HEALTH TIPS

ರಾಜ್ಯ ಶಾಲಾ ಕಲೋತ್ಸವ ಕೋಝಿಕ್ಕೋಡ್ ನಲ್ಲಿ ಭರದ ಸಿದ್ದತೆ: ಈ ಬಾರಿ ಐದು ದಿನ


            ಕೋಝಿಕ್ಕೋಡ್: 61ನೇ ರಾಜ್ಯ ಮಟ್ಟದ ಶಾಲಾ ಕಲಾ ಉತ್ಸವಕ್ಕೆ ಕೋಝಿಕ್ಕೋಡ್ ಮುಂದಿನ ವರ್ಷದ ಆರಂಭದಲ್ಲಿ ಸ್ವಾಗತಿಸಲಿದೆ. ಜನವರಿ 3 ರಿಂದ 7 ರವರೆಗೆ ರಾಜ್ಯಮಟ್ಟದ ಪ್ರಸ್ತುತ ಸಾಲಿನ ಶಾಲಾ ಕಲೋತ್ಸವ ಕೋಝಿಕ್ಕೋಡ್ ವೆಸ್ಟ್ ಹೀಲ್‍ನಲ್ಲಿರುವ ವಿಕ್ರಮ್ ಮೈದಾನ ಕೇಂದ್ರವಾಗಿ ನಡೆಯಲಿದೆ.  ಕೋವಿಡ್ -19 ಸಾಂಕ್ರಾಮಿಕ ರೋಗದ ನಂತರ ಎರಡು ವರ್ಷಗಳ ತರುವಾಯ ರಾಜ್ಯ ಶಾಲಾ ಕಲೋತ್ಸವವನ್ನು ಆಯೋಜಿಸಲಾಗಿದೆ.
            ಪ್ರಮುಖ ಸ್ಥಳ ವಿಕ್ರಮ್ ಮೈದಾನ ಸೇರಿದಂತೆ 25 ವೇದಿಕೆಗಳನ್ನು ಕಾರ್ಯಕ್ರಮಗಳಿಗಾಗಿ ಸಿದ್ಧಪಡಿಸಲಾಗುತ್ತಿದೆ. ಶಿಕ್ಷಣ ಸಚಿವ ವಿ.ಶಿವನ್ ಕುಟ್ಟಿ ಅಧ್ಯಕ್ಷತೆಯಲ್ಲಿ            ಸ್ವಾಗತ ಸಮಿತಿ ರಚಿಸಲಾಯಿತು. ರಾಜ್ಯದ ವಿವಿಧ ಶಾಲೆಗಳ ಸುಮಾರು 14 ಸಾವಿರ ವಿದ್ಯಾರ್ಥಿಗಳು ಕಲೋತ್ಸವದಲ್ಲಿ ಭಾಗವಹಿಸಲಿದ್ದಾರೆ. ವೇದಿಕೆಗಳ ಸಂಖ್ಯೆ ಹೆಚ್ಚಳದಿಂದ ಈ ಬಾರಿ ಐದೇ ದಿನಗಳಲ್ಲಿ ಕಲೋತ್ಸವಕ್ಕೆ ತೆರೆ ಬೀಳಲಿದೆ. ಕಲೋತ್ಸವ ವಿಜೇತರಿಗೆ ಬಹುಮಾನದ ಮೊತ್ತವನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ.
            2019ರಲ್ಲಿ ಕೊನೆಯ ಬಾರಿಗೆ ರಾಜ್ಯ ಶಾಲಾ ಕಲೋತ್ಸವ ನಡೆದಿತ್ತು. 60ನೇ ಶಾಲಾ ಕಲೋತ್ಸವ  ಕಾಸರಗೋಡು ಜಿಲ್ಲೆಯಲ್ಲಿ 2019 ರಲ್ಲಿ ನಡೆದಿರುವುದು ಇತಿಹಾಸ ನಿರ್ಮಿಸಿತ್ತು.  ಕಾಞಂಗಾಡಿನಲ್ಲಿ ಕಾರ್ಯಕ್ರಮಗಳು ನಡೆದವು. ಪಾಲಕ್ಕಾಡ್ ಜಿಲ್ಲೆ 951 ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆದಿತ್ತು. ಕಣ್ಣೂರು ಮತ್ತು ಕೋಝಿಕ್ಕೋಡ್ ಎರಡನೇ ಸ್ಥಾನ ಹಂಚಿಕೊಂಡಿದ್ದವು. ಇದೇ ವೇಳೆ ರಾಜ್ಯ ಶಾಲಾ ಕಲೋತ್ಸವಕ್ಕೂ ಮುನ್ನ ಉಪಜಿಲ್ಲಾ ಹಾಗೂ ಜಿಲ್ಲಾ ಸ್ಪರ್ಧೆಗಳನ್ನು ಇದೇ 30ರೊಳಗೆ ಮುಗಿಸುವಂತೆ ಸೂಚಿಸಲಾಗಿದೆ. ಡಿಸೆಂಬರ್ 3 ರಿಂದ 6 ರವರೆಗೆ ತಿರುವನಂತಪುರದಲ್ಲಿ ರಾಜ್ಯ ಶಾಲಾ ಕ್ರೀಡೋತ್ಸವ ನಡೆಯಲಿದೆ. 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


Qries