HEALTH TIPS

ಪಾಪ್ಯುಲರ್ ಫ್ರಂಟ್- ಕೆಯುಡಬ್ಲ್ಯುಜೆ ಅಕ್ರಮ ವ್ಯವಹಾರಗಳು: ತನಿಖೆ ಕೈಗೆತ್ತಿಕೊಂಡ ಎನ್.ಐ.ಎ


             ನವದೆಹಲಿ: ನಿಷೇಧಿತ ಸಂಘಟನೆ ಪಾಪ್ಯುಲರ್ ಫ್ರಂಟ್ ಮತ್ತು ಕೇರಳ ಪತ್ರಕರ್ತರ ಒಕ್ಕೂಟ (ಕೆಯುಡಬ್ಲ್ಯುಜೆ) ಜತೆಗಿನ ಅಕ್ರಮ ವ್ಯವಹಾರಗಳ ಕುರಿತು ಎನ್‍ಐಎ ತನಿಖೆ ಆರಂಭಿಸಿದೆ.
           ಪಾಪ್ಯುಲರ್ ಫ್ರಂಟ್ ಪರವಾಗಿ ಕೆಯುಡಬ್ಲ್ಯೂಜೆ ದೆಹಲಿ ಘಟಕ ಕೈಗೊಂಡ ಕ್ರಮಗಳ ಮೇಲೆ ನಿಗಾ ವಹಿಸಿದ ನಂತರ ದೆಹಲಿ ಪೋಲೀಸರು ತನಿಖೆಯನ್ನು ಎನ್‍ಐಎಗೆ ಹಸ್ತಾಂತರಿಸಿದ್ದಾರೆ.
          ಪಾಪ್ಯುಲರ್ ಫ್ರಂಟ್ ನಾಯಕ ಮತ್ತು ಕೆಯುಡಬ್ಲ್ಯೂಜೆ ದೆಹಲಿ ಘಟಕದ ಮಾಜಿ ಕಾರ್ಯದರ್ಶಿ ಸಿದ್ದಿಕ್ ಕಾಪ್ಪನ್ ನ  ಜೈಲುವಾಸದ ಎರಡನೇ ವμರ್Áಚರಣೆಯಾದ ಅಕ್ಟೋಬರ್ 5 ರಂದು ಕೆಯುಡಬ್ಲ್ಯೂಜೆ ದೆಹಲಿ ಪ್ರೆಸ್ ಕ್ಲಬ್ ಎದುರು ನಡೆದ ಕ್ಯಾಂಡಲ್ ದೀಪ ಜಾಗರಣೆಯನ್ನು ದೆಹಲಿ ಪೋಲೀಸರು ತಡೆದಿದ್ದರು. ಇದಾದ ಬಳಿಕ ಕೆಯುಡಬ್ಲ್ಯುಜೆ ಉಪಾಧ್ಯಕ್ಷ ಎಂ.ಪ್ರಶಾಂತ್ ಅವರ ಅಧ್ಯಕ್ಷತೆಯಲ್ಲಿ ಸಭೆ ಆಯೋಜಿಸಲಾಗಿತ್ತು.ಸಿದ್ದಿಕ್ ಕಾಪ್ಪನ್ ಅವರ ಪತ್ನಿ ರೆಹನತ್  ಹಾಗೂ ಕೇರಳದ ಕಾಪ್ಪನ್ ಬೆಂಬಲಿಗರು ಆನ್‍ಲೈನ್‍ನಲ್ಲಿ ಸಭೆಯಲ್ಲಿ ಭಾಗವಹಿಸಿದ್ದರು.
          ಸಿದ್ದಿಕ್ ಕಾಪ್ಪನ್ ಪ್ರಕರಣವನ್ನು ನಡೆಸಲು ಕೆಯುಡಬ್ಲ್ಯುಜೆ ಪಾಪ್ಯುಲರ್ ಫ್ರಂಟ್ ನಿಂದ ಹವಾಲಾ ಮೂಲಕ ಭಾರೀ ಮೊತ್ತದ ಹಣವನ್ನು ಪಡೆದಿದೆ ಎಂಬ ಮಾಹಿತಿ ದೆಹಲಿ ಪೋಲೀಸರಿಗೆ ಲಭ್ಯವಾಗಿದೆ.  ಗಲ್ಫ್ ರಾಷ್ಟ್ರಗಳು ಸೇರಿದಂತೆ ಕಾಪನ್ ಪ್ರಕರಣಕ್ಕೆ ಹಣದ ಹೊಳೆ ಹರಿದುಬಂದಿದೆ. ಕೇರಳ ಸೇರಿದಂತೆ ರಾಜ್ಯಗಳಿಗೂ ತನಿಖೆ ವಿಸ್ತರಿಸಬೇಕಿದ್ದ ಕಾರಣ ಎನ್‍ಐಎಗೆ ಹಸ್ತಾಂತರಿಸಲಾಗಿದೆ.

                    ಸಿದ್ದಿಕ್ ಕಾಪ್ಪನ್ ಬಂಧನವಾದ ಕೂಡಲೇ ಪಾಪ್ಯುಲರ್ ಫ್ರಂಟ್ ನ ನಿμÁ್ಠವಂತ ಮಾಧ್ಯಮ ಕಾರ್ಯಕರ್ತ ಎನ್.ಪಿ.ಚೇಕುಟ್ಟಿ ನೇತೃತ್ವದಲ್ಲಿ ಸಿದ್ದಿಕ್ ಕಾಪ್ಪನ್ ಐಕ್ಯತಾ ಸಮಿತಿಯನ್ನು ರಚಿಸಲಾಯಿತು. ಕೆಯುಡಬ್ಲ್ಯುಜೆ ಸದಸ್ಯರೂ ಸಮಿತಿಯಲ್ಲಿದ್ದಾರೆ. ಗಲ್ಫ್ ರಾಷ್ಟ್ರಗಳು ಸೇರಿದಂತೆ ಈ ಸಮಿತಿ ಮೂಲಕ ಹವಾಲಾ ಮೂಲಕ ಹಣ ಪಡೆಯಲಾಗಿದೆ.
        ಸಿದ್ದಿಕ್ ಕಾಪ್ಪನ್ ಪರ ಹಿರಿಯ ವಕೀಲ ಕಪಿಲ್ ಸಿಬಲ್ ಹಲವು ಬಾರಿ ಸುಪ್ರೀಂ ಕೋರ್ಟ್ ಗೆ ಹಾಜರಾಗಿದ್ದರು. ಮಥುರಾ ಸೆಷನ್ಸ್ ಕೋರ್ಟ್, ಲಕ್ನೋ ಎನ್ಐಎ ಕೋರ್ಟ್ ಮತ್ತು ಅಲಹಾಬಾದ್ ಹೈಕೋರ್ಟಿನ ಲಕ್ನೋ ಬೆಂಚ್ನಲ್ಲಿ ಕಾಪನ್ ಪ್ರಕರಣಕ್ಕೆ ಪಿಎಫ್ ಐ ಲಕ್ಷಾಂತರ ರೂಪಾಯಿಗಳನ್ನು ಪಾವತಿಸಿತು. ಕೆಯುಡಬ್ಲ್ಯುಜೆ ಸಂಘಟನೆ ವರದಿಯಲ್ಲಿ ಸಿದ್ದಿಕ್ ಕಾಪ್ಪನ್ ಪ್ರಕರಣಕ್ಕೆ 50 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ ಎಂದು ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಲೆಕ್ಕಕ್ಕೆ ಸಿಗದ ಲಕ್ಷಗಟ್ಟಲೆ ಕಪ್ಪು ಹಣ ಖರ್ಚು ಮಾಡಿರುವುದು ಸ್ಪಷ್ಟವಾಗಿದೆ.
       ಸಿದ್ದಿಕ್ ಕಾಪನ ಪರವಾಗಿ ವಿದೇಶಿ ಮಾಧ್ಯಮಗಳಲ್ಲಿ ಸುದ್ದಿ ಮಾಡಲು ಲಕ್ಷಗಟ್ಟಲೆ ಖರ್ಚು ಮಾಡಲಾಗಿದೆ. ರಾಷ್ಟ್ರೀಯ ಮಾಧ್ಯಮಗಳು ಮತ್ತು ಆನ್‍ಲೈನ್‍ನಲ್ಲಿ ಸಿದ್ದಿಕ್ ಕಾಪನ್ ನನ್ನು ಮುಗ್ಧ ಎಂದು ಬಿಂಬಿಸುವ ಸುದ್ದಿ ಸರಣಿಗಳು ಇದ್ದವು.
         ಸಿದ್ದಿಕ್ ಕಾಪ್ಪನ್ ಪ್ರಕರಣದಲ್ಲಿ ಸಾಕ್ಷ್ಯ ಮತ್ತು ದಾಖಲೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ, ಮಾಧ್ಯಮಗಳು ಕಾಪ್ಪನ ಪರವಾಗಿ ನಿರಂತರವಾಗಿ ಸುದ್ದಿಗಳನ್ನು ಸೃಷ್ಟಿಸಿದವು. ಪರಿಣಾಮವಾಗಿ ಕೆಯುಡಬ್ಲ್ಯುಜೆ ದೆಹಲಿ ಘಟಕವು ಪಾಪ್ಯುಲರ್ ಫ್ರಂಟ್‍ನ ಮಾಧ್ಯಮ ಸೆಲ್ ಆಯಿತು. ಪಾಪ್ಯುಲರ್ ಫ್ರಂಟ್ ನಿಷೇಧದ ನಂತರವೂ ಕೆಯುಡಬ್ಲ್ಯೂಜೆ ಕಾಪ್ಪನ್ ಗಾಗಿ ಸಾರ್ವಜನಿಕ ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸಿದ್ದು, ಎನ್‍ಐಎ ತನಿಖೆಯನ್ನು ಕೈಗೆತ್ತಿಕೊಳ್ಳುತ್ತಿದೆ.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries