HEALTH TIPS

ಮಂಜೇಶ್ವರ ಉಪಜಿಲ್ಲಾ ಕಲೋತ್ಸವಕ್ಕೆ ಚಾಲನೆ:ಬಹುಭಾಷಾ ಸಂಗಮ ಭೂಮಿಯಾದ ಮಂಜೇಶ್ವರದಿಂದ ಕಲಾಪ್ರತಿಭೆಗಳು ಕಲೋತ್ಸವದ ಮೂಲಕ ಬೆಳಕಿಗೆ ಬರಲಿ: ಶಾಸಕ ಎ.ಕೆ.ಎಂ.ಅಶ್ರಫ್


       ಮಂಜೇಶ್ವರ: ನವೀನ ತಂತ್ರಜ್ಞಾನ ಯುಗದ ಇಂದಿನ ಕಾಲಘಟ್ಟ ಸ್ಪರ್ಧಾತ್ಮಕವೂ, ಸಂಕೀರ್ಣವೂ ಆಗಿದೆ. ಗ್ರಾಮೀಣ ಮಟ್ಟದಿಂದ ವಿಸ್ಕøತವಾಗಿ ಬೆಳೆಯುವ ಅವಕಾಶ, ಅದಕ್ಕೆ ಪೂರಕ ಬೆಂಬಲ ನೀಡುವ ಪ್ರಕ್ರಿಯೆ ಶಾಲಾಕಲೋತ್ಸವಗಳಂತಹ ವೇದಿಕೆಗಳು ಕಲ್ಪಿಸಿದೆ ಎಂದು ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ತಿಳಿಸಿದರು.
         ಮೀಯಪದವು ವಿದ್ಯಾವರ್ಧಕ ವಿದ್ಯಾಸಂಸ್ಥೆಗಳ ಆವರಣದಲ್ಲಿ ಮಂಜೇಶ್ವರ ಉಪಜಿಲ್ಲಾಮಟ್ಟದ 61ನೇ ಕೇರಳ ಶಾಲಾ ಕಲೋತ್ಸವವನ್ನು ಬುಧವಾರ ಬೆಳಿಗ್ಗೆ ಉದ್ಘಾಟಿಸಿ ಅವರು ಮಾತನಾಡಿದರು.
       ಬಹುಭಾಷಾ ಸಂಗಮಭೂಮಿಯಾದ ಮಂಜೇಶ್ವರ ಪ್ರತಿಭಾವಂತ ಸಾಹಿತ್ಯ-ಸಾಂಸ್ಕøತಿಕ ದಿಗ್ಗಜರನ್ನು ನಾಡಿಗೆ ಕೊಡುಗೆ ನೀಡಿದ ನೆಲವಾಗಿದೆ. ಪ್ರತಿಭೆ ಬೆಂಬಲಿಸಿದರೆ ಸೃಜನಶೀಲತೆ ಗಟ್ಟಿಯಾಗುತ್ತದೆ.  ಈ ನಿಟ್ಟಿನಲ್ಲಿ ಮಕ್ಕಳ ಸುಪ್ತ ಪ್ರತಿಭೆಯ ಅನಾವರಣಕ್ಕೆ ಬೆಂಬಲ ನೀಡುವ, ಎಳೆವೆಯಲ್ಲೇ ಪರಿಪೋಶಿಸುವ ಕ್ರಾಂತಿಕಾರಿ ಹೆಜ್ಜೆಯೇ ಕೇರಳದ ಶಾಲಾ ಕಲೋತ್ಸವಗಳಾಗಿದ್ದು, ಸಮರ್ಥ ನಿರ್ದೇಶನಗಳಿಂದ ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣಕ್ಕೆ ರಹದಾರಿಯಾಗಲಿ ಎಂದರು.          ಮೀಯಪದವು ಶ್ರೀ ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆಯ ಸಂಚಾಲಕಿ ಪ್ರೇಮಾ .ಕೆ .ಭಟ್ ಅವರು ದ್ವಜಾರೋಹಣ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೀಂಜ ಗ್ರಾಮ ಪಂಚಾಯತಿ ಅಧ್ಯಕ್ಷೆ ಸುಂದರಿ ಆರ್ ಶೆಟ್ಟಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜಿ.ಪಂ.ಉಪಾಧ್ಯಕ್ಷ ಶಾನ್ ವಾಸ್ ಪಾದೂರು, ಕೇರಳ ತುಳು ಅಕಾಡಮಿ ಅಧ್ಯಕ್ಷ ಕೆ.ಆರ್.ಜಯಾನಂದ, ಬ್ಲಾಕ್ ಪಂಚಾಯತಿ ಉಪಾಧ್ಯಕ್ಷ ಮೊಹಮ್ಮದ್ ಹನೀಫ್ ಪಿ.ಕೆ, ಮೀಂಜ ಪಂಚಾಯತಿ ಉಪಾಧ್ಯಕ್ಷ ಜಯರಾಮ ಬಲ್ಲಂಗುಡೆಲು, ಮೀಂಜ ಪಂಚಾಯತಿ  ಸದಸ್ಯರುಗಳಾದ ಕಮಲಾಕ್ಷಿ ಕೆ, ಅಶ್ವಿನಿ ಪಜ್ವ, ಕಾಸರಗೋಡು ಶಿಕ್ಷಣ ಉಪನಿರ್ದೇಶಕ  ವಾಸು.ಸಿ.ಕೆ, ಉಪಜಿಲ್ಲಾ ಶಿಕ್ಷಣಾಧಿಕಾರಿ ನಂದಿಕೇಶನ್, ಖ್ಯಾತ ವೈದ್ಯ ಡಾ.ಹೆಚ್.ಕೆ.ಗಣೇಶ್, ಚಲಚಿತ್ರ ನಟ ಸಂತೋಷ್ ಮಾಡ ಪಾಲ್ಗೊಂಡಿದ್ದರು. ವಿದ್ಯಾವರ್ಧಕ ಎಯುಪಿ ಶಾಲಾ ಸಂಚಾಲಕಿ ರಾಜೇಶ್ವರಿ ಎಸ್ ರಾವ್  ಅವರು  ದೀಪ  ಪ್ರಜ್ವಲನೆ ಮಾಡಿದರು.
        ಸಮಾರಂಭದಲ್ಲಿ ಮೀಂಜ ಗ್ರಾ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷರಾದ ಸರಸ್ವತಿ, ರುಕಿಯಾ ಸಿದ್ದಿಕ್, ಸದಸ್ಯರಾದ ಬಾಬು, ಕುಸುಮಾಮೋಹನ್, ಚಂದ್ರಶೇಖರ್ ಕೋಡಿ, ಜನಾರ್ದನ ಪೂಜಾರಿ, ಅಬ್ದುಲ್ ರಝಾಕ್, ಮೀಂಜ ಗ್ರಾಮ ಪಂಚಾಯತಿ ಕಾರ್ಯದರ್ಶಿ  ನಂದಗೋಪಾಲ್, ಆರೋಗ್ಯಾಧಿಕಾರಿ ಡಾ.ಪ್ರಭಾಕರ್ ರೈ, ಮಂಜೇಶ್ವರ ಪೋಲೀಸ್ ಠಾಣಾಧಿಕಾರಿ ಸಂತೋμï ಕುಮಾರ್ ಎ, ಮಜಿಬೈಲ್ ಸೆವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಂ.ಸಂಜೀವ ಶೆಟ್ಟಿ, ಮಂಜೇಶ್ವರ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಬಿ.ವಿ.ರಾಜನ್, ಯೋಜನಾಧಿಕಾರಿ ಮುಖೇಶ್, ಬಿ.ಪಿ.ಸಿ ವಿಜಯ ಕುಮಾರ್, ಪಿಟಿಎ ಅದ್ಯಕ್ಷರಾದ ಜನಾರ್ದನ ಮತ್ತು ಕೃಷ್ಣಪ್ರಸಾದ್, ಎಸ್ಪಿಜಿ ಕನ್ವಿನರ್ ಪುಷ್ಪರಾಜ ಶೆಟ್ಟಿ ಶುಭಾಶಂಸನೆಗೈದರು. ಉಪಜಿಲ್ಲಾ ಕಲೋತ್ಸವದ ಪ್ರಧಾನ ಸಂಚಾಲಕ, ಮುಖ್ಯೋಪಾಧ್ಯಾಯ ಶಿವಶಂಕರ ಭಟ್ ಸ್ವಾಗತಿಸಿ, ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ದಿನೇಶ ವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಾಲಕೃಷ್ಣ ಮುಜುಕುಮೂಲೆ ಕಾರ್ಯಕ್ರಮ ನಿರೂಪಿಸಿದರು.  ಪ್ರಾಂಶುಪಾಲ ರಮೇಶ್  ವಂದಿಸಿದರು.


          ಖಾದ್ಯ ವಿಶೇಷ:ಶುಕ್ರವಾರದ ವರೆಗೆ ನಡೆಯಲಿರುವ ಸಮಾರಂಭದಲ್ಲಿ ಬೆಳಗ್ಗಿನ ತಿಂಡಿ, ಮದ್ಯಾಹ್ನದ  ಭೋಜನ ಮತ್ತು ಸಂಜೆಯ ಚಹಾ ಎಲ್ಲರಿಗೂ ಉಚಿತವಾಗಿ ನೀಡಲಾಗುವುದು.ಪ್ರತಿದಿನ ಸುಮಾರು ಎರಡು ಸಾವಿರ ಸ್ಪರ್ಧಾಳುಗಳಿಗೆ  ಸಾವಿರದಷ್ಟು ಅಧ್ಯಾಪಕರಿಗೆ ಮತ್ತು ಊರವರಿಗೆ ಭೋಜನ ಮತ್ತು ತಿಂಡಿಯ ವ್ಯವಸ್ಥೆ ಮಾಡಲಾಗಿದೆ. ವೆಜಿಟೇಬಲ್ ಪುಲಾವು,ಇಡ್ಲಿವಡ ಸಾಂಬಾರ್ ಚಟ್ಟಂಬಡೆ, ಸೆಟ್ ದೋಸೆ, ಸಾರು-ಸಂಬಾರ್ , ಮೇಲೋಗರ, ಪ್ರತಿ ದಿನ ಪ್ರತ್ಯೇಕ ಪಾಯಸ ಇಲ್ಲಿಯ ವಿಶೇಷವಾಗಿದೆ. ಶ್ರೀ ಕೃಷ್ಣ ಕೇಟರರ್ಸ್ ಮಿಯಪದವು ಆಹಾರ ಸಿದ್ದಪಡಿಸುವಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.


 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


Qries