HEALTH TIPS

ಕೆಎಲ್‍ಇ-ಎಂಎಲ್ ಕಾರ್ಖಾನೆ ನೌಕರರಿಗೆ ಬಾಕಿ ಮೊತ್ತ ವಿತರಿಸಲು ಮಾನವ ಹಕ್ಕು ಆಯೋಗ ಸೂಚನೆ

 


 
            ಕಾಸರಗೋಡು: ಜಿಲ್ಲೆಯ ಬೆದ್ರಡ್ಕದಲ್ಲಿ ಚಟುವಟಿಕೆ ನಡೆಸುತ್ತಿರುವ ಕೆಎಲ್‍ಇ-ಎಂಎಲ್ ಕಾರ್ಖಾನೆ ನೌಕರರಿಗೆ ನೀಡಲು ಬಾಕಿಯಿರುವ ಮೊತ್ತವನ್ನು ನಾಲ್ಕು ವಾರದೊಳಗೆ ಪಾವತಿಸುವಂತೆ ಮಾನವ ಹಕ್ಕುಗಳ ಆಯೋಗ ಸೂಚಿಸಿದೆ.
          ಕಂಪನಿಯ ಉದ್ಯೋಗಿ ಮತ್ತು ಎಸ್‍ಟಿಯುನ ಪ್ರಧಾನ ಕಾರ್ಯದರ್ಶಿಯಾಗಿದ್ದ ಕೆಪಿ ಮುಹಮ್ಮದ್ ಅಶ್ರಫಿ ಅವರು ಡಿಸೆಂಬರ್ 18, 2020 ರಂದು ಅಂದಿನ ಸಂಸದ ಪಿ.ಕೆ ಕುಞËಲಿಕುಟ್ಟಿ ಮೂಲಕ ಸಲ್ಲಿಸಿದ್ದ ಮೇಲ್ಮನವಿಗೆ ಸಂಬಂಧಿಸಿ ಕೇಂದ್ರ ಮಾನವ ಹಕ್ಕುಗಳ ಆಯೋಗ ಈ ಆದೇಶ ನೀಡಿದೆ.
            2020 ರಲ್ಲಿ, ಕೇಂದ್ರ ಸಾರ್ವಜನಿಕ ವಲಯದ ಸಂಸ್ಥೆಯಾಗಿದ್ದ ಭೆಲ್ ಇಎಂಎಲ್ ಕಂಪನಿ ತನ್ನ ನೌಕರರಿಗೆ ವೇತನ ಪಾವತಿ ಮಾಡದ ಕಾರಣ ಮುಷ್ಕರ ಹೂಡಿದ್ದು, ನಂತರ ಕಾರ್ಖಾನೆಯನ್ನು ಮುಚ್ಚಲಾಗಿತ್ತು.  ನಿರಂತರ ಕಾನೂನು ಹೋರಾಟಗಳ ನಂತರ ಕೇಂದ್ರ ಸರ್ಕಾರದ ಅಧೀನದಲ್ಲಿದ್ದ ಸಂಸ್ಥೆಯನ್ನು ರಾಜ್ಯ ಸರ್ಕಾರಕ್ಕೆ ವರ್ಗಾಯಿಸಲಾಗಿದ್ದು, ಏಪ್ರಿಲ್ 1, 2022 ರಿಂದ ರಾಜ್ಯ ಸರ್ಕಾರಿ ಕಂಪನಿಯಾಗಿ ಕಾರ್ಯನಿರ್ವಹಿಸುತ್ತದೆ. ಪಿಂಚಣಿದಾರರ ಸಂಭಾವನೆ ಮತ್ತು ಇತರ ಪ್ರಯೋಜನಗಳನ್ನು ಕಂಪನಿಯು ಸಂಪೂರ್ಣವಾಗಿ ಪಾವತಿಸದಿರುವುದರಿಂದ ನಿವೃತ್ತ ನೌಕರರಿಗೆ ವರ್ಷಗಳು ಕಳೆದರೂ ಪಿಂಚಣಿ ಸಿಗುತ್ತಿಲ್ಲ ಎಂಬ ದೂರು ವ್ಯಾಪಕಗೊಂಡಿದೆ.
             ಪ್ರಸಕ್ತ ಉದ್ಯೋಗದಲ್ಲಿರುವ ಉದ್ಯೋಗಿಗಳಿಗೆ ಕಂಪನಿಯನ್ನು ಮುಚ್ಚುವ ಅವಧಿಯಲ್ಲಿನ ವೇತನವನ್ನೂ ನೀಡಲು ಬಾಕಿ ಇದೆ. ನವೆಂಬರ್ 2 ರಂದು ಮಾನವ ಹಕ್ಕುಗಳ ಆಯೋಗ ಹೊರಡಿಸಿದ ಆದೇಶದಲ್ಲಿ, ಬಾಕಿಯಿರಿಸಿಕೊಂಡಿರುವ ಮೊತ್ತವನ್ನು ನಾಲ್ಕು ವಾರಗಳಲ್ಲಿ ಪಾವತಿಸಬೇಖು ಮತ್ತು ಆರು ವಾರಗಳಲ್ಲಿ ವರದಿಯನ್ನು ಸಲ್ಲಿಸುವಂತೆ ಕೇರಳದ ಮುಖ್ಯ ಕಾರ್ಯದರ್ಶಿಗೆ ಸೂಚಿಸಲಾಗಿದೆ.




 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries