HEALTH TIPS

ಕಾಲಭೈರವನಿಗೆ ಮದ್ಯ-ಸಿಗರೇಟ್​ನಿಂದ ಅಲಂಕಾರ ಮಾಡಿದ ಭಕ್ತರು!

 

            ಉಜ್ಜೈನಿ: ಮಧ್ಯಪ್ರದೇಶದಲ್ಲಿ ಭೈರವ ಅಷ್ಟಮಿಯ ಪ್ರಯುಕ್ತ, ಉಜ್ಜೈನಿಯ ಭಗ್ತಿಪುರದಲ್ಲಿರುವ ಕಾಲ ಭೈರವ ದೇವಸ್ಥಾನದಲ್ಲಿ ಸಂಭ್ರಮದಿಂದ ವಾರ್ಷಿಕ ಕಾರ್ಯಕ್ರಮಗಳು ನಡೆದಿವೆ. ಈ ಸಂದರ್ಭದಲ್ಲಿ ಭಕ್ತರು ಕಾಲ ಬೈರವನಿಗೆ ಮದ್ಯ, ಸಿಗರೇಟ್ ಸೇರಿದಂತೆ ಸುಮಾರು 1351 ವಿವಿಧ ಮಾದರಿಯ ಭೋಗದ ವಸ್ತುಗಳನ್ನು ಭೈರವನಿಗೆ ಭಕ್ತರು ಭಕ್ತಿಯಿಂದ ಅರ್ಪಿಸಿದ್ದಾರೆ.

            ಉಜ್ಜೈನಿಯ ಕಾಲ ಭೈರವ ದೇವಾಲಯದಲ್ಲಿ ಮದ್ಯವನ್ನು ಅರ್ಪಿಸುವ ಸಂಪ್ರದಾಯವಿದೆ. ಪ್ರಾಚೀನ ಕಾಲದಿಂದಲೂ ಇಲ್ಲಿ ಭೈರವ ಅಷ್ಟಮಿಯನ್ನು ಭಕ್ತಿಯಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಇದೀಗ ಭಕ್ತರ ಸಮರ್ಪಿಸಿರುವಂತಹ ಮದ್ಯದ ವಸ್ತುಗಳನ್ನು ಬಳಸಿ ಭೈರವ್​ ಬಾಬಾನನ್ನು ಆಕರ್ಷಕವಾಗಿ ಅಲಂಕಾರ ಮಾಡಿದ್ದಾರೆ. ಪೂಜಾ ವಿಧಿವಿಧಾನಗಳು ಮುಗಿಯುತ್ತಿದ್ದಂತೆ ಮದ್ಯದ ವಸ್ತುಗಳನ್ನು ಪ್ರಸಾದವಾಗಿ ಹಂಚಲಾಗಿದೆ.

                ವರದಿಯ ಪ್ರಕಾರ 390 ಬಗೆಯ ಅಗರಬತ್ತಿಗಳು, 180 ವಿಧದ ಮುಖಗವಸುಗಳು, 75 ಬಗೆಯ ಒಣ ಹಣ್ಣುಗಳು, 64 ಬಗೆಯ ಚಾಕೊಲೇಟ್‌ಗಳು, 60 ಬಗೆಯ ಗುಜರಾತಿ ತಿನಿಸು, 60 ಬಗೆಯ ಸಿಗರೇಟ್‌ಗಳು, 56 ಬಗೆಯ ವಿವಿಧ ತಿಂಡಿಗಳು, 55 ಬಗೆಯ ಸಿಹಿತಿಂಡಿಗಳು, 45 ಬಗೆಯ ಬಿಸ್ಕೆಟ್‌ಗಳು, 40 ಬಗೆಯ ಮದ್ಯ (ರಮ್, ವಿಸ್ಕಿ, ಟಕಿಲಾ, ವೋಡ್ಕಾ ಬಿಯರ್ ಮತ್ತು ಶಾಂಪೇನ್), ಚಿಲ್ಲಮ್, ಗಾಂಜಾ, 40 ಬಗೆಯ ಬೇಕರಿ ವಸ್ತುಗಳು ಮತ್ತು 30 ಬಗೆಯ ಗಜಕ್, 28 ಬಗೆಯ ತಂಪು ಪಾನೀಯಗಳು ಮತ್ತು 28 ಬಗೆಯ ಹಣ್ಣುಗಳು ಭೋಗದ ವಸ್ತುಗಳಾಗಿ ಕಾಲ ಭೈರವನಿಗೆ ಅಲಂಕೃತವಾಗಿದ್ದವು.

               ಭೈರವ ಅಷ್ಟಮಿಯ ದಿನದಂದು ಬಾಬಾ ಭೈರವನಾಥನನ್ನು ಪೂಜಿಸಿದರೆ ಭಕ್ತರ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ ಎಂಬ ನಂಬಿಕೆ ಜನರಲ್ಲಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries