HEALTH TIPS

ವರ್ಷಕ್ಕೆ ಒಂದು ಲಕ್ಷ ಉದ್ಯಮಗಳು: ಮಂಜೇಶ್ವರಲ್ಲಿ 454 ಘಟಕಗಳ ಆರಂಭ


        ಮಂಜೇಶ್ವರ: ಒಂದು ವರ್ಷದಲ್ಲಿ ಒಂದು ಲಕ್ಷ ಉದ್ಯಮ ಎಂಬ ಪರಿಕಲ್ಪನೆಯೊಂದಿಗೆ  ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಪರಿಶೀಲನಾ ಸಭೆ ಮತ್ತು ಹೂಡಿಕೆದಾರರ ಸಭೆ ಮಂಜೇಶ್ವರದಲ್ಲಿ ನಡೆಯಿತು. ಶಾಸಕ ಎ.ಕೆ.ಎಂ. ಅಶ್ರಫ್ ಉದ್ಘಾಟಿಸಿದರು. ಮಂಜೇಶ್ವರ ಬ್ಲಾಕ್ ಪಂಚಾಯತಿ ಅಧ್ಯಕ್ಷೆ ಶಮೀನಾ ಟೀಚರ್ ಅಧ್ಯಕ್ಷತೆ ವಹಿಸಿದ್ದರು.
        ಯೋಜನೆಯಡಿ ಮಂಜೇಶ್ವರ ಕ್ಷೇತ್ರದಲ್ಲಿ ಇದುವರೆಗೆ 454 ಉದ್ಯಮಗಳನ್ನು ಆರಂಭಿಸಲಾಗಿದೆ. ಇವು 69 ನಿರ್ಮಾಣ ಉದ್ಯಮಗಳು, 168 ಸೇವಾ ಉದ್ಯಮಗಳು ಮತ್ತು 216 ವ್ಯಾಪಾರ ಉದ್ಯಮಗಳು. ಇದು ಘೋಷಿತ ಗುರಿಯ ಶೇ.38ರಷ್ಟಿದೆ. ಈ ಮೂಲಕ 19.23 ಕೋಟಿ ರೂಪಾಯಿ ಹೂಡಿಕೆಯಾಗಿದ್ದು, 869 ಮಂದಿಗೆ ಹೊಸ ಉದ್ಯೋಗ ಸಿಕ್ಕಿದೆ.
           ಯೋಜನೆಯಡಿ ಕ್ಷೇತ್ರದಲ್ಲಿ 1211 ಉದ್ದಿಮೆಗಳನ್ನು ನಿರೀಕ್ಷಿಸಲಾಗಿದೆ. ಮಂಜೇಶ್ವರ ಪಂಚಾಯತಿ ಯೋಜನೆಯ ಆರಂಭದಲ್ಲೇ ಅತಿ ಹೆಚ್ಚು 90 ಉದ್ದಿಮೆಗಳನ್ನು ಹೊಂದಿ ಗಮನ ಸೆಳೆದಿತ್ತು.
     ಸಮಾರಂಭದಲ್ಲಿ ಪುತ್ತಿಗೆ ಪಂಚಾಯತಿ ಅಧ್ಯಕ್ಷ ಸುಬಣ್ಣ ಆಳ್ವ, ಮೀಂಜ ಪಂಚಾಯತಿ ಅಧ್ಯಕ್ಷೆ ಸುಂದರಿ ಆರ್.ಶೆಟ್ಟಿ, ಎಣ್ಮಕಜೆ ಪಂಚಾಯತಿ  ಅಧ್ಯಕ್ಷ ಜೆ.ಎಸ್.ಸೋಮಶೇಖರ, ಮಂಜೇಶ್ವರ ಪಂಚಾಯತಿ ಅಧ್ಯಕ್ಷೆ ಜೀನ್ ಲವಿನೋ ಮೊಂತೇರೋ, ಪೈವಳಿಕೆ ಪಂಚಾಯತಿ ಅಧ್ಯಕ್ಷೆ ಜಯಂತಿ, ವರ್ಕಾಡಿ ಪಂಚಾಯತಿ ಅಧ್ಯಕ್ಷೆ ಎಸ್.ಭಾರತಿ, ಮಂಗಲ್ಪಾಡಿ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ಖೈರುನ್ನೀಸಾ ಉಮ್ಮರ್, ಕೆ.ಎಸ್.ಎಸ್.ಐ. ಅಧ್ಯಕ್ಷ ರಾಜಾರಾಂ ಉಪಸ್ಥಿತರಿದ್ದು ಮಾತನಾಡಿದರು.
          ಕಾಸರಗೋಡು ಜಿಲ್ಲಾ ಕೈಗಾರಿಕಾ ಕೇಂದ್ರದ ಜನರಲ್ ಮ್ಯಾನೇಜರ್ ಕೆ.ಸಜಿತ್ ಕುಮಾರ್ ಅವರು ಮಂಜೇಶ್ವರ ಮಂಡಲದ ವಿವಿಧ ಪಂಚಾಯತಿಗಳು ಒಂದು ವರ್ಷದಲ್ಲಿ ಒಂದು ಲಕ್ಷ ಉದ್ದಿಮೆ ಯೋಜನೆ ಮೂಲಕ ಇಲಾಖೆ ಜಾರಿಗೆ ತಂದ ಯೋಜನೆಗಳು ಹಾಗೂ ಹೊಸ ಯೋಜನೆಗಳ ಪ್ರಗತಿ ವರದಿಯನ್ನು ಮಂಡಿಸಿದರು. ಹೂಡಿಕೆದಾರರು ಕ್ಷೇತ್ರದಲ್ಲಿ ಹೂಡಿಕೆ ಅವಕಾಶಗಳು ಮತ್ತು ಬ್ಯಾಂಕಿಂಗ್ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಚರ್ಚಿಸಿದರು. ಉಪಜಿಲ್ಲಾ ಕೈಗಾರಿಕೆ ಅಧಿಕಾರಿ ಎ.ಸುನೀಲ್ ವಂದಿಸಿದರು.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries