HEALTH TIPS

ದೇಶದ ಮೊದಲ ಖಾಸಗಿ ರಾಕೆಟ್ ವಿಕ್ರಮ್-ಎಸ್ ಉಡಾವಣೆ

 

          ಚೆನ್ನೈ: ಹೈದರಾಬಾದ್ ಮೂಲದ ಸ್ಟಾರ್ಟಪ್ ಕಂಪನಿ ಅಭಿವೃದ್ಧಿಪಡಿಸಿರುವ ದೇಶದ ಮೊದಲ ಖಾಸಗಿ ರಾಕೆಟ್ ವಿಕ್ರಮ್-ಎಸ್ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಶ್ರೀಹರಿಕೋಟಾದ ಸತೀಶ ಧವನ್ ಉಡ್ಡಯನ ಕೇಂದ್ರದಿಂದ ಬೆಳಿಗ್ಗೆ 11.30ರ ಸುಮಾರಿಗೆ ಉಡಾವಣೆಗೊಂಡಿದೆ.

              ಭಾರತೀಯ ಬಾಹ್ಯಾಕಾಶ ವಿಜ್ಞಾನದ ಪಿತಾಮಹ, ದಿವಂಗತ ವಿಕ್ರಮ್ ಸಾರಾಭಾಯ್ ಅವರ ಗೌರವಾರ್ಥವಾಗಿ ರಾಕೆಟ್‌ಗೆ ವಿಕ್ರಮ್-ಎಸ್ ಎಂದು ಹೆಸರಿಡಲಾಗಿದೆ.

               ನಾಲ್ಕು ವರ್ಷ ಹಿಂದೆ ಆರಂಭವಾಗಿದ್ದ ಸ್ಟಾರ್ಟಪ್ ಸ್ಕೈರೂಟ್ ಏರೋಸ್ಪೇಸ್ ಚೊಚ್ಚಲ ವಿಕ್ರಮ್-ಎಸ್ ರಾಕೆಟ್‌ ಅನ್ನು ಅಭಿವೃದ್ಧಿಪಡಿಸಿದೆ. ಇದು ದೇಶದ ಬಾಹ್ಯಾಕಾಶ ಉದ್ಯಮಕ್ಕೆ ಖಾಸಗಿ ವಲಯದ ಮೊದಲ ಸೇರ್ಪಡೆಯಾಗುವ ಮೂಲಕ ಇತಿಹಾಸ ಬರೆದಿದೆ.

                ಈ ಮಿಷನ್‌ಗೆ 'ಪ್ರಾರಂಭ'ಎಂದು ಹೆಸರಿಡಲಾಗಿದೆ. ಸ್ಪೇಸ್ ಕಿಡ್ಸ್ ಇಂಡಿಯಾ, ಎನ್‌-ಸ್ಪೇಸ್ ಟೆಕ್ ಇಂಡಿಯಾ ಮತ್ತು ಅರ್ಮೇನಿಯಾದ ಬಜೂಮ್ಕ್‌ನ ತಲಾ ಒಂದು ಮಾದರಿಯನ್ನು ಈ ರಾಕೆಟ್ ಕೊಂಡೊಯ್ದಿದೆ.

             2018 ರಲ್ಲಿ ಇಸ್ರೋದ ಮಾಜಿ ವಿಜ್ಞಾನಿಗಳಾದ ಪವನ್ ಕುಮಾರ್ ಚಂದನ ಮತ್ತು ನಾಗಾ ಭಾರತ್ ಡಾಕಾ ಅವರು ಸ್ಥಾಪಿಸಿದ ಹೈದರಾಬಾದ್ ಮೂಲದ ಸ್ಟಾರ್ಟ್-ಅಪ್ ಸ್ಕೈರೂಟ್ ಏರೋಸ್ಪೇಸ್, ಇಂಗಾಲದ ಸಂಯೋಜಿತ ರಚನೆಗಳು ಮತ್ತು 3ಡಿ-ಮುದ್ರಿತ ಘಟಕಗಳಂತಹ ಸುಧಾರಿತ ತಂತ್ರಜ್ಞಾನಗಳನ್ನು ಬಳಸಿಕೊಂಡು ಎರಡು ವರ್ಷಗಳಲ್ಲಿ ವಿಕ್ರಮ್-ಎಸ್ ರಾಕೆಟ್ ಅನ್ನು ಅಭಿ


ವೃದ್ಧಿಪಡಿಸಿದೆ.

                 ಅತ್ಯಾಧುನಿಕ ಏವಿಯಾನಿಕ್ಸ್ ಮತ್ತು ಆಲ್-ಕಾರ್ಬನ್ ಫೈಬರ್ ಕೋರ್ ರಚನೆಯನ್ನು ಹೊಂದಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries