HEALTH TIPS

ವ್ಯಸನ ಮುಕ್ತ ಕೇರಳ: ಎರಡನೇ ಹಂತದ ಅಭಿಯಾನ, ಜಿಲ್ಲೆಯಲ್ಲಿ ಗೋಲ್ ಚಾಲೆಂಜ್

 

            ಕಾಸರಗೋಡು: ಮಾದಕದ್ರವ್ಯ ಮುಕ್ತ ಕೇರಳ 2ನೇ ಹಂತದ ಅಭಿಯಾನದ ಚಟುವಟಿಕೆಗಳ ಕುರಿತು ಚರ್ಚಿಸಲು ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರಚಂದ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ರಾಜ್ಯ ಸರ್ಕಾರದ ನಿರ್ದೇಶನದಂತೆ ನವೆಂಬರ್ 14 ರಿಂದ ಜನವರಿ 26 ರವರೆಗೆ ಅಭಿಯಾನ ಆಯೋಜಿಸಲು ನಿರ್ಧರಿಸಲಾಗಿದೆ. ವಿಶ್ವಕಪ್ ಕಾಲ್ಚೆಂಡು ಸ್ಪರ್ಧೆ ನಡೆಯುತ್ತಿರುವ ಸಂದರ್ಭ ಈ  ಮೂಲಕ ವ್ಯಸನ-ವಿರೋಧಿ ಸಂದೇಶ ರವಾನಿಸುವುದರ ಜತೆಗೆ  ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಕ್ರೀಡಾ ಇಲಾಖೆಯ ನೇತೃತ್ವದಲ್ಲಿ ರಾಜ್ಯ ಮತ್ತು ಜಿಲ್ಲೆಯಲ್ಲಿ 'ಗೋಲ್ ಚಾಲೆಂಜ್'ಆಯೋಜಿಸಲಾಗಿದ್ದು, ಇದರಲ್ಲಿ ಎರಡು ಕೋಟಿ ಗೋಲು ಬಾರಿಸುವ ಗುರಿಯಿರಿಸಲಾಗಿದೆ. ಇವುಗಳಲ್ಲಿ ಸ್ಥಳೀಯಾಡಳಿತ ಸಂಸ್ಥೆಳು, ಶಾಲೆಗಳು, ಖಾಸಗಿ ಕಂಪನಿಗಳು, ಬಸ್ ನಿಲ್ದಾಣ ಮತ್ತು ಸಾರ್ವಜನಿಕ ಸ್ಥಳಗಳೂ ಒಳಗೊಂಡಿದೆ.
             ಸಚಿವರು, ಸಂಸದರು, ಸೆಲೆಬ್ರಿಟಿಗಳು, ಸಾಂಉದಾಯಿಕ ಪ್ರತಿನಿಧಿಗಳು, ಸಮುದಾಯದ ಮುಖಂಡರು ಮತ್ತು ಕ್ರೀಡಾ ಪಟುಗಳು ಮಾದಕ ದ್ರವ್ಯ ವಿರೋಧಿ ಫುಟ್ಬಾಲ್ ಪಂದ್ಯವನ್ನು ಆಯೋಜಿಸಲಿದ್ದು, ಅಧಿಕಾರಿಗಳು ಕೂಡ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಲಹರಿ ಮುಕ್ತ ಕೇರಳದ ಎರಡನೇ ಹಂತದ ಅಭಿಯಾನದನ್ವಯ ಕೈಗೊಂಡಿರುವ ಕಾರ್ಯಕ್ರಮಗಳನ್ನು ಆಯೋಜಿಸಿದ ನಂತರ ಜಿಲ್ಲಾಧಿಕಾರಿ, ಅಬಕಾರಿ ಉಪ ಆಯುಕ್ತರು ಹಾಗೂ ಜಿಲ್ಲಾ ಮಾಹಿತಿ ಅಧಿಕಾರಿಗೆ ಮಾಹಿತಿ ನೀಡಬೇಕು ಎಂದು ಸಭೆಯಲ್ಲಿ ಜಿಲ್ಲಾಧಿಕಾರಿ ಸೂಚಿಸಿದರು.    ಹೆಚ್ಚುವರಿ ಎಸ್ಪಿ ಪಿ.ಕೆ.ರಾಜು, ವಿಶೇಷ ಬ್ರಾಂಚ್ ಡಿವೈಎಸ್ಪಿ ಪಿ.ಕೆ.ಸುಧಾಕರನ್, ಕಾಸರಗೋಡು ಜನರಲ್ ಆಸ್ಪತ್ರೆ ಅಧೀಕ್ಷಕ ಡಾ. ಕೆ.ಕೆ.ರಾಜಾರಾಂ, ಗ್ರಂಥಾಲಯ ಆಡಳಿತ ಮಂಡಳಿ ಸದಸ್ಯ ಇ. ಜನಾರ್ದನನ್ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮುಖ್ಯಸ್ಥರು ಪಾಲ್ಗೊಂಡಿದ್ದರು. ವಿಮುಕ್ತಿ ಮಿಷನ್ ಜಿಲ್ಲಾ ವ್ಯವಸ್ಥಾಪಕ ಟೋನಿ ಎಸ್.ಸ್ವಾಗತಿಸಿದರು.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries