತೊಟ್ಟಿ ಸ್ವಾಗತಿಸಿ, ಶಶಿಧರ ತೆಕ್ಕೆಮೂಲೆ ವಂದಿಸಿದರು. ವಿಶ್ವನಾಥ ಬಳ್ಳಪದವು ನಿರೂಪಿಸಿದರು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನದಾನ, ಶ್ರೀ ಅಯ್ಯಪ್ಪ ಸ್ವಾಮಿ ಯಕ್ಷಗಾನ ಕಲಾಸಂಘ ಮಾವಿನಕಟ್ಟೆ ಇವರ ಪ್ರಾಯೋಜಕತ್ವದಲ್ಲಿ ಯಕ್ಷಗಾನ ತಾಳಮದ್ದಳೆ ನಡೆಯಿತು.




Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries