HEALTH TIPS

ಮುಂಬೈಗೆ ಬಂದಿಳಿದ ತಿಮಿಂಗಿಲ ಆಕಾರದ ಬೃಹತ್ ವಿಮಾನ

 

        ಮುಂಬೈ: ತಿಮಿಂಗಿಲ ಆಕಾರದ ಏರ್‌ಬಸ್ ಬೆಲುಗಾ ಸೂಪರ್ ಟ್ರಾನ್ಸ್‌ಪೋರ್ಟರ್ ವಿಮಾನ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರರಾಷ್ಟ್ರೀಯ ವಿಮಾನ (ಸಿಎಎಸ್‌ಎಂಐಎ) ನಿಲ್ದಾಣಕ್ಕೆ ಬಂದಿಳಿಯಿತು.

          ಇದೇ ಮೊದಲ ಬಾರಿಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಏರ್‌ಬಸ್ ಬೆಲುಗಾ ಸೂಪರ್ ಟ್ರಾನ್ಸ್‌ಪೋರ್ಟರ್ ವಿಮಾನ ಬಂದಿಳಿದಿದೆ.

ವಿಮಾನದ ವಿಶಿಷ್ಟ ಆಕಾರವು ನೆರೆದಿದ್ದ ಪ್ರಯಾಣಿಕರ ಕಣ್ಮಣವನ್ನು ಸೆಳೆಯಿತು.

          ಈ ವಿಮಾನವು ಮುಂಭಾಗದಲ್ಲಿ ಬೆಲುಗಾ ತಿಮಿಂಗಿಲದ ಮೂತಿಯ ಆಕಾರವನ್ನು ಹೊಂದಿದ್ದು, ವಿಶ್ವದ ಅತಿದೊಡ್ಡ ಸರಕು ವಿಮಾನಗಳಲ್ಲಿ ಒಂದಾಗಿದೆ. ಮಂಗಳವಾರ ಮುಂಬೈಯಲ್ಲಿ ಭೂಸ್ಪರ್ಶ ಮಾಡಿದೆ ಎಂದು ಸಿಎಸ್‌ಎಂಐಎ ಟ್ವೀಟ್ ಮೂಲಕ ತಿಳಿಸಿದೆ.  


            ಬಾಹ್ಯಾಕಾಶ, ಮಿಲಿಟರಿ, ಏರೋನಾಟಿಕ್ಸ್, ಸಮುದ್ರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸರಕು ಸಾಗಣೆಗೆ ಏರ್‌ಬಸ್ ಬೆಲುಗಾ ನೆರವಾಗುತ್ತದೆ.

             ಏರ್‌ಬಸ್ ಪ್ರಕಾರ ಈ ವಿಮಾನವು 56 ಮೀಟರ್ ಉದ್ದ ಮತ್ತು 45 ಮೀಟರ್ ಅಗಲವನ್ನು ಹೊಂದಿದೆ. ನವೆಂಬರ್ 20ರಂದು ಏರ್‌ಬಸ್ ಬೆಲುಗಾ ಸೂಪರ್ ಟ್ರಾನ್ಸ್‌ಪೋರ್ಟರ್ ವಿಮಾನ ಕೋಲ್ಕತ್ತ ವಿಮಾನ ನಿಲ್ದಾಣಕ್ಕೆ ಬಂದಿಳಿದಿತ್ತು.

Look who made a pitstop at @CSMIA_Official! The Airbus Beluga Super Transporter made its first appearance at #MumbaiAirport and left us all awestruck. Tell us what you think of its unique design. #GatewayToGoodness #Beluga #Aviation #PlaneSpotting #AviationDaily #Airbus
Image
Image
Image
Image

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


Qries