HEALTH TIPS

ಸಮಾಜವಿರೋಧಿಗಳ ಚೇಷ್ಠೆಗಳ ಮುಂದುವರಿಕೆ: ವಡಕ್ಕುಂನಾಥ ದೇವಸ್ಥಾನದ ದಕ್ಷಿಣ ಗೋಪುರಕ್ಕೆ ಕಬ್ಬಿಣದ ಬೇಲಿ

            
             ತ್ರಿಶೂರ್: ತ್ರಿಶೂರ್ ವಡಕ್ಕುಂನಾಥ ದೇವಸ್ಥಾನದ ದಕ್ಷಿಣ ಗೋಪುರದ ಭದ್ರತೆಯನ್ನು ದೇವಸ್ಥಾನ ಸಲಹಾ ಸಮಿತಿ ಹೆಚ್ಚಿಸಿದೆ.
          ಕಬ್ಬಿಣದ ಬೇಲಿಯಿಂದ ರಕ್ಷಿಸಲಾಗಿದೆ. ಸಮಾಜವಿರೋಧಿಗಳ ದಾಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದೇವಸ್ಥಾನ ಈ ನಿರ್ಧಾರ ಕೈಗೊಂಡಿದೆ.
        ತೇಕಿಂಕಡ್ ಮೈದಾನಕ್ಕೆ ಬರುವವರು ದಕ್ಷಿಣ ಗೋಪುರದ ಗೋಡೆಗಳಲ್ಲಿ ಹೆಸರುಗಳ ಕೆತ್ತನೆ ಮತ್ತು ಚಿತ್ರಗಳನ್ನು ಬಿಡಿಸುವ ಮೂಲಕ ಕಾಲ ಕಳೆಯುವ ಘಟನೆಗಳನ್ನು ಅನುಸರಿಸಿ ಈ ಕ್ರಮ ಕೈಗೊಳ್ಳಲಾಗಿದೆ. ಸಾವಿರಾರು ವರ್ಷಗಳಷ್ಟು ಹಳೆಯದಾದ, ಯುನೆಸ್ಕೋ ಪಾರಂಪರಿಕ ಪಟ್ಟಿಗೆ ಸೇರ್ಪಡೆಗೊಂಡಿರುವ ದೇವಾಲಯದ ಗೋಪುರವನ್ನು ಉಳಿಸಲು ಬೇರೆ ದಾರಿ ಇಲ್ಲದ ಕಾರಣ ಈ ಕ್ರಮ ಕೈಗೊಳ್ಳುತ್ತಿರುವುದಾಗಿ ಸಲಹಾ ಸಮಿತಿ ತಿಳಿಸಿದೆ.
       ಪುರಾತತ್ವ ಇಲಾಖೆಯ ನಿಯಂತ್ರಣದಲ್ಲಿರುವ ದೇವಾಲಯದ ಗೋಪುರಗಳು ಅನೇಕ ಪ್ರಾಚೀನ ಶಿಲ್ಪಗಳನ್ನು ಹೊಂದಿವೆ. ಅವುಗಳ ಸುಸೂತ್ರ ಉಳಿಯುವಿಕೆ-ನಿರ್ವಹಣೆಗೆ ಕಬ್ಬಿಣದ ಬೇಲಿ ಅಳವಡಿಸಲಾಗಿದೆ. ಈ ಕಬ್ಬಿಣದ ಬೇಲಿಗಳನ್ನು ಅಗತ್ಯವಿದ್ದಾಗ ತೆರೆಯಬಹುದಾಗಿದೆ. ಇನ್ನೂ ಗೋಡೆ ಬರಹ ಮುಂದುವರಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೆÇಲೀಸರು ಮಾಹಿತಿ ನೀಡಿದ್ದಾರೆ. ಸಮಾಜಘಾತುಕರನ್ನು ಪತ್ತೆ ಹಚ್ಚಲು ಸಿಸಿಟಿವಿ ಕ್ಯಾಮೆರಾಗಳನ್ನೂ ಅಳವಡಿಸಲಾಗಿದೆ.     



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries