HEALTH TIPS

ಕಾಶಿ-ತಮಿಳು ಸಮಾಗಮ ಕಾರ್ಯಕ್ರಮಕ್ಕೆ ಚಾಲನೆ ನೀಡಲಿರುವ ಮೋದಿ

 

               ವಾರಾಣಸಿ: ಪ್ರಧಾನಿ ನರೇಂದ್ರ ಮೋದಿ ಶನಿವಾರ ಕಾಶಿ-ತಮಿಳು ಸಮಾಗಮ ಕಾರ್ಯಕ್ರಮಕ್ಕೆ ಔಪಚಾರಿಕ ಚಾಲನೆ ನೀಡಲಿದ್ದಾರೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

                ಒಂದು ತಿಂಗಳ ಕಾಲ ನಡೆಯುವ ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಲಿದ್ದಾರೆ.

ಸ್ವಕ್ಷೇತ್ರದಲ್ಲಿ ಪ್ರಧಾನಿ 3 ಗಂಟೆಗಳ ಕಾಲ ಇರಲಿದ್ದಾರೆ ಎಂದು ಮಹಾನಗರ್‌ ಅಧ್ಯಕ್ಷ ವಿದ್ಯಾಸಾಗರ್‌ ರೈ ಹೇಳಿದ್ದಾರೆ.

                 ಬನಾರಸ್‌ ವಿಶ್ವವಿದ್ಯಾಲಯದ ಬಯಲು ರಂಗಮಂದಿರದ ಮೈದಾನದಲ್ಲಿ ಪ್ರಧಾನಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಇದು ಕೇಂದ್ರ ಸರ್ಕಾರದ 'ಆಜಾದಿ ಕ ಅಮೃತ್‌ ಮಹೋತ್ಸವ್‌' ಕಾರ್ಯಕ್ರಮದ ಭಾಗವಾಗಿದೆ.

              'ಒಂದು ಭಾರತ, ಶ್ರೇಷ್ಠ ಭಾರತ' ಎಂಬ ಉದ್ದೇಶದ ಕಾರ್ಯಕ್ರಮ ತಮಿಳು ಭಾಷೆ ಮತ್ತು ಸಂಸ್ಕೃತಿಯ ಅನಾವರಣವಾಗಿದೆ. ನ.17ರಿಂದ ಡಿ.16ರವರೆಗೆ ಕಾರ್ಯಕ್ರಮ ಜರುಗಲಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


Qries