HEALTH TIPS

ಸ್ನೇಹಾಲಯಕ್ಕೆ ಕೆನರಾ ಕಾಲೇಜು ವಿದ್ಯಾರ್ಥಿಗಳ ಭೇಟಿ: ಅವಿಸ್ಮರಣೀಯವಾದ ಮಕ್ಕಳ ಕಲರವ


          ಮಂಜೇಶ್ವರ: ತಲಪ್ಪಾಡಿ ಬಾಚಳಿಕೆಯಲ್ಲಿರುವ 'ಸ್ನೇಹಾಲಯ'  ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರದಲ್ಲಿ ಮಂಗಳೂರು ಕೆನರಾ ಕಾಲೇಜು ವಿದ್ಯಾರ್ಥಿಗಳು ವಿಸ್ತರಣಾ ಚಟುವಟಿಕೆ ಕಾರ್ಯಕ್ರಮಗಳ ಅಂಗವಾಗಿ ನಡೆಸಿದ ವಿಶೇಷ ಭೇಟಿಯು ಗಮನೀಯವಾಯಿತು. ಕೆನರಾ ಕಾಲೇಜು ಕನ್ನಡ ವಿಭಾಗದ 25 ರಷ್ಟು ಮಂದಿ ವಿದ್ಯಾರ್ಥಿಗಳು ವಿಭಾಗ ಮುಖ್ಯಸ್ಥೆ ವಾಣಿ ಯು.ಎಸ್ ಅವರ ನೇತೃತ್ವದಲ್ಲಿ ಕನಕದಾಸ ಜಯಂತಿಯಂದು ಸ್ನೇಹಾಲಯ ಸಂದರ್ಶನ ಕಾರ್ಯಕ್ರಮ ನಡೆಸಿದರು.
           ಮಾನಸಿಕ ಅಸ್ವಸ್ಥರಾದ ಅಲ್ಲಿನ ನಿವಾಸಿಗಳ ಜತೆ ಬೆರೆತು ಸ್ನೇಹ ಹಂಚಿಕೊಂಡರಲ್ಲದೆ ಸಂಗೀತ, ನೃತ್ಯ, ಪ್ರಹಸನ, ಹಾಸ್ಯ ಕಾರ್ಯಕ್ರಮಗಳ  ಮೂಲಕ ರಂಜಿಸಿದರು. ನಿವಾಸಿಗಳು ಕೂಡಾ ಆಡಿ ಹಾಡಿ ಕುಣಿದು ಕುಪ್ಪಳಿಸಿದರು.
         ಸ್ನೇಹಾಲಯದ ನಿರ್ದೇಶಕಿ ಒಲಿವಿಯ ಕ್ರಾಸ್ತಾ, ಆಡಳಿತಾಧಿಕಾರಿಣಿ ಸವಿತಾ ಹಾಗೂ ಸಿಬ್ಬಂದಿಗಳು ವಿದ್ಯಾರ್ಥಿಗಳನ್ನು ಬರಮಾಡಿಕೊಂಡರು. ಸ್ಥಾಪಕ ಹಾಗೂ ಆಡಳಿತ ನಿರ್ದೇಶಕ ಜೋಸೆಫ್ ಕ್ರಾಸ್ತಾ ಅವರು ಸಂಸ್ಥೆಯ 13 ವರ್ಷಗಳ ಬೆಳವಣಿಗೆಯ ಬಗ್ಗೆ ಮಾಹಿತಿಯಿತ್ತರಲ್ಲದೆ ವಿದ್ಯಾರ್ಥಿಗಳು ಸೇವಾ ಮನೋಭಾವ ಮೈಗೂಡಿಸಬೇಕೆಂದು ಕರೆ ನೀಡಿದರು. ಪತ್ರಕರ್ತ ರವಿ ನಾಯ್ಕಾಪು, ಹಿರಿಯ ನ್ಯಾಯವಾದಿ ಎಂ.ಎಸ್. ಥೋಮಸ್ ಡಿ ಸೋಜಾ, ನಟ ಶೋಭಿತ್ ಮೊದಲಾದವರು ಭಾಗವಹಿಸಿ ವಿದ್ಯಾರ್ಥಿಗಳಿಗೆ ಉಪಯುಕ್ತ ಮಾಹಿತಿ ನೀಡಿದರು. ದಿನಪೂರ್ತಿ ಸ್ನೇಹಾಲಯದಲ್ಲಿ ಕಳೆದ ವಿದ್ಯಾರ್ಥಿಗಳು ತಮ್ಮ ಅವಿಸ್ಮರಣೀಯ ಅನುಭವವನ್ನು ಹಂಚಿಕೊಂಡರು.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries