HEALTH TIPS

ಪಕ್ಷದೊಳಗೆ ಯಾವುದೇ ಸಮಾನಾಂತರ ಚಟುವಟಿಕೆಗೆ ಅವಕಾಶವಿಲ್ಲ: ಕಾಂಗ್ರೆಸ್ ನ್ನು ನಾಶ ಮಾಡುವ ಅಜೆಂಡಾವನ್ನು ಸಹಿಸುವುದಿಲ್ಲ; ವಿ.ಡಿ.ಸತೀಶನ್


                      ತಿರುವನಂತಪುರ  : ರಾಜ್ಯದಲ್ಲಿ ಕಾಂಗ್ರೆಸ್‍ನಲ್ಲಿ ಸಮಾನಾಂತರ ಚಟುವಟಿಕೆ ನಡೆಸಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ವಿಪಕ್ಷ ನಾಯಕ ವಿ.ಡಿ.ಸತೀಶನ್ ಹೇಳಿದ್ದಾರೆ.
        ಕೇರಳದಲ್ಲಿ ಕಾಂಗ್ರೆಸ್ ತಂಡವಾಗಿ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ನಾಶ ಮಾಡುವ ಅಜೆಂಡಾ ಸಹಿಸುವುದಿಲ್ಲ ಎಂದು ಹೇಳಿದ್ದಾರೆ. ಶಶಿ ತರೂರ್ ಅವರ ಮಲಬಾರ್ ಜಿಲ್ಲೆಗಳ ಪ್ರವಾಸಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರವಾಗಿ ಸತೀಶನ್ ಈ ಹೇಳಿಕೆ ನೀಡಿದ್ದಾರೆ.
        ಕಾಂಗ್ರೆಸ್ ನಲ್ಲಿ ಮತೀಯವಾದಕ್ಕೆ ಇನ್ನು ಅವಕಾಶವಿಲ್ಲ. ಎಲ್ಲ ನಾಯಕರಿಗೂ ಪಕ್ಷದಲ್ಲಿ ಸ್ಥಾನಗಳಿವೆ. ಅದರಂತೆ ಎಲ್ಲರೂ ನಡೆದುಕೊಳ್ಳಬೇಕು. ಈ ವಿಚಾರವಾಗಿ ಮಾಧ್ಯಮಗಳು ಏನು ಹೇಳಬೇಕೋ ಅದನ್ನು ಮಾತ್ರ ಮಾಧ್ಯಮಗಳು ಪಡೆಯುತ್ತವೆ, ತನ್ನ ಬಾಯಿಂದ ಮಾಧ್ಯಮಗಳು ಕೇಳುವುದಲ್ಲ ಎಂದು ಸತೀಶನ್ ಸ್ಪಷ್ಟಪಡಿಸಿದರು. ಸಂಘಟನಾತ್ಮಕ ವಿಷಯಗಳಿಗೆ ಉತ್ತರಿಸುವುದು ಕೆಪಿಸಿಸಿ ಅಧ್ಯಕ್ಷರ ಜವಾಬ್ದಾರಿಯಾಗಿದ್ದು, ಅವರದನ್ನು ನಿರ್ವಹಿಸುತ್ತಿದ್ದಾರೆ ಎಂದು ಪ್ರತಿಪಕ್ಷದ ನಾಯಕ ಸ್ಪಷ್ಟಪಡಿಸಿದರು.
         ಮಹಾನಗರ ಪಾಲಿಕೆ ಪತ್ರ ವಿವಾದದಲ್ಲಿ ಪ್ರಕರಣದ ತನಿಖೆ ನಡೆಸಿದ ಕ್ರೈಂ ಬ್ರಾಂಚ್ ಅನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಲೇವಡಿ ಮಾಡಿದ್ದಾರೆ. ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಅನವೂರು ನಾಗಪ್ಪನವರ ಹೇಳಿಕೆಯನ್ನು ಅಪರಾಧ ವಿಭಾಗದ ಪೋಲೀಸರು ದೂರವಾಣಿ ಮೂಲಕ ದಾಖಲಿಸಿಕೊಂಡಿದ್ದಾರೆ. ಪಕ್ಷವೇ ತನಿಖಾ ಸಂಸ್ಥೆಯಾಗಿರುವುದು ಹಾಸ್ಯಾಸ್ಪದ. ಇದೇ ರೀತಿ ಮುಂದುವರಿದರೆ ರಾಜ್ಯ ಸರಕಾರಕ್ಕೆ ಪಿಂಚಣಿ ಕೊಡಲೂ ಸಾಧ್ಯವಾಗುವುದಿಲ್ಲ. ದುಂದು ವೆಚ್ಚವನ್ನು ನಿಯಂತ್ರಿಸಲು ಹಣಕಾಸು ಇಲಾಖೆಗೆ ಸಾಧ್ಯವಾಗುತ್ತಿಲ್ಲ. ಹಣವಿಲ್ಲದೇ ಸರಕಾರದ ಕೆಲಸಗಳು ಅರ್ಧಕ್ಕೆ ನಿಂತಿವೆ. ಆರ್ಥಿಕ ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಸರಕಾರ ಸ್ಥಳೀಯ ಸಂಸ್ಥೆಗಳ ಕತ್ತು ಹಿಡಿದಿದೆ ಎಂದು ವಿ.ಡಿ.ಸತೀಶನ್ ಟೀಕಿಸಿದರು.ರಾಜ್ಯದಲ್ಲಿ ಹಿಂಬಾಗಿಲ ನೇಮಕಾತಿಯಲ್ಲಿ ಯುಡಿಎಫ್ ಮುಷ್ಕರ ಬಲಗೊಳಿಸಲಿದೆ ಎಂದು ಸತೀಶನ್ ಹೇಳಿದರು.




Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries