HEALTH TIPS

ಪ್ರಾದೇಶಿಕ ಭಾಷೆಯಲ್ಲಿ ಎಂಬಿಬಿಎಸ್ ಜ್ಞಾನ ಸೀಮಿತ: ವೈದ್ಯರು

 

             ನವದೆಹಲಿ: ಹಿಂದಿಯಲ್ಲಿ ವೈದ್ಯಕೀಯ ಶಿಕ್ಷಣ ನೀಡುವ ಮಧ್ಯಪ್ರದೇಶ ಸರ್ಕಾರದ ನಿರ್ಧಾರ ಆರಂಭದಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗೆ ನೆರವಾಗಬಹುದು. ಆದರೆ, ಅವರ ಬೆಳವಣಿಗೆ ಮತ್ತು ಜ್ಞಾನದ ವ್ಯಾಪ್ತಿ ಸೀಮಿತಗೊಳಿಸುತ್ತದೆ ಎಂದು ಹಲವು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

               ಹಿಂದಿಯಲ್ಲಿ ವೈದ್ಯಕೀಯ ಶಿಕ್ಷಣ ನೀಡುವ ಮಧ್ಯಪ್ರದೇಶ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಭಾಗವಾಗಿ ಎಂಬಿಬಿಎಸ್ ಕೋರ್ಸ್‌ನ ಮೊದಲ ವರ್ಷದ ವಿದ್ಯಾರ್ಥಿಗಳಿಗೆ ಹಿಂದಿಯಲ್ಲಿ ಮೂರು ವಿಷಯಗಳ ಪಠ್ಯಪುಸ್ತಕಗಳನ್ನು ಅಕ್ಟೋಬರ್‌ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಬಿಡುಗಡೆ ಮಾಡಿದ್ದರು.

                    ದೇಶದ ಇತರೆ ಎಂಟು ಭಾಷೆಗಳಲ್ಲಿ ತಾಂತ್ರಿಕ ಮತ್ತು ವೈದ್ಯಕೀಯ ಶಿಕ್ಷಣ ಪ್ರಾರಂಭಿಸುವ ಕೆಲಸ ನಡೆಯುತ್ತಿದೆ. ದೇಶಾದಾದ್ಯಂತ ವಿದ್ಯಾರ್ಥಿಗಳು ತಮ್ಮ ಭಾಷಾ ಕೀಳರಿಮೆಯಿಂದ ಹೊರಬಂದು ತಮ್ಮ ಭಾಷೆಯಲ್ಲಿ ಸಾಮರ್ಥ್ಯ ಪ್ರದರ್ಶಿಸಬೇಕು ಎಂದು ಶಾ ಪ್ರತಿಪಾದಿಸಿದ್ದರು.

                  ಭಾರತೀಯ ವೈದ್ಯಕೀಯ ಸಂಘದ ಮಾಜಿ ರಾಷ್ಟ್ರೀಯ ಅಧ್ಯಕ್ಷ ಡಾ.ಜೆ.ಎ.ಜಯಲಾಲ್ ಈ ಬಗ್ಗೆ ಪ್ರತಿಕ್ರಿಯಿಸಿ, 'ವಿದ್ಯಾರ್ಥಿಗಳ ಸಾಮರ್ಥ್ಯ 'ವರ್ಧಿಸುತ್ತವೆ' ಎಂದು ಶಾ ಹೇಳಿರಬಹುದು. ಆದರೆ, ಇದಕ್ಕೆ ವ್ಯತಿರಿಕ್ತವಾಗಿ ಅವರ ಬೆಳವಣಿಗೆ ತಡೆಯಬಹುದು' ಎಂದರು.

                  'ಆಧುನಿಕ ಔಷಧದ ಬಗ್ಗೆ ಮಾತನಾಡುತ್ತಿದ್ದೇವೆ, ಇದು ಸಾರ್ವತ್ರಿಕ ಔಷಧ. ಇದು ಭಾರತದಲ್ಲಿ ಮಾತ್ರವಲ್ಲ, ಪ್ರಪಂಚದಾದ್ಯಂತ ಆಚರಣೆಯಲ್ಲಿದೆ. ಪ್ರಾದೇಶಿಕ ಭಾಷೆಯಲ್ಲಿ ತರಬೇತಿ ಪಡೆದಿದ್ದರೆ, ಜ್ಞಾನ ಮತ್ತು ಕೌಶಲಗಳನ್ನು ಅಧ್ಯಯನ ಮಾಡಲು ಹೊರಗೆ ಹೋಗುವುದನ್ನು ನಿರೀಕ್ಷಿಸಲು ಸಾಧ್ಯವಿಲ್ಲ' ಎಂದು ಜಯಲಾಲ್ ಸುದ್ದಿ ಸಂಸ್ಥೆಗೆ ತಿಳಿಸಿದರು.

               ಪಠ್ಯಪುಸ್ತಕ ಮೂಲಕ ವೈದ್ಯಕೀಯ ಶಿಕ್ಷಣ ಕಲಿಸಲು ಸಾಧ್ಯವಿಲ್ಲ. ಇಂಗ್ಲಿಷ್‌ನಲ್ಲಿರುವ ಅಂತರರಾಷ್ಟ್ರೀಯ ಸಂಶೋಧನಾ ಪ್ರಬಂಧಗಳು, ನಿಯತಕಾಲಿಕೆಗಳು ಮತ್ತು ಲೇಖನಗಳನ್ನು ಆಗಾಗ್ಗೆ ಓದುವ ಅಗತ್ಯವಿದೆ ಎಂದು ಹೇಳಿದರು.

             ತಮಿಳುನಾಡಿನಲ್ಲಿ ತಮಿಳು ಭಾಷೆಯಲ್ಲೇ ಎಂಬಿಬಿಎಸ್‌ ಶಿಕ್ಷಣ ನೀಡಲು ಸಿದ್ಧತೆ ನಡೆದಿದೆ ಎಂದು ಉನ್ನತ ಶಿಕ್ಷಣ ಸಚಿವ ಕೆ.ಪೊನ್ನುಮುಡಿ ಹೇಳಿದ್ದರು. ಸ್ಥಳೀಯ ಭಾಷೆಯಲ್ಲಿ ಎಂಬಿಬಿಎಸ್ ಶಿಕ್ಷಣ ನೀಡುವುದರ ಬದಲಿಗೆ ಶಾಲಾ ಶಿಕ್ಷಣದ ಮೂಲಸೌಲಭ್ಯವನ್ನು ಸುಧಾರಿಸುವತ್ತ ಸರ್ಕಾರ ಗಮನ ಹರಿಸಬೇಕು ಎಂದು ಐಎಂಎ ರಾಷ್ಟ್ರೀಯ ಕಾರ್ಯದರ್ಶಿ ಕರಣ್‌ ಜುನೇಜಾ ಅಭಿಪ್ರಾಯಪಟ್ಟಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


Qries